ಜಮ್ಮು: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಐದಕ್ಕೂ ಹೆಚ್ಚು ಕಡೆ ಭೂಕುಸಿತ ಸಂಭವಿಸಿದ್ದು, 1,500ಕ್ಕೂ ಹೆಚ್ಚು ವಾಹನಗಳು ಮುಂದೆ ಸಾಗಲಾಗದೆ ಮಾರ್ಗ ಮಧ್ಯದಲ್ಲೇ ಸಿಲುಕಿವೆ.


COMMERCIAL BREAK
SCROLL TO CONTINUE READING

ರಂಬನ್ ಜಿಲ್ಲೆಯ ಗ್ಯಾಂಗ್ರೂ, ರಾಮ್ಸೂ, ಪಾಂಟಿಯಾಲ್ ಮತ್ತು ಅನೋಖಿ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. ಮಣ್ಣು ತೆರವು ಮತ್ತು ರಸ್ತೆ ದುರಸ್ತಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


ಶರ್ಬಿಬಿ ಪ್ರದೇಶದಲ್ಲಿ ಮಣ್ಣು ತೆರವು ಕಾರ್ಯ ಪೂರ್ಣಗೊಂಡಿದ್ದು, ಉಳಿದ ಸ್ಥಳಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ. ರಾಮ್ಸೋದಲ್ಲಿರುವ ಬಿಡಿಓ ಕಚೇರಿ ಬಳಿ ರಸ್ತೆ ದುರಸ್ತಿಗೊಳಿಸಿದ ಬಳಿಕ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಡಿವೈಎಸ್ಪಿ ಪರ್ದೀಪ್ ಸಿಂಗ್ ಹೇಳಿದ್ದಾರೆ.


ಹೆದಾರಿಯಲ್ಲಿ ಭೂಕುಸಿತ ಅಷ್ಟೇ ಅಲ್ಲದೆ, ಬೆಟ್ಟದ ಮೇಲಿಂದ ಕಲ್ಲುಬಂಡೆಗಳು ರಸ್ತೆಯ ಮೇಲೆ ಉರುಳಿ ಬಿದ್ದಿವೆ. ಈ ಕಲ್ಲು ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ಸಾಗುತ್ತಿದೆ. ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿರುವುದರಿಂದ ಕತುವಾ, ಜಮ್ಮು, ಉಧಾಮ್ಪುರ, ಚೆನ್ನೈ, ಪಾಣಿಪಟ್, ರಂಬನ್ ಮೊದಲಾದ ಸ್ಥಳಗಳಲ್ಲಿ ವಾಹನಗಳು ಸಂಚರಿಸಲಾಗದೆ ಸಿಲುಕಿವೆ ಎಂದು ಐಜಿ ಅಲೋಕ್ ಕುಮಾರ್ ಹೇಳಿದ್ದಾರೆ.