ನವದೆಹಲಿ: ಆಧಾರ್ ಕಾರ್ಡನ್ನು ಫೋಟೋ ಐಡಿ ಆಗಿ ಎಲ್ಲೆಡೆ ಬಳಸಲಾಗುತ್ತಿದೆ. ಹಲವು ಸೇವೆಗಳಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದೆ. ಅದಾಗ್ಯೂ, ಕೆಲವು ಸೇವೆಗಳಿಗೆ ಇದು ಅಗತ್ಯವಿಲ್ಲ. ಆದರೂ ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಕೆಲಸಗಳಿಗೆ ಸಂಬಂಧಿಸಿದಂತೆ ಇದು ಕಡ್ಡಾಯವಾಗಬಹುದು. ಇದೀಗ ಸಿಮ್(SIM) ಕಾರ್ಡ್ ಖರೀದಿಸಲು, ಬ್ಯಾಂಕ್ ಖಾತೆ ತೆರೆಯಲು ಆಧಾರ್ ಅನ್ನು ಸ್ವಯಂ ಪ್ರೇರಣೆಯಿಂದ ಫೋಟೋ ಐಡಿಯಾಗಿ ಬಳಸಬಹುದೇ ವಿನಃ ಅದು ಕಡ್ಡಾಯವೇನಲ್ಲ. ಆದರೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಇದು ಅತ್ಯವಶ್ಯಕ. 


COMMERCIAL BREAK
SCROLL TO CONTINUE READING

ಪಾನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಆಧಾರ್ ಸೇವೆಯನ್ನು ವಿಸ್ತರಿಸುವ ಸಾಧ್ಯತೆಗಳಿವೆ. ಹಾಗಾಗಿ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಜೊತೆಗೂ ಆಧಾರ್ ಲಿಂಕ್ ಮಾಡುವುದು ಉತ್ತಮ.


ಡ್ರೈವಿಂಗ್ ಲೈಸೆನ್ಸ್-ಆಧಾರ್ ಲಿಂಕ್ ಇನ್ನೂ ಕಡ್ಡಾಯವಿಲ್ಲ. ಅದಾಗ್ಯೂ, ನೀವು ಆಧಾರ್ ಅನ್ನು ಚಾಲನಾ ಪರವಾನಗಿಗೆ(ಡ್ರೈವಿಂಗ್ ಲೈಸೆನ್ಸ್) ಲಿಂಕ್ ಮಾಡುವ ಪ್ರಕ್ರಿಯೆಯನ್ನು ಯುಐಡಿಎಐ ಅತ್ಯಂತ ಸುಲಭ ಮಾಡಿದೆ. 


ಡ್ರೈವಿಂಗ್ ಲೈಸೆನ್ಸ್-Aadhaar ಲಿಂಕ್ ಮಾಡಲು ಹೀಗೆ ಮಾಡಿ:


1. ಆನ್ಲೈನ್ ನಲ್ಲಿ ರಸ್ತೆ ಸಾರಿಗೆ ಇಲಾಖೆಯ ವೆಬ್ಸೈಟ್ ಅನ್ನು ತೆರೆಯಿರಿ.
2. ಚಾಲಕನ ಪರವಾನಗಿ(ಡ್ರೈವಿಂಗ್ ಲೈಸೆನ್ಸ್)ಯನ್ನು ಆಯ್ಕೆ ಮಾಡುವ ಆಯ್ಕೆ ಅಲ್ಲಿರಲಿದೆ.
3. ಪರವಾನಗಿ(ಲೈಸೆನ್ಸ್) ಸಂಖ್ಯೆಯನ್ನು ನಮೂದಿಸಿ ಮತ್ತು ವಿವರಗಳನ್ನು ಪಡೆಯಿರಿ.
4. ಇಲ್ಲಿ 12 ಅಂಕಿಯ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ
5. ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ಅನ್ನು ತುಂಬಿದ ನಂತರ ಮೇಲ್ ಮತ್ತು ಸಂದೇಶದ ಮೂಲಕ ದೃಢೀಕರಣವು ಬರುತ್ತದೆ.