ರಸ್ತೆ ಬದಿ ಪಾನ್ ಶಾಪ್ ಹತ್ತಿರ ಗಾಡಿ ನಿಲ್ಲಿಸಿದರೆ ಮೋದಿ ರ್ಯಾಲಿಯಷ್ಟೇ ಜನರನ್ನು ಸೆಳೆಯಬಲ್ಲೆ-ಲಾಲು ಪ್ರಸಾದ್
ಪಾಟ್ನಾದ ಗಾಂಧಿ ಮೈದಾನದಲ್ಲಿ ಪ್ರಧಾನಿ ಮೋದಿಯ ಸಂಕಲ್ಪ ರ್ಯಾಲಿಯಲ್ಲಿ ಸೇರಿದ ಜನ ಸಮೂಹಕ್ಕೆ ಪ್ರತಿಕ್ರಿಯಿಸಿರುವ ಲಾಲೂಪ್ರಸಾದ್ ಯಾದವ್ ತಾವು ರಸ್ತೆ ಬದಿ ಪಾನ್ ಶಾಪ್ ಹತ್ತಿರ ಗಾಡಿ ನಿಲ್ಲಿಸಿದರೆ ಮೋದಿ ರ್ಯಾಲಿಯಷ್ಟೇ ಜನರನ್ನು ಸೆಳೆಯಬಲ್ಲೆ ಎಂದು ವ್ಯಂಗ್ಯವಾಡಿದ್ದಾರೆ.
ನವದೆಹಲಿ: ಪಾಟ್ನಾದ ಗಾಂಧಿ ಮೈದಾನದಲ್ಲಿ ಪ್ರಧಾನಿ ಮೋದಿಯ ಸಂಕಲ್ಪ ರ್ಯಾಲಿಯಲ್ಲಿ ಸೇರಿದ ಜನ ಸಮೂಹಕ್ಕೆ ಪ್ರತಿಕ್ರಿಯಿಸಿರುವ ಲಾಲೂಪ್ರಸಾದ್ ಯಾದವ್ ತಾವು ರಸ್ತೆ ಬದಿ ಪಾನ್ ಶಾಪ್ ಹತ್ತಿರ ಗಾಡಿ ನಿಲ್ಲಿಸಿದರೆ ಮೋದಿ ರ್ಯಾಲಿಯಷ್ಟೇ ಜನರನ್ನು ಸೆಳೆಯಬಲ್ಲೆಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಲಾಲೂ ಪ್ರಸಾದ ಯಾದವ್ "ನರೇಂದ್ರ ಮೋದಿ ,ನಿತೀಶ್ ,ಪಾಸ್ವಾನ್ ಗಾಂಧಿ ಮೈದಾನದಲ್ಲಿನ ರ್ಯಾಲಿಯನ್ನು ಸಂಘಟಿಸಲು ಸರ್ಕಾರವನ್ನು ಬಳಸಿಕೊಂಡು ತಿಂಗಳುಗಳ ಕಾಲ ಕಾರ್ಯನಿರ್ವಹಿಸಿದ್ದಾರೆ,ಈ ರ್ಯಾಲಿಯಲ್ಲಿ ಸೇರಿಸಿದ್ದ ಜನರಷ್ಟೇ ಸಂಖ್ಯೆಯನ್ನು ರಸ್ತೆ ಬದಿ ಪಾನ್ ಶಾಪ್ ಹತ್ತಿರ ಗಾಡಿ ನಿಲ್ಲಿಸಿದರೆ ಮೋದಿ ರ್ಯಾಲಿಯಷ್ಟೇ ಜನರನ್ನು ನಾನು ಸೆಳೆಯಬಲ್ಲೆ ಎಂದು ಟಾಂಗ್ ನೀಡಿದ್ದಾರೆ.
ಇದೇ ವೇಳೆ ರ್ರ್ಯಾಲಿಯಲ್ಲಿ ಜನರ ಚಲನೆಯನ್ನು ಹಾಗೂ ಬೃಹತ್ ಜನಸಂಖ್ಯೆಯನ್ನು ತೋರಿಸಲು ಕ್ಯಾಮರಾ ಬಳಸಿದ್ದಾರೆ ಎಂದು ಲಾಲೂ ಪ್ರಸಾದ್ ತಿಳಿಸಿದ್ದಾರೆ.ಇನ್ನೊಂದು ಟ್ವೀಟ್ ನಲ್ಲಿ ಅವರು ಬಿಹಾರವು ಎನ್ ಡಿ ಎ ಮೈತ್ರಿಕೂಟದ ಆತ್ಮವಿಶ್ವಾಸವನ್ನು ಅಲುಗಾಡಿಸಿದೆ ಈ ಹಿನ್ನಲೆಯಲ್ಲಿ ಅವರ ನಾಯಕರು ಹಿಂದಿಯಲ್ಲಿ ಮಾತನಾಡಲು ಸಹಿತ ಟೆಲಿ ಪ್ರಾಂಪ್ಟರ್ ಅಗತ್ಯವಾಗಿದೆ ಎಂದು ಹೇಳಿದ್ದಾರೆ.