ಹೈದರಾಬಾದ್: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಳಿಪಟ ಹಾರಿಸಲು ಹೋದ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಹೈದರಾಬಾದ್'ನಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ನಗರದ ಅಮೀನ್ ಮಂಡಿ ಏರಿಯಾದ ಮೂರು ಅಂತಸ್ತಿನ ಕಟ್ಟಡದ ಟೆರೇಸ್ ಮೇಲೆ ಗಾಳಿಪಟ ಹಾರಿಸಲು ಹೋದ 11 ವರ್ಷದ ಬಾಲಕ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಮೃತ ಬಾಲಕನನ್ನು ಸಯದ್ ಜುನೈದ್ ಕ್ವಾದ್ರಿ ಎಂದು ಗುರುತಿಸಲಾಗಿದ್ದು, ಕಟ್ಟಡದ ಮೇಲಿಂದ ಬಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ತೀವ್ರ ಗಾಯವಾಗಿದ್ದರಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.


ಅದೇ ದಿನ ನಾಮಪಲ್ಲಿ ಪ್ರದೇಶದಲ್ಲಿ ಗಾಳಿಪಟ ಹಾರಿಸಲು ಹೋದ 9 ವರ್ಷದ ಬಾಲಕ ಅಬ್ದುಲ್ ರೆಹಮಾನ್ ಮೊದಲನೇ ಮಹಡಿಯಿಂದ ಬಿದ್ದು ತೀವ್ರ ಗಾಯಗೊಂಡಿದ್ದಾನೆ. ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 


ಭಾನುವಾರ ವಾರಾಸಿಗುಡ ಪ್ರದೇಶದಲ್ಲಿ ತನ್ನ ಮನೆಯ ಟೆರೇಸ್ನಲ್ಲಿ ಗಾಳಿಪಟ ಹಾರಿಸುತ್ತಿರುವಾಗ 27 ವರ್ಷದ ಯುವಕನೊಬ್ಬ ಮೇಲಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಸಯ್ಯದ್ ಖಾಲಿದ್ ಪಟ ಹಾರಿಸುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.