ದೆಹಲಿ-ಮುಂಬೈ ಗ್ರೀನ್ ಫಿಲ್ಡ್ ಎಕ್ಷ್ ಪ್ರೆಸ್ ವೇ ಗೆ ಶಂಕುಸ್ಥಾಪನೆ
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರು ದೆಹಲಿ-ಮುಂಬೈ ಗ್ರೀನ್ ಫಿಲ್ಡ್ ಎಕ್ಷ್ ಪ್ರೆಸ್ ವೆ ಗೆ ಶಂಕು ಸ್ಥಾಪನೆ ನೆರವೇರಿಸಿದರು
ನವದೆಹಲಿ: ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರು ದೆಹಲಿ-ಮುಂಬೈ ಗ್ರೀನ್ ಫಿಲ್ಡ್ ಎಕ್ಷ್ ಪ್ರೆಸ್ ವೆ ಗೆ ಶಂಕು ಸ್ಥಾಪನೆ ನೆರವೇರಿಸಿದರು
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಕೇಂದ್ರ ಸರ್ಕಾರದ ಅತಿ ಹೆಚ್ಚು ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ ಮತ್ತು ಭವಿಷ್ಯದಲ್ಲಿ ಇದು ಎರಡು ವಾಣಿಜ್ಯ ನಗರಗಳ ನಡುವೆ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಪ್ರಸ್ತುತ 24 ಗಂಟೆಗಳಿಂದ 13 ಗಂಟೆಗಳವರೆಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.ಅಲ್ಲದೆ ಎರಡು ನಗರಗಳ ನಡುವಿನ ಅಂತರವನ್ನು ಈ ರಸ್ತೆ 1450 ಕಿ.ಮೀ ನಿಂದ 1250 ಕಿ.ಮೀ.ಗೆ ಕಡಿಮೆಯಾಗಲಿದೆ.
ಈ ಕಾರ್ಯಾಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಸ್ತೆ ಸಾರಿಗೆ ಸಚಿವ ಗಡ್ಕರಿ " ಗ್ರೀನ್ ಫಿಲ್ಡ್ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಭಾರತದ ಅತಿ ಉದ್ದದ ಎಕ್ಸ್ಪ್ರೆಸ್ ಹೆದ್ದಾರಿಯಗಲಿದ್ದು, 1,320 ಕಿ.ಮೀ.ನಷ್ಟು ಉದ್ದದ ಈ ಎಕ್ಸ್ಪ್ರೆಸ್ ಹೆದ್ದಾರಿ ಮೆಟ್ರೊಪೊಲಿಟನ್ ನಗರಗಳ ನಡುವಿನ ಪ್ರಯಾಣದ ಸಮಯವನ್ನು 24 ಗಂಟೆಗಳಿಂದ 13 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ." ಎಂದರು.ಈ ರಸ್ತೆ ಗುಜರಾತ್ ನಲ್ಲಿ ವಡೋದರಾ ಮಾರ್ಗವಾಗಿ ದೆಹಲಿಯಿಂದ ಮುಂಬೈ ಸಂಪರ್ಕಿಸಲಾಗುವುದು ಇದರ ಅಂದಾಜು ವೆಚ್ಚ ₹ 90,000 ಕೋಟಿ ಎಂದು ಹೇಳಲಾಗಿದೆ.