ನವದೆಹಲಿ: ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಶನಿವಾರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸೂರ್ಯನ ಧ್ವನಿ ಓಂ ಎಂದು ಹೇಳಿಕೊಂಡಿದೆ.


COMMERCIAL BREAK
SCROLL TO CONTINUE READING

ಟ್ವಿಟ್ಟರ್ ನಲ್ಲಿ ಯಾವುದೇ ಆಧಾರವಿಲ್ಲದ ವಿಡಿಯೋವನ್ನು ಶೇರ್ ಮಾಡಿರುವ ಕಿರಣ್ ಬೇಡಿ "ನಾಸಾ ಸೂರ್ಯನ ಧ್ವನಿ ರೆಕಾರ್ಡ್ ಮಾಡಿದ್ದರಲ್ಲಿ ಸೂರ್ಯ ಓಂ ಎಂದು ಪಠಿಸುತ್ತಾನೆ" ಎಂದು ಬರೆದುಕೊಂಡಿದ್ದಾರೆ.ಈಗ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ಟ್ರೋಲ್ ಆಗಿದೆ. ಹಲವರು ಇದಕ್ಕೆ ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಕಿರಣ್ ಬೇಡಿ ಯಾವುದೇ ಸತ್ಯಾಸತ್ಯತೆಯನ್ನು ಹೊಂದಿರದ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.



ಇನ್ನು ಸೂರ್ಯನು ನಿಜವಾಗಿಯೂ ಓಂ ಎಂದು ಜಪಿಸುತ್ತಾನೆಯೇ? ಎನ್ನುವ ವಿಷಯವಾಗಿ ಫ್ಯಾಕ್ಟ್ ಚೆಕ್ ಮಾಡಲು ಹೊರಟಾಗ ನಾಸಾ 2018 ರ ಜುಲೈನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿತು ಮತ್ತು ಸೂರ್ಯನು ಮೌನವಾಗಿಲ್ಲ ಎಂದು ಹೇಳಿದರು. ಸೂರ್ಯನ ಅಲೆಗಳು, ಏರಿಳಿತಗಳು ಮತ್ತು ಸ್ಫೋಟಗಳ ಚಲನೆಯಿಂದ ಉತ್ಪತ್ತಿಯಾಗುವ ಕಂಪನಗಳನ್ನು ವೀಡಿಯೊ ಸೆರೆಹಿಡಿಯುತ್ತದೆ. ಅದು ಉತ್ಪಾದಿಸುವ ಧ್ವನಿ ಓಂ ಹೋಲುವುದಿಲ್ಲ ಎನ್ನಲಾಗಿದೆ. ಆದರೆ ಸೂರ್ಯನಿಂದ ಉತ್ಪತ್ತಿಯಾಗುವ ಶಬ್ದವು ಓಂಗೆ ಹೋಲಿಕೆಯನ್ನು ಹೊಂದಿದೆ ಎಂದು ನಾಸಾ ಎಲ್ಲಿಯೂ ಉಲ್ಲೇಖಿಸಿಲ್ಲ. ಸೌಂಡ್‌ಕ್ಲೌಡ್‌ನಲ್ಲೂ ಸೂರ್ಯನ ಶಬ್ದವನ್ನು ಕೇಳಬಹುದು.



ನಾಸಾ ಪ್ರಕಾರ, "ಇಎಸ್ಎ (ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ) ಮತ್ತು ನಾಸಾದ ಸೌರ ಮತ್ತು ಹೆಲಿಯೋಸ್ಫಿಯರಿಕ್ ಅಬ್ಸರ್ವೇಟರಿ (ಎಸ್‌ಒಹೆಚ್‌ಒ) ದಿಂದ 20 ವರ್ಷಗಳಿಂದ ಸೂರ್ಯನ ವಾತಾವರಣದ ಚಲನಶೀಲ ಚಲನೆಯನ್ನು ಸೆರೆಹಿಡಿಯಲಾಗಿದೆ. ಇಂದು, ನಾವು ಸೂರ್ಯನ ಚಲನೆಯನ್ನು ಕೇಳಬಹುದು - ಅದರ ಎಲ್ಲಾ ಅಲೆಗಳು, ಕುಣಿಕೆಗಳು ಮತ್ತು ಸ್ಫೋಟಗಳನ್ನು ಕೇಳಬಹುದು. 


ಇನ್ನು ಕಿರಣ್ ಬೇಡಿ ಹಂಚಿಕೊಂಡಿರುವ ವೀಡಿಯೊ ನಾಸಾ ಹಂಚಿಕೊಂಡ ಮೂಲ ವಿಡಿಯೋ ಅಲ್ಲ. ಕುತೂಹಲಕಾರಿ ಸಂಗತಿ ಎಂದರೆ ಈ ವೀಡಿಯೊ 2017 ರಿಂದ ಚಲಾವಣೆಯಲ್ಲಿದೆ.