ನವದೆಹಲಿ : ಪ್ಯಾನ್-ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕ ಹತ್ತಿರ ಬರುತ್ತಿದೆ. ನೀವು ಇನ್ನೂ ಅವುಗಳನ್ನು ಲಿಂಕ್ ಮಾಡದಿದ್ದರೆ ನಿಮಗಾಗಿ ಇದು ಕೊನೆಯ ಅವಕಾಶವಾಗಿದೆ. ಜೂನ್ 30 ರ ನಂತರ ಪ್ಯಾನ್-ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ. 30 ಜೂನ್ 2020 ರೊಳಗೆ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಆದ್ದರಿಂದ ಜೂನ್ 30 ರವರೆಗೆ ಕಾಯಬೇಡಿ. ಎಕೆಂದರೆ ಪ್ಯಾನ್ ಕಾರ್ಡ್ ಅನ್ನು ಜೂನ್ 30 ರೊಳಗೆ ಲಿಂಕ್ ಮಾಡದಿದ್ದರೆ ಅದು ನಿಷ್ಪ್ರಯೋಜಕವಾಗುತ್ತದೆ.


COMMERCIAL BREAK
SCROLL TO CONTINUE READING

ಕರೋನಾವೈರಸ್‌ನಿಂದಾಗಿ, ಪ್ಯಾನ್-ಆಧಾರ್ ಲಿಂಕ್ (PAN-Aadhaar Link) ಮಾಡುವ ಗಡುವನ್ನು ವಿಸ್ತರಿಸಲಾಯಿತು. ಲಿಂಕ್‌ನ ಕೊನೆಯ ದಿನಾಂಕವನ್ನು ಹಣಕಾಸು ಸಚಿವಾಲಯವು ಮಾರ್ಚ್ 31, 2020 ರಿಂದ ಈಗ 30 ಜೂನ್ 2020ರವರೆಗೆ ವಿಸ್ತರಿಸಿದೆ. ಯಾವುದೇ ಸಂದರ್ಭದಲ್ಲಿ 30 ಜೂನ್ 2020 ರೊಳಗೆ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಿ. ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಸಂಖ್ಯೆ ನಿಷ್ಪ್ರಯೋಜಕವಾಗುತ್ತದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದಾಯ ತೆರಿಗೆ ಇಲಾಖೆ ಕೂಡ ಅದನ್ನು ಅಮಾನ್ಯಗೊಳಿಸುತ್ತದೆ.


ಪ್ಯಾನ್ ಅಮಾನ್ಯವಾಗಿರುತ್ತದೆ :
ನಿಯಮದ ಪ್ರಕಾರ ನೀವು ನಿಮ್ಮ ಆಧಾರ್ - ಪ್ಯಾನ್ ಲಿಂಕ್ ಮಾಡದಿದ್ದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎ ಅಡಿಯಲ್ಲಿ ನಿಮ್ಮ ಪ್ಯಾನ್ ಅಮಾನ್ಯವಾಗುತ್ತದೆ. ತಜ್ಞರ ಪ್ರಕಾರ ಪ್ಯಾನ್ ಕಾರ್ಡ್ ಲಿಂಕ್ ಇಲ್ಲದಿದ್ದರೆ, ಆನ್‌ಲೈನ್‌ನಲ್ಲಿ ಐಟಿಆರ್ ಸಲ್ಲಿಸುವುದು ಕಷ್ಟವಾಗುತ್ತದೆ. ನಿಮ್ಮ ತೆರಿಗೆ ಮರುಪಾವತಿ ಪೂರ್ಣಗೊಳ್ಳುವುದಿಲ್ಲ. ಇದಲ್ಲದೆ ನೀವು ಯಾವುದೇ ಹಣಕಾಸಿನ ವಹಿವಾಟು ನಡೆಸಿದಾಗ ಆ ಸಮಯದಲ್ಲಿ ನಿಮಗೆ ಪ್ಯಾನ್ ಬಳಸಲು ಸಾಧ್ಯವಾಗುವುದಿಲ್ಲ.


