ಭಾರತದಲ್ಲಿ 40 Websiteಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ... ಕಾರಣ ಇಲ್ಲಿದೆ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY) ಭಾರತದಲ್ಲಿ ಸೈಬರ್ ಸ್ಪೇಸ್ ಮೇಲೆ ನಿಗಾ ವಹಿಸುವ ನೋಡಲ್ ಏಜೆನ್ಸಿಯಾಗಿದೆ. ಕಳೆದ ವರ್ಷ, ಗೃಹ ಸಚಿವಾಲಯವು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗಾಗಿ ಎಸ್‌ಎಫ್‌ಜೆ ಅನ್ನು ನಿಷೇಧಿಸಿತ್ತು.
ನವದೆಹಲಿ: ದೇಶ ವಿರೋಧಿ ಅಭಿಯಾನ ನಡೆಸುತ್ತಿರುವ ಸುಮಾರು 40 ವೆಬ್ ಸೈಟ್ ಗಳ ಮೇಲೆ ಭಾರತ ಸರ್ಕಾರದ ಕಣ್ಣು ಬಿದ್ದಿದೆ. ಹೀಗಾಗಿ, ತಕ್ಷಣಕ್ಕೆ ಜಾರಿಗೆ ಬರುವಂತೆ ಸುಮಾರು 40 ನಿಷೇಧಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ನಿಷೇಧಿತ ಸಂಘಟನೆಯಾಗಿರುವ ಸಿಖ್ಸ್ ಫಾರ್ ಜಸ್ಟಿಸ್ (SFJ)ಗೆ ಸಂಬಧಿಸಿರುವ ಒಟ್ಟು 40 ಗಳನ್ನು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಬೆಂಬಲ ನೀಡಿದ ಆರೋಪದ ಮೇಲೆ ಅವುಗಳನ್ನು ಸರ್ಕಾರ ನಿಷೇಧಿಸಿದೆ. ಕೇಂದ್ರ ಗೃಹ ಸಚಿವಾಲಯ ಭಾನುವಾರ ಈ ಕುರಿತು ಮಾಹಿತಿ ನೀಡಿದೆ.
ಈ ಎಲ್ಲ ವೆಬ್ ಸೈಟ್ ಗಳು ಖಾಲಿಸ್ಥಾನ್ ಸಮೂಹಕ್ಕೆ ಸೇರಿವೆ
US ಮೂಲದ ಸಿಖ್ಸ್ ಫಾರ್ ಜಸ್ಟಿಸ್ (SFJ) ಒಂದು ಖಾಲಿಸ್ಥಾನ್ ಸಮೂಹಕ್ಕೆ ಸೇರಿದ ಗುಮ್ಪಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವಾಲಯದ ವಕ್ತಾರ. ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), 1967 ರ ಅಡಿಯಲ್ಲಿ ಒಂದು ಕಾನೂನುಬಾಹಿರ ಸಂಘಟನೆಯಾಗಿದೆ. ಈ ಸಂಘಟನೆ ತನ್ನ ಉದ್ದೇಶಪೂರ್ತಿಗಾಗಿ, ಬೆಂಬಲಿಗರ ಹೆಸರು ಸೊಂದಾವಣೆಗೆ ಒಂದು ಅಭಿಯಾನ ಆರಂಭಿಸಿತ್ತು. ಹೀಗಾಗಿ ಕೇಂದ್ರ ಗೃಹ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY), ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69ಎ ಅಡಿಯಲ್ಲಿ SFJಗೆ ಸೇರಿದ ಒಟ್ಟು 40 ವೆಬ್ ಸೈಟ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ" ಎಂದಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY) ಭಾರತದಲ್ಲಿ ಸೈಬರ್ ಸ್ಪೇಸ್ ಮೇಲೆ ನಿಗಾ ವಹಿಸುವ ನೋಡಲ್ ಏಜೆನ್ಸಿಯಾಗಿದೆ. ಕಳೆದ ವರ್ಷ, ಗೃಹ ಸಚಿವಾಲಯವು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗಾಗಿ ಎಸ್‌ಎಫ್‌ಜೆ ಅನ್ನು ನಿಷೇಧಿಸಿತ್ತು.
SFJ ತನ್ನ ಪ್ರತ್ಯೇಕತಾವಾದಿ ಎಜೆಂಡಾ ಅಡಿ ಸಿಖ್ ಜನಾಭಿಪ್ರಾಯವನ್ನು ಸಂಗ್ರಹಣೆಗೆ ಒತ್ತು ನೀಡಿತ್ತು. ಖಲಿಸ್ತಾನದ ಉದ್ದೇಶವನ್ನು ಈ ಸಂಸ್ಥೆ ಬಹಿರಂಗವಾಗಿ ಬೆಂಬಲಿಸುತ್ತದೆ ಮತ್ತು ಹೀಗೆ ಮಾಡುವುದರಿಂದ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಸವಾಲು ಎಸಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.