ನವದೆಹಲಿ : ಭಾರತಕ್ಕೆ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಭೇಟಿಯನ್ನು ವಿರೋಧಿಸಿ ಸೋಮವಾರ ಎಡಪಕ್ಷಗಳು ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದವು.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಮಾತನಾಡಿದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕ ಡಿ.ರಾಜಾ ಎಡಪಕ್ಷಗಳು ಇಸ್ರೇಲ್ ಸರ್ಕಾರದ ನೀತಿಗಳನ್ನು ಒಪ್ಪುವುದಿಲ್ಲ ಎಂದು ತಿಳಿಸಿದರು. ಆದ್ದರಿಂದ ಇಸ್ರೇಲ್ ಸರ್ಕಾರದ ನೀತಿಗಳನ್ನು ಎಡಪಕ್ಷಗಳು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುತ್ತವೆ ಎಂದರು. ಇಸ್ರೇಲ್ ದೇಶವು ಪಾಲೆಸ್ತಿನ್ನ ಭೂಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಅವರು ಆರೋಪಿಸಿದರು.



ಪ್ಯಾಲೆಸ್ತಿನಿಯನ್ನರ ಸಮಸ್ಯೆಯನ್ನು ನಾವು ಪರಿಹರಿಸದಿದ್ದಲ್ಲಿ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಭದ್ರತೆ ಅಸಾಧ್ಯವೆಂದು ಅಭಿಪ್ರಾಯಪಟ್ಟರು. ಆದ್ದರಿಂದ ಪ್ಯಾಲಿಸ್ತೇನ್ ನ ಐತಿಹಾಸಿಕ ಹಿನ್ನಲೆಯನ್ನು ಗಮನಿಸಿ ಅವರ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಆದ್ದರಿಂದ ಈ ವಿಚಾರವನ್ನು ಇಸ್ರೇಲ್ ಪ್ರಧಾನಿಯ ಗಮನಕ್ಕೆ ತರಲು ಇಚ್ಚಿಸುತ್ತೇವೆ ಎಂದು ಡಿ ರಾಜಾ ತಿಳಿಸಿದರು.