ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್, ಅಡ್ವಾನಿ ಅವರಿಂದ ಶೀಲಾ ದೀಕ್ಷಿತ್ ಗೆ ಅಂತಿಮ ನಮನ
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಕಾಂಗ್ರೆಸ್, ಬಿಜೆಪಿ ನಾಯಕರು ಇಂದು ದಕ್ಷಿಣ ದೆಹಲಿಯಲ್ಲಿರುವ ಅವರ ಮನೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಭಾನುವಾರದಂದು ಅವರು ಮೃತರಾಗಿದ್ದರು ಅವರಿಗೆ 81 ವರ್ಷ ವಯಸ್ಸಾಗಿತ್ತು.
ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಕಾಂಗ್ರೆಸ್, ಬಿಜೆಪಿ ನಾಯಕರು ಇಂದು ದಕ್ಷಿಣ ದೆಹಲಿಯಲ್ಲಿರುವ ಅವರ ಮನೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಭಾನುವಾರದಂದು ಅವರು ಮೃತರಾಗಿದ್ದರು ಅವರಿಗೆ 81 ವರ್ಷ ವಯಸ್ಸಾಗಿತ್ತು.
ಇಂದು ಅವರ ಮನೆಗೆ ಭೇಟಿ ಬಿಜೆಪಿಯ ಸುಷ್ಮಾ ಸ್ವರಾಜ್ ಮತ್ತು ಎಲ್.ಕೆ.ಅಡ್ವಾಣಿ ಮತ್ತು ನ್ಯಾಷನಲ್ ಕಾನ್ಫೆರನ್ಸ್ ನ ಒಮರ್ ಅಬ್ದುಲ್ಲಾ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಅಂತ್ಯ ಸಂಸ್ಕಾರಕ್ಕೂ ಮುನ್ನ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಗೆ ಕೊಂಡೊಯ್ಯಲಾಗುವುದು.ಅಲ್ಲಿ ಅವರಿಗೆ ಪಕ್ಷದಿಂದ ಅಂತಿಮ ಗೌರವ ಸಲ್ಲಿಸಲಾಗುವುದು. ಮಧ್ಯಾಹ್ನ 2.30 ಕ್ಕೆ ಅವರ ಶವವನ್ನು ಯಮುನಾ ದಡದಲ್ಲಿರುವ ನಿಗಮ್ ಬೋಧ್ ಘಾಟ್ ಗೆ ಅಂತ್ಯಕ್ರಿಯೆಗಾಗಿ ತೆಗೆದುಕೊಂಡು ಹೋಗಲಾಗುವುದು ಎಂದು ಮೂಲಗಳು ತಿಳಿಸಿವೆ. ಶೀಲಾ ದೀಕ್ಷಿತ್ ಅವರ ನಿಧನಕ್ಕೆ ದೆಹಲಿ ಸರ್ಕಾರ ಎರಡು ದಿನಗಳ ರಾಜ್ಯ ಶೋಕಾಚರಣೆ ಘೋಷಿಸಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಶೀಲಾ ದೀಕ್ಷಿತ್ ರನ್ನು ಹೃದಯದ ಖಾಯಿಲೆ ಹಿನ್ನಲೆಯಲ್ಲಿ ಫೋರ್ಟಿಸ್ ಎಸ್ಕೋರ್ಟ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಮಧ್ಯಾಹ್ನ 3.55ಕ್ಕೆ ನಿಧನರಾದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದರು. ಅವರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ, ರಾಹುಲ್ ಗಾಂಧಿ, ಕೆಜ್ರಿವಾಲ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದರು.
ಶೀಲಾ ದೀಕ್ಷಿತ್ ಅವರು 1998 ಮತ್ತು 2013 ರ ನಡುವೆ ಸತತ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರ ನಂತರ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಎದುರು ಸೋಲನ್ನು ಅನುಭವಿಸಿದ್ದರು. ಅವರು 2014 ರಲ್ಲಿ ಕೇರಳಕ್ಕೆ ರಾಜ್ಯಪಾಲರಾಗಿ ಹೋಗಿದ್ದರು , ಆದರೆ ಕೇವಲ ಆರು ತಿಂಗಳಲ್ಲಿ ರಾಜೀನಾಮೆ ನೀಡಿದರು.