SMS ಮೂಲಕ ಈ ರೀತಿ ಲಿಂಕ್ ಮಾಡಿ:
ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಎಸ್‌ಎಂಎಸ್ ಮೂಲಕ ಆಧಾರ್-ಪ್ಯಾನ್ ಅನ್ನು ಸಹ ಲಿಂಕ್ ಮಾಡಬಹುದು ಎಂಬ ಆಯ್ಕೆಯನ್ನು ನೀಡಿದೆ. ಈ ವಿಧಾನವು ಸುಲಭವಾಗಿದೆ. ಇದಕ್ಕಾಗಿ ನಿಮ್ಮ ಫೋನ್‌ನಲ್ಲಿ ನೀವು ಯುಐಡಿಪಿಎನ್ (UIDPN)ಅನ್ನು ಟೈಪ್ ಮಾಡಬೇಕು. ಇದರ ನಂತರ ಸ್ಪೇಸ್ ನೀಡುವ ಮೂಲಕ ನಿಮ್ಮ ಆಧಾರ್ ಸಂಖ್ಯೆ ಮತ್ತು ನಂತರ ಪ್ಯಾನ್ ಸಂಖ್ಯೆಯನ್ನು ನಮೂದಿಸಿ. ಉದಾಹರಣೆಗೆ 567678 ಅಥವಾ 56161 ಗೆ ಕಳುಹಿಸಲು UIDPAN<space><12-digit Aadhaar><space><10-digit PAN>. ಇದರ ನಂತರ ಆದಾಯ ತೆರಿಗೆ ಇಲಾಖೆ ನಿಮ್ಮ ಎರಡೂ ಸಂಖ್ಯೆಗಳನ್ನು ಲಿಂಕ್ ಪ್ರಕ್ರಿಯೆಯಲ್ಲಿ ಇರಿಸುತ್ತದೆ.


ಆನ್‌ಲೈನ್‌ನಲ್ಲಿ ಲಿಂಕ್ ಮಾಡುವುದು ಹೇಗೆ?


  • ಮೊದಲನೆಯದಾಗಿ ನಿಮ್ಮ ಖಾತೆಯನ್ನು ರಚಿಸದಿದ್ದರೆ ಮೊದಲು ನಿಮ್ಮನ್ನು ನೋಂದಾಯಿಸಿ.

  • ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಿ (www.incometaxindiaefiling.gov.in).

  • ವೆಬ್‌ಸೈಟ್‌ನಲ್ಲಿ 'ಲಿಂಕ್ ಆಧಾರ್' ಒಂದು ಆಯ್ಕೆ ಕಾಣಿಸುತ್ತದೆ, ಇಲ್ಲಿ ಕ್ಲಿಕ್ ಮಾಡಿ.

  • ಲಾಗಿನ್ ಮಾಡಿದ ನಂತರ ನಿಮ್ಮ ಖಾತೆಯ ಪ್ರೊಫೈಲ್ ಸೆಟ್ಟಿಂಗ್‌ಗಳಿಗೆ ಹೋಗಿ.

  • ಪ್ರೊಫೈಲ್ ಸೆಟ್ಟಿಂಗ್‌ಗಳಲ್ಲಿ ನೀವು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಆಯ್ಕೆಯನ್ನು ನೋಡುತ್ತೀರಿ ಅದನ್ನು ಆಯ್ಕೆ ಮಾಡಿ.

  • ಇಲ್ಲಿ ನೀಡಿರುವ ವಿಭಾಗದಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ.

  • ಮಾಹಿತಿಯನ್ನು ಭರ್ತಿ ಮಾಡಿದ ನಂತರ ಕೆಳಗೆ ತೋರಿಸಿರುವ 'ಲಿಂಕ್ ಆಧಾರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನಿಮ್ಮ ಆಧಾರ್ ಲಿಂಕ್ ಆಗುತ್ತದೆ.


ರದ್ದುಗೊಳಿಸಿದ ಪ್ಯಾನ್ ಕಾರ್ಡ್ ಬಳಸಿದರೆ…
ಪ್ಯಾನ್ ಕಾರ್ಡ್ ರದ್ದುಗೊಂಡ ನಂತರ ಅದನ್ನು ಮತ್ತೆ ಕಾರ್ಯರೂಪಕ್ಕೆ ತರಬಹುದು. ಆದರೆ ಈ ಮಧ್ಯೆ ಯಾರಾದರೂ ರದ್ದುಗೊಳಿಸಿದ ನಿಷ್ಕ್ರಿಯ ಪ್ಯಾನ್ ಕಾರ್ಡ್ ಬಳಸಿದರೆ ಅದನ್ನು ಆದಾಯ ತೆರಿಗೆ ಕಾಯ್ದೆಯಡಿ ಸೆಕ್ಷನ್ 272 ಬಿ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪ್ಯಾನ್ ಹೊಂದಿರುವವರು 10,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ. ರದ್ದುಗೊಳಿಸಿದ ಪ್ಯಾನ್ ಕಾರ್ಡ್ ಅನ್ನು ಮತ್ತೆ ಬಳಸಿದರೆ ದಂಡವನ್ನು ಸಹ ಹೆಚ್ಚಿಸಬಹುದು.