ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಶುಕ್ರವಾರ ವಾಪಸ್‌ ಕಳುಹಿಸಲು ಪಾಕಿಸ್ತಾನ ಒಪ್ಪಿಕೊಂಡಿದ್ದು, ವಾಯುಪಡೆಯ ನಿಯೋಗವು ವಾಘಾ ಗಡಿಯಲ್ಲಿ ಅಭಿನಂದನ್‌ ಅವರನ್ನು ಸ್ವಾಗತಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಹಾಗೂ ನೌಶೆರಾ ಪ್ರದೇಶಗಳಲ್ಲಿನ ಭಾರತದ ವಾಯು ವಲಯ ದಾಟಿ ಬುಧವಾರ ಒಳನುಸುಳಿದ್ದ ಪಾಕಿಸ್ತಾನ ಯುದ್ಧ ವಿಮಾನಗಳನ್ನು ದೇಶದ ಯುದ್ಧ ವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಇದೇ ಕಾರ್ಯಾಚರಣೆಯಲ್ಲಿ ಭಾರತದ ಒಂದು ಮಿಗ್‌ 21 ಯುದ್ಧ ವಿಮಾನ ಪತನಗೊಂಡಿತ್ತು. ಅದರ ಫೈಲಟ್‌ ಅಭಿನಂದನ್‌ ಪಾಕ್‌ ಗಡಿಯಲ್ಲಿ ಇಳಿದಿದ್ದರು. ಬಳಿಕ ಅವರನ್ನು ಪಾಕ್‌ ಸೇನೆ ವಶಕ್ಕೆ ಪಡೆದಿತ್ತು.


'ಶಾಂತಿಯ ಸಂಕೇತವಾಗಿ ಶುಕ್ರವಾರ ವಿಂಗ್‌ ಕಮಾಂಡರ್‌ನ್ನು ವಾಪಸ್‌ ಕಳುಹಿಸಲಾಗುವುದು' ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸಂಸತ್‌ನಲ್ಲಿ ಗುರುವಾರ ಘೋಷಿಸಿದ್ದರು. ಅಭಿನಂದನ್‌ರನ್ನು ಅತ್ತಾರಿ-ವಾಘಾ ಗಡಿ ಪ್ರದೇಶದಲ್ಲಿ ಸ್ವಾಗತಿಸಲು ಜನಸ್ತೋಮವೇ ಕಾದು ಕುಳಿತಿದೆ. ಅತ್ತಾರಿ-ವಾಘಾ ಗಡಿ ಮೂಲಕ ಅಭಿನಂದನ್ ತಾಯ್ನಾಡಿಗೆ ಮರಳಲಿರುವ ಈ ಸಂದರ್ಭದಲ್ಲಿ ಬಗೆಗಿನ ಅತ್ತಾರಿ-ವಾಘಾ ಗಡಿ ಬಗೆಗಿನ ಒಂದಿಷ್ಟು ರೋಚಕ ವಿಷಯಗಳನ್ನು ನಾವು ನಿಮಗೆ ತಿಳಿಸುತ್ತೇವೆ...



ವಾಘಾ ಗಡಿಯು ಭಾರತದ ಅಮೃತಸರ ಮತ್ತು ಪಾಕಿಸ್ತಾನದ ಲಾಹೋರ್ ನಡುವೆ ನೆಲೆಗೊಂಡಿದೆ. ಇಲ್ಲಿನ ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿ ಉಭದ ದೇಶಗಳ ಗಡಿ ಹಾದುಹೋಗುತ್ತದೆ.  ಈ ಸ್ಥಳವು ಅಮೃತಸರದಿಂದ 32 ಕಿಲೋಮೀಟರ್ ಮತ್ತು ಲಾಹೋರ್ನಿಂದ 22 ಕಿ.ಮೀ ದೂರದಲ್ಲಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ದಾಟಲು ಇದು ಏಕೈಕ ಸ್ಥಳವಾಗಿದೆ. 


ವಾಸ್ತವವಾಗಿ,  ಬಿಎಸ್ಎಫ್ ಮತ್ತು ಪಾಕ್ ರೇಂಜರ್ಸ್ ದೈನಂದಿನ ರೆಟ್ರೀಟ್ ನೋಡಲು ಜನರು ಅತ್ತಾರಿ-ವಾಘಾ ಗಡಿಗೆ ಭೇಟಿ ನೀಡುತ್ತಾರೆ. 1947 ರ ವರೆಗೆ ಇಲ್ಲಿ ಇಂತಹದ್ದೇನು ಇರಲಿಲ್ಲ. 1947ರಲ್ಲಿ ಆಗಸ್ಟ್ 14-15ರ ಮಧ್ಯರಾತ್ರಿ ದೇಶ ವಿಭಜನೆಯ ಸಂದರ್ಭದಲ್ಲಿ ಭಾರತದ ಒಂದು ಭಾಗ ಪಾಕಿಸ್ತಾನವಾಗಿ ಬೇರ್ಪಟ್ಟಿತು. ಅಲ್ಲಿ ಗಡಿ ರೇಖೆ ನಿರ್ಮಾಣವಾಯಿತು.


ಇದರ ನಂತರ, ಅತ್ತಾರಿ ಗ್ರಾಮವು ಭಾರತ ಭಾಗವಾಗಿಯೂ, ಅದರ ಪಕ್ಕದಲ್ಲಿರುವ ವಾಘಾ ಗ್ರಾಮವು ಪಾಕಿಸ್ತಾನದ ಭಾಗವಾಯಿತು. ಇಲ್ಲಿ ಹಾದುಹೋಗುವ ಗ್ರಾಂಡ್ ಟ್ರಂಕ್ ರಸ್ತೆಯ ಮೇಲೆ ಗುರುತಿಸಲಾಗಿದೆ. ಇಲ್ಲಿ ಎರಡೂ ದೇಶಗಳ ಧ್ವಜಗಳನ್ನೂ ದೊಡ್ಡ ಕಂಬಗಳಲ್ಲಿ ಇರಿಸಲಾಗಿದ್ದು, ಭಾರತದ ಅಂಚಿನಲ್ಲಿ ಒಂದು ಸಣ್ಣ ಗೇಟ್ ಸ್ಥಾಪಿಸಲಾಗಿದೆ. 


ಇಲ್ಲಿ  1958 ರಲ್ಲಿ ಒಂದು ಸಣ್ಣ ಪೊಲೀಸ್ ಟೋಲ್ ಅನ್ನು ನಿರ್ಮಿಸಲಾಯಿತು. ಈಗಲೂ ಸಹ ಈ ಪೊಲೀಸ್ ಟೋಲ್ ನಲ್ಲಿ ಹೋಗಿ ಬರುವ ಜನರನ್ನು ಪರಿಶೀಲಿಸಲಾಗುತ್ತದೆ. 1965 ರಲ್ಲಿ ಬಿಎಸ್ಎಫ್ ಸ್ಥಾಪನೆಯೊಂದಿಗೆ, ಇಲ್ಲಿನ ಜವಾಬ್ದಾರಿಯನ್ನು ಬಿಎಸ್ಎಫ್ ಪಡೆಗೆ ಹಸ್ತಾಂತರಿಸಲಾಯಿತು. 


ವಾಘಾ ಗಡಿಯಲ್ಲಿ ಪ್ರತಿದಿನ ಪರೇಡ್ ಸಾಮಾನ್ಯ. ಭಾರತದ ಬಿಎಸ್ಎಫ್ ಯೋಧರು ಮತ್ತು ಪಾಕಿಸ್ತಾನದ ಯೋಧರು ಪ್ರತಿದಿನ ಗಡಿಯಲ್ಲಿರೋ ಗೇಟ್ಗಳನ್ನ ತೆರದು ದೇಶದ ಭಾವುಟ ಹಾರಿಸಿ ಕವಾಯತು ನಡೆಸುತ್ತಾರೆ. ಸಂಜೆ 5 ಗಂಟೆಗೆ ಬಿಎಸ್ ಎಫ್ ಯೋಧರ ಕವಾಯುತು ನಡೆಯುತ್ತದೆ. ಅದೇ ಸಮಯದಲ್ಲಿ ಪಾಕಿಸ್ತಾನದ ಯೋಧರಿಂದ ಕವಾಯತು ನಡೆಯುತ್ತದೆ. ಕೊನೆಗೆ ಭಾವುಟಗಳನ್ನ ಇಳಿಸಿ ಎರಡು ದೇಶಗಳ ಗೇಟ್ ಗಳನ್ನು ಮುಚ್ಚುತ್ತಾರೆ. ಈ ಪ್ರಕ್ರಿಯೆ ಪ್ರತಿದಿನ ವಾಘಾ ಗಡಿಯಲ್ಲಿ ನಡೆಯುತ್ತೆ. ಇದನ್ನ ನೋಡಲು  ಸಾವಿರರು ಜನರು ಸೇರಿರುತ್ತಾರೆ.