ಇಸ್ಲಾಮಾಬಾದ್​: ಗೂಢಚಾರಿಕೆ ಆರೋಪದ ಮೇಲೆ ಮರಣ ದಂಡನೆ ಶಿಕ್ಷೆಗೊಳಗಾಗಿರುವ ಕುಲಭೂಷಣ್​ ಜಾಧವ್​ ಅವರನ್ನು ಡಿ.25 ರಂದು ಪಾಕ್ ಕಾರಾಗೃಹದಲ್ಲಿ ಭೇಟಿ ಮಾಡಲು ಅವರ ತಾಯಿ ಮತ್ತು ಪತ್ನಿಗೆ ಪಾಕ್​ ಸರ್ಕಾರ ಅವಕಾಶ ನೀಡಿದೆ.


COMMERCIAL BREAK
SCROLL TO CONTINUE READING

ಏತನ್ಮಧ್ಯೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು "ಪಾಕಿಸ್ತಾನ ಸರ್ಕಾರವು ಕುಲಭೂಷಣ್​ ಜಾಧವ್​ ನ ತಾಯಿ ಮತ್ತು ಹೆಂಡತಿಗೆ ವೀಸಾ ನೀಡಲಿದೆ. ನಾನು ಈ ಕುರಿತು ಕುಲಭೂಷಣ್​ ಜಾಧವ್​ ಅವರ ತಾಯಿ ಶ್ರೀಮತಿ ಅವಂತಿಕಾ ಜಾಧವ್ ಅವರೊಂದಿಗೆ ಮಾತನಾಡಿದ್ದೇನೆ'' ಎಂದು ಟ್ವೀಟರ್ ನಲ್ಲಿ ತಿಳಿಸಿದ್ದಾರೆ. 



ಕಳೆದ ತಿಂಗಳು ಮಾನವೀಯತೆಯ ದೃಷ್ಟಿಯಿಂದ ಕುಲಭೂಷಣ್​ ಜಾಧವ್​ ಭೇಟಿಗೆ ಅವರ ಕುಟುಂಬಸ್ಥರಿಗೆ ಅವಕಾಶ ನೀಡಲು ಸಿದ್ಧವಿರುವುದಾಗಿ ಪಾಕ್​ ಸರ್ಕಾರ ಭಾರತಕ್ಕೆ ತಿಳಿಸಿತ್ತು. ಇದರ ಬೆನ್ನಲ್ಲೇ ಈಗ ಭೇಟಿಯ ದಿನಾಂಕ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.


ಕಳೆದ ಏಪ್ರಿಲ್ ನಲ್ಲಿ ಗೂಢಾಚಾರಿಕೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನ ಸೇನಾ ಕೋರ್ಟ್ ಜಾಧವ್ ಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಅದಕ್ಕೆ ಅಂತರಾಷ್ಟ್ರೀಯ ಕೋರ್ಟ್ ತಡೆ ನೀಡಿದೆ.