ನವದೆಹಲಿ: ಕೇಂದ್ರ ಸರ್ಕಾರದ ನೂತನ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರನ್ನು ಮೂರು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಈ ಹಿಂದೆ ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಜುಲೈ ತಿಂಗಳಲ್ಲಿ ಹುದ್ದೆ ತೊರೆದ ಬಳಿಕ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರನ್ನು ನೇಮಕ ಮಾಡಲಾಗಿದ್ದು, 3 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ.


ಹೈದರಾಬಾದ್‌ನಲ್ಲಿರುವ ಇಂಡಿಯನ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್ (ಐಎಸ್‌ಬಿ)ನಲ್ಲಿ ಹಣಕಾಸು ವಿಷಯದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಹಾಗೂ ಐಎಸ್‌ಬಿಯ ಸೆಂಟರ್ ಫಾರ್ ಅನಾಲಿಟಿಕಲ್ ಫೈನಾನ್ಸ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸುಬ್ರಮಣಿಯನ್‌ ಅವರು ಬ್ಯಾಂಕಿಂಗ್, ಕಾರ್ಪೊರೇಟ್‌ ಆಡಳಿತ ಹಾಗೂ ಆರ್ಥಿಕ ನೀತಿಯಲ್ಲಿ ವಿಶ್ವದ ಪ್ರಮುಖ ತಜ್ಞರಲ್ಲಿ ಒಬ್ಬರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.


ಈಗಾಗಲೇ, ಆರ್‌ಬಿಐನ ಬ್ಯಾಂಕುಗಳ ಆಡಳಿತದಲ್ಲಿ, ಸೆಬಿಯ ಸಾಂಸ್ಥಿಕ ಆಡಳಿತದ ತಜ್ಞರ ಸಮಿತಿಗಳಲ್ಲಿ ಸೇವೆ ಸಲ್ಲಿಸಿರುವ ಇವರು ದೇಶದ ಸಾಂಸ್ಥಿಕ ಆಡಳಿತ ಮತ್ತು ಬ್ಯಾಂಕಿಂಗ್ ಸುಧಾರಣೆಗಳ ಪ್ರಮುಖ ಮುಖ್ಯ ವಾಸ್ತುಶಿಲ್ಪಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.