PM Modi : ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು ಗೋಡ್ಸೆಯನ್ನು ಭಾರತದ ಸುಪುತ್ರ ಎಂದು ಬಣ್ಣಿಸಿದ್ದರು. ಮತ್ತೊಬ್ಬ ಬಿಜೆಪಿ ನಾಯಕ ಉತ್ತರಾಖಾಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರು ಕೆಲವು ದಿನಗಳ ಹಿಂದೆ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. 


COMMERCIAL BREAK
SCROLL TO CONTINUE READING

ʼಬಿಜೆಪಿಯ ಪ್ರಧಾನ ಜನನಾಯಕರು ಗೋಡ್ಸೆಯವರನ್ನು ವೈಭವೀಕರಿಸುತ್ತಿದ್ದರೆ ಪ್ರಧಾನಿ ಏನೂ ಹೇಳುತ್ತಿಲ್ಲ. ಅವರ ವಿರುದ್ಧ ಯಾವ ಕ್ರಮವನ್ನು ತೆಗದುಕೊಳ್ಳುತ್ತಿಲ್ಲ. ಆದ ಕಾರಣ ನಾವು ಇಂದು ಪ್ರಧಾನ ಮಂತ್ರಿ ಅವರಿಗೆ ಒಂದು ವಿಷಯ ಹೇಳಲು