`ವಿಕ್ರಮ್` ಲ್ಯಾಂಡರ್ಗೆ ಯಾವುದೇ ಹಾನಿಯಾಗಿಲ್ಲ; ಇಸ್ರೋ ಸ್ಪಷ್ಟನೆ
`ವಿಕ್ರಮ್` ಲ್ಯಾಂಡರ್ ಅನ್ನು ಸಂಪರ್ಕಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಇಸ್ರೋ ಹೇಳಿದೆ.
ನವದೆಹಲಿ: ಚಂದ್ರಯಾನ್ 2 ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈ ಮೇಲೆ ಇಳಿದ ಬಳಿಕ ಅದಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಲ್ಯಾಂಡರ್ ವಿಕ್ರಮ್ ಇಳಿಯಬೇಕಿದ್ದ ದಾರಿಯಲ್ಲಿ ಇಳಿಯಲಿಲ್ಲ. ಅದು ಸ್ವಲ್ಪ ವಾಲಿದ ಸ್ಥಿತಿಯಲ್ಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. 'ವಿಕ್ರಮ್' ಲ್ಯಾಂಡರ್ ಅನ್ನು ಸಂಪರ್ಕಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಇಸ್ರೋ ಹೇಳಿದೆ.
ಇದಕ್ಕೂ ಮುನ್ನ ಭಾನುವಾರ ಇಸ್ರೋ ಮುಖ್ಯಸ್ಥ ಕೆ.ಶಿವನ್, ಚಂದ್ರಯಾನ್ 2 ರ ಲ್ಯಾಂಡರ್ 'ವಿಕ್ರಮ್' ಇರುವ ಸ್ಥಳವನ್ನು ಇಸ್ರೋ ಪತ್ತೆ ಮಾಡಿದೆ ಎಂದು ಹೇಳಿದರು. ಚಂದ್ರಯಾನ್ 2 ರ ಆರ್ಬಿಟರ್ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ 'ವಿಕ್ರಮ್' ನ ಉಷ್ಣ ಚಿತ್ರಗಳನ್ನು ತೆಗೆದಿದೆ ಎಂದು ಅವರು ಹೇಳಿದರು.
ಚಂದ್ರನ ಮೇಲೆ ಇಳಿಯುವಾಗ ಸಂಪರ್ಕ ಕಡಿತ:
ವಿಕ್ರಮ್ ಲ್ಯಾಂಡರ್' ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಯುವ ಕೊನೆ ಕ್ಷಣದಲ್ಲಿ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿತು. 'ವಿಕ್ರಮ್' 'ರಫ್ ಬ್ರೇಕಿಂಗ್' ಮತ್ತು 'ಫೈನ್ ಬ್ರೇಕಿಂಗ್' ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು, ಆದರೆ 'ಸಾಫ್ಟ್ ಲ್ಯಾಂಡಿಂಗ್' ಮೊದಲು ಅದು ಭೂಮಿಯ ಮೇಲಿನ ನಿಯಂತ್ರಣ ಕೇಂದ್ರದಿಂದ ಅದು ಸಂಪರ್ಕ ಕಳೆದುಕೊಂಡಿತು.
'ನಿಮ್ಮ ಉತ್ಸಾಹವನ್ನು ಹೆಚ್ಚಾಗಿದೆ': ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ
ಚಂದ್ರಯಾನ್ -2 ರ ವಿಕ್ರಮ್ ಲ್ಯಾಂಡರ್ ಜೊತೆಗಿನ ಸಂಪರ್ಕವನ್ನು ಇಸ್ರೋ ಕಳೆದುಕೊಂಡ ನಂತರ ಶನಿವಾರ ಬೆಳಿಗ್ಗೆ 8 ಗಂಟೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿಯಂತ್ರಣ ಕೇಂದ್ರದಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ನಮ್ಮ ವಿಜ್ಞಾನಿಗಳ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ, ಭಾರತ ನಿಮ್ಮೊಂದಿಗಿದೆ ಎಂದು ಹೆಮ್ಮೆಯಿಂದ ನುಡಿದರು. ನಿಮ್ಮ ಪರಿಶ್ರಮದ ಬಗ್ಗೆ ಭಾರತೀಯರೆಲ್ಲರಿಗೂ ಹೆಮ್ಮೆ ಇದೆ. ಅಡೆತಡೆಗಳಿಂದ ನಿಮ್ಮ ವಿಶ್ವಾಸ ಕುಗ್ಗಿಲ್ಲ, ಹೆಚ್ಚಾಗಿದೆ ಎಂದು ಇಸ್ರೋ ವಿಜ್ಞಾನಿಗಳನ್ನು ಮೋದಿ ಶ್ಲಾಘಿಸಿದರು.