ನವದೆಹಲಿ: ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿದೆ. ಲಾಕ್ ಡೌನ್ ನಡುವೆ ಜನರು ತಮ್ಮ ಸಮಯವನ್ನು ಸರಿಯಾಗಿ ಬಳಸುವತ್ತ ಗಮನ ಹರಿಸಿದ್ದಾರೆ. ಈ ಲಾಕ್ ಡೌನ್ ಸಂದರ್ಭದಲ್ಲಿ ಜನರು ತಮ್ಮ ಸಮಯವನ್ನು ಬಾಡಿ ಬಿಲ್ಡಿಂಗ್ ಮಾಡುವತ್ತ ಹೆಚ್ಚಿಗೆ ಫೋಕಸ್ ಮಾಡಿದ್ದಾರೆ ಎಂದು ವರದಿಯೊಂದ ಬಹಿರಂಗಪಡಿಸಿದೆ. ಏಕೆಂದರೆ ಆನ್ಲೈನ್ ಶಾಪಿಂಗ್ ನಲ್ಲಿ ಡೆಂಬೆಲ್ಸ್ ಗಳಿಗಾಗಿ ಜನ ಹೆಚ್ಚಾಗಿ ಹುಡುಕಾಟ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ವರದಿಯ ಪ್ರಕಾರ ಕಳೆದ ಕೆಲ ದಿನಗಳಲ್ಲಿ ಆನ್ಲೈನ್ ನಲ್ಲಿ ಕೆಲ ಪ್ರಾಡಕ್ಟ್ಸ್ ಗಳಲ್ಲಿ ಜನರ ಅಭಿರುಚಿ ಅಚಾನಕ್ಕಾಗಿ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಜನರು ಆನ್ಲೈನ್ ಶಾಪಿಂಗ್ ನಲ್ಲಿ ಡೆಂಬೆಲ್ಸ್ ಗಳ ಖರೀದಿಗೆ ಹೆಚ್ಚು ಹಣ ವ್ಯಯಿಸುತ್ತಿದ್ದಾರೆ ಎನ್ನಲಾಗಿದೆ. ಏಕೆಂದರೆ ಕಳೆದ 30 ದಿನಗಳಲ್ಲಿ ಡೆಂಬೆಲ್ಸ್ ಗಳ ಹುಡುಕಾಟದಲ್ಲಿ ಶೇ.70 ರಷ್ಟು ವೃದ್ಧಿಯಾಗಿದೆ. ಇನ್ನೊಂದೆಡೆ ಮೊದಲನೆಯ ಹೋಲಿಕೆಯಲ್ಲಿ ಶೇ.53 ರಷ್ಟು ಜನ ವಿಟಮಿನ್ ಸಿ ಉತ್ಪನ್ನಗಳಿಗಾಗಿ ಹುಡುಕಾಟ ನಡೆಸಿದ್ದಾರೆ.


ಮಿಲ್ಕ್ ಪೌಡರ್ ಗಳಿಗಾಗಿಯೂ ಕೂಡ ಕಳೆದ ಹಲವು ದಿನಗಳಲ್ಲಿ ಆನ್ಲೈನ್ ನಲ್ಲಿ ಬೇಡಿಕೆ ಹೆಚ್ಚಾಗಿದೆ. ಶೇ.51ರಷ್ಟು ಜನ ಆನ್ಲೈನ್ ನಲ್ಲಿ ಮಿಲ್ಕ್ ಪೌಡರ್ ಗಾಗಿ ಹುಡುಕಾಟ ನಡೆಸಿದ್ದಾರೆ. ಇದಲ್ಲದೆ ಶೇ.37.4 ರಷ್ಟು ಜನರು ಆನ್ಲೈನ್ ನಲ್ಲಿ ವಾಶ್ ರೂಮ್ ಉತ್ಪನ್ನಗಳಿಗಾಗಿ ಹುಡುಕಾಟ ನಡೆಸಿದ್ದಾರೆ.


ಲಾಕ್ ಡೌನ್ ಅವಧಿಯಲ್ಲಿ ಜನರ ಕುಕಿಂಗ್ ಅಭಿರುಚಿಯಲ್ಲಿಯೂ ಕೂಡ ಏರಿಕೆ ಕಂಡುಬಂದಿದೆ. ಈ ಅವಧಿಯಲ್ಲಿ ಜನರು ವಿವಿಧ ರೀತಿಯ ಖಾದ್ಯ ಪದಾರ್ಥಗಳ ತಯಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆನ್ಲೈನ್ ನಲ್ಲಿ ಬ್ರೆಡ್ ಮೇಕರ್ ಗಳ ಹುಡುಕಾಟದಲ್ಲಿ ಶೇ.37ರಷ್ಟು ಏರಿಕೆಯಾಗಿದೆ. ಡ್ರೈ ಫ್ರೂಟ್ಸ್ ಗಳ ಹುಡುಕಾಟ ಶೇ.13ರಷ್ಟು ವೃದ್ಧಿಯಾಗಿದೆ.


ಇತ್ತ ವರ್ಕ್ ಫ್ರಮ್ ಹೋಮ್ ಹಾಗಿ ಜನ ಕಂಪ್ಯೂಟರ್ ಗಳನ್ನು ಸಹ ಹೆಚ್ಚಾಗಿ ಹುಡುಕಾಟ ನಡೆಸಿದ್ದಾರೆ. ಆನ್ಲೈನ್  ಕಂಪ್ಯೂಟರ್ ಹುಡುಕಾಟದಲ್ಲಿ ಶೇ.16 ರಷ್ಟು ವೃದ್ಧಿಯಾಗಿದೆ. ಲಾಕ್ ಡೌನ್ ಹಿನ್ನೆಲೆ ದೇಶಾದ್ಯಂತ ಇರುವ ಬಹುತೇಕ ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಿರುವುದು ಇಲ್ಲಿ ಗಮನಾರ್ಹ