ತಿರುವನಂತಪುರಂ: Man Completed 145 Degrees In Lockdown - 2020 ರಲ್ಲಿ ಕರೋನಾ ಸಾಂಕ್ರಾಮಿಕ (Corona Pandemic) ವಕ್ಕರಿಸಿದಾದ, ವಿಧಿಸಲಾದ ಲಾಕ್‌ಡೌನ್‌ನಿಂದಾಗಿ ಅನೇಕ ಜನರು ಅಸಮಾಧಾನಗೊಂಡಿದ್ದರು ಮತ್ತು ಹತಾಶರಾಗಿದ್ದರು. ಆದರೆ ಈ ದುರಂತದ ಸನ್ನಿವೇಶದಲ್ಲಿಯೂ ಕೂಡ ಕೆಲವರಿಗೆ ಹಲವು ಅವಕಾಶಗಳು ಲಭಿಸಿವೆ. ಕೇರಳದ (Kerala) ತಿರುವನಂತಪುರಂನಲ್ಲಿ ವಾಸಿಸುವ ಓರ್ವ ವ್ಯಕ್ತಿಗೆ, ಸಾಂಕ್ರಾಮಿಕ ಕಾಲವು ಒಂದು ಅವಕಾಶವನ್ನೇ ನೀಡಿದೆ. ಲಾಕ್‌ಡೌನ್ (Lockdown) ಅವಧಿಯಲ್ಲಿ, ಈ ವ್ಯಕ್ತಿಯು ತನ್ನ ಅಧ್ಯಯನವನ್ನು ಮುಂದುವರೆಸಿ, 145 ಕೋರ್ಸ್‌ಗಳನ್ನು ಪೂರ್ಣ ಗೊಳಿಸಿದ್ದಾರೆ. ಇವುಗಳಲ್ಲಿ ಹೆಚ್ಚಿನ ಕೋರ್ಸ್‌ಗಳು ವೈದ್ಯಕೀಯ ವಲಯಕ್ಕೆ ಸಂಬಂಧಿಸಿದ್ದಾಗಿವೆ.ಶಫಿ ವಿಕ್ರಮನ್ (Shafi Vikraman) ವಿವಿಧ ವೇದಿಕೆಗಳಿಂದ ಆಯೋಜಿಸಲಾದ ವರ್ಚುವಲ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐವಿ ಲೀಗ್ ಕಾಲೇಜುಗಳು ಕೂಡ ಇದರಲ್ಲಿ ಶಾಮೀಲಾಗಿವೆ.


COMMERCIAL BREAK
SCROLL TO CONTINUE READING

ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ನಡೆಸಿದ ಸಂವಾದದಲ್ಲಿ ಮಾತನಾಡಿರುವ ಶಫಿ, 'ಆರಂಭದಲ್ಲಿ ನಾನು ಮಾರ್ಕೆಟಿಂಗ್ ಕೋರ್ಸ್‌ಗಳನ್ನು ಮಾಡಲು ಬಯಸಿದ್ದೆ. ಆದರೆ ಕೊನೆಯಲ್ಲಿ ಈ ಪ್ರಯಾಣವು ವೈದ್ಯಕೀಯಕ್ಕೆ ಸಂಬಂಧಿಸಿದ ಕೋರ್ಸ್‌ಗಳೊಂದಿಗೆ ಪೂರ್ಣಗೊಂಡಿತು. ಯೇಲ್ ವಿಶ್ವವಿದ್ಯಾಲಯದಲ್ಲಿ ಓದುವುದು ಪ್ರತಿಯೊಬ್ಬರ ಕನಸು. ಇಂದು ನಾನು ಈ ವಿಶ್ವವಿದ್ಯಾಲಯದಿಂದ ಪ್ರಮಾಣೀಕರಣ ಕೋರ್ಸ್‌ಗಳನ್ನು ಹೊಂದಿದ್ದೇನೆ. ಈ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡಲು ನಾನು ಎಷ್ಟು ಉತ್ಸುಕನಾಗಿದ್ದೆ ಎಂದು ಹೇಳಲು ಸಾಧ್ಯವಿಲ್ಲ. ಲಾಕ್‌ಡೌನ್ ಸಮಯದಲ್ಲಿ, ನಾನು ಸುಮ್ಮನೆ ಕುಳಿತುಕೊಳ್ಳಲು ಬಯಸಲಿಲ್ಲ, ಆದ್ದರಿಂದ ನಾನು ಜುಲೈ 2020 ರಲ್ಲಿ ವಿವಿಧ ಆನ್‌ಲೈನ್ ಕೋರ್ಸ್‌ಗಳಿಗೆ ನೋಂದಾಯಿಸಿಕೊಂಡಿದ್ದೇನೆ' ಎಂದು ಶಫಿ ಹೇಳಿದ್ದಾರೆ. 


ಶಫಿ ವಿಕ್ರಮನ್ ಅವರು ಪ್ರಿನ್ಸ್‌ಟನ್, ಯೇಲ್, ಕೊಲಂಬಿಯಾ, ವಾರ್ಟನ್‌ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿದ ಕೋರ್ಸ್‌ಗಳ ದೀರ್ಘ ಪಟ್ಟಿಯನ್ನು ಹೊಂದಿದ್ದಾರೆ. ಈ ಹೆಚ್ಚಿನ ಕೋರ್ಸ್‌ಗಳಿಗೆ, ಶಫಿ ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ತೋರಿದ್ದರು. ಇವುಗಳಲ್ಲಿ ಮನೋವಿಜ್ಞಾನ, ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್, ಕ್ರಿಪ್ಟೋಕರೆನ್ಸಿ, ಫೋರೆನ್ಸಿಕ್ಸ್, ಆಹಾರ, ಪಾನೀಯ ನಿರ್ವಹಣೆ ಮತ್ತು ಹಣಕಾಸುಗೆ ಸಂಬಂಧಿಸಿದ ಕೋರ್ಸ್ಗಳು ಕೂಡ ಶಾಮೀಲಾಗಿವೆ. 


ಇದನ್ನೂ ಓದಿ-Good News: ಬ್ಯಾಂಕ್ ಗ್ರಾಹಕರಿಗೊಂದು ಸಂತಸದ ಸುದ್ದಿ


ಆರಂಭದಲ್ಲಿ ಶಫಿ ಕೆಲಸ ಮುಗಿಸಿ ಸಂಜೆ 6ರಿಂದ ಬೆಳಗಿನ ಜಾವ 4ರವರೆಗೆ ಓದುತ್ತಿದ್ದರು. ಆದರೆ ಮುಂಚೂಣಿಯಲ್ಲಿರುವ ವಿದೇಶಿ ವಿನಿಮಯ ಕಂಪನಿಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಯನ್ನು ತೊರೆದ ನಂತರ ಅವರು ತಮ್ಮ ಸಂಪೂರ್ಣ ಗಮನವನ್ನು ತಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸಿದರು. ಅಧ್ಯಯನಕ್ಕಾಗಿ ಸಮಯದ ದೊಡ್ಡ ಸಮಸ್ಯೆ ಎದುರಾಗುತ್ತಿತ್ತು ಎಂದು ಶಫಿ ಹೇಳುತ್ತಾರೆ. ಹೀಗಾಗಿ ತಾವು ಸುಮಾರು 2 ತಿಂಗಳ ಕಾಲ ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದು ಶಫಿ ಹೇಳುತ್ತಾರೆ. 


ಇದನ್ನೂ ಓದಿ-Business Idea: ಶೇ.85ರಷ್ಟು ಸರ್ಕಾರಿ ಸಬ್ಸಿಡಿ ಪಡೆದು ಈ ಉದ್ಯಮ ಆರಂಭಿಸಿ 5 ಲಕ್ಷ ಸಂಪಾದಿಸಿ


ಪ್ರಪಂಚದಾದ್ಯಂತ 16 ವಿವಿಧ ವಿಶ್ವವಿದ್ಯಾಲಯಗಳಿಂದ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪಡೆದುಕೊಂಡ ನಂತರ, ಶಫಿ ತನ್ನನ್ನು ತಾನು ಅದೃಷ್ಟಶಾಲಿ ಎಂದು ಭಾವಿಸುತ್ತಾರೆ. ಪ್ರತಿಯೊಬ್ಬರು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳುವ ಅವರು, ನಾನು ಚಿಕ್ಕವನಿದ್ದಾಗ, ನನಗೆ ವೈದ್ಯಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಇತ್ತು. ನಾನು ಪ್ರಪಂಚದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಅನೇಕ ವಿಷಯಗಳನ್ನು ಅಧ್ಯಯನ ಮಾಡಿದ್ದೇನೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ನಾನು ಅನೇಕ ಪ್ರಮಾಣಪತ್ರಗಳನ್ನು ಹೊಂದಿದ್ದೇನೆ ಮತ್ತು ಇದೀಗ ನಾನು ನನ್ನ ಜೀವನದಲ್ಲಿ ಒಂದು ವಿಭಿನ್ನ ಹಂತವನ್ನು ತಲುಪಿದ್ದೇನೆ ಎಂದು ಭಾವಿಸುತ್ತೇನೆ' ಎನ್ನುತ್ತಾರೆ.


ಇದನ್ನೂ ಓದಿ-ಭಾರತದ ಮಾಜಿ ಕ್ರಿಕೆಟಿಗ ಜಡೇಜಾ ನಿಧನ, ಕೊರೊನಾದಿಂದ ಸಾವು, ಶೋಕಸಾಗರದಲ್ಲಿ ಕ್ರಿಕೆಟ್ ಜಗತ್ತು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.