ನವದೆಹಲಿ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ದೆಹಲಿಗೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್‌ಪ್ರೆಸ್ ರೈಲಿನ  11 ಬೋಗಿಗಳು ಹಳಿತಪ್ಪಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ ಸಹದಾಯಿ ಬುಜರ್ಗ್‌ ಎಂಬಲ್ಲಿ ಬೆಳಗ್ಗೆ 3:58 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. 


COMMERCIAL BREAK
SCROLL TO CONTINUE READING

ಘಟನೆಯಲ್ಲಿ ಜನರಲ್ ಕೋಚ್, ಒಂದು ಎಸಿ ಕೋಚ್, B3, S8, S9, S10 ಸೇರಿದಂತೆ ಇತರ ನಾಲ್ಕು ಕೋಚ್ ಹಳಿ ತಪ್ಪಿವೆ ಎಂದು ಈಸ್ಟ್ ಸೆಂಟ್ರಲ್ ರೈಲ್ವೇ ವಕ್ತಾರ ರಾಜೇಶ್ ಕುಮಾರ್ ತಿಳಿಸಿದ್ದಾರೆ. ರೈಲು ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ರೈಲ್ವೇಸ್ ದೃಢಪಡಿಸಿದೆ.


ಅಪಘಾತಕ್ಕೆ ಕಾರಣ:
ಅಪಘಾತದ ಕಾರಣ ಎಲ್ಲರಲ್ಲೂ ಭಯ ಹುಟ್ಟಿಸುವಂತಿದ್ದು, ಕತಿಹಾರ್ ಬಳಿ ರೈಲಿನ ಎರಡು ಕೋಚ್ ಗಳ ನಡುವಿನ ಕೊಂಡಿ ಸಡಿಲಗೊಂಡಿತ್ತು ನಂತರ ಕಬ್ಬಿಣದ ಸರಳಿನ ಬದಲಿಗೆ ಅದನ್ನು ಹಗ್ಗ(ಜುಗಾಡ್)ದಿಂದ ಜೋಡಣೆ ಮಾಡಲಾಗಿತ್ತು ಎನ್ನಲಾಗಿದೆ. ಈ ರೈಲು ಅಪಘಾತಕ್ಕೆ ಇದೇ ಮುಖ್ಯ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಸೀಮಾಂಚಲ್‌ ಎಕ್ಸ್‌ಪ್ರೆಸ್‌ ರೈಲಿನ ಅಪಘಾತದಿಂದಾಗಿ ಅತಿ ದೊಡ್ಡ ಇಲಾಖೆ ಇಂತಹ ಸಣ್ಣ ಪುಟ್ಟ ಅಗತ್ಯತೆಗಳನ್ನೂ ಹೊಂದಿಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ. 


ರೈಲ್ವೆ ಅಧಿಕಾರಿಗಳ ಪ್ರಕಾರ, ಸೀಮಾಂಚಲ್‌ ಎಕ್ಸ್‌ಪ್ರೆಸ್‌ ಕತಿಹಾರ್ ಗೆ ತಲುಪಿದಾಗ, ಎರಡು ಬೋಗಿಗಳನ್ನು ಸಂಪರ್ಕಿಸುವ ಕಬ್ಬಿಣ ನಿಲುವಂಗಿ ಮುರಿಯಲ್ಪಟ್ಟಿದೆ. ಸಂಪನ್ಮೂಲಗಳ ಕೊರತೆಯ ಕಾರಣದಿಂದ ರೈಲ್ವೆ ಸಿಬ್ಬಂದಿ ಜುಗಡ್(ಹಗ್ಗ) ಬಳಸಿ ರೈಲು ಬೋಗಿಗಳನ್ನು ಸೇರಿಸಿದ್ದಾರೆ. ಕಬ್ಬಿಣದ ಸರಳು ಬಳಸಿ ಜೋಡಿಸಬೇಕಾದ ಬೋಗಿಗಳನ್ನು ಹಗ್ಗ ಮತ್ತು ಮರದ ಸಾಮಾಗ್ರಿಗಳನ್ನು ಬಳಸಿ ಜೋಡಿಸಲಾಗಿತ್ತು. ಈ ರೀತಿ ಎರಡು ಬೋಗಿಗಳನ್ನು ಜೋಡಿಸಲು ಸರಿಯಾದ ಸಾಧನವನ್ನು ಬಳಸದ ಕಾರಣ ರೈಲು ಚಲನೆ ಆರಂಭಿಸಿ ಅದರ ವೇಗವು ಹೆಚ್ಚಾಗುತ್ತಿದ್ದಂತೆ ಅಂತಹ ಒಂದು ದೊಡ್ಡ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.


ರೈಲ್ವೆಯ ಪ್ರಾಥಮಿಕ ವರದಿ ಪ್ರಕಾರ ಎರಡು ಬೋಗಿಗಳ ನಡುವಿನ ಜೋಡಣೆ ಮುರಿದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆ ಬಗ್ಗೆ ವಿಸ್ತೃತ ತನಿಖೆ ಮುಂದುವರೆದಿದೆ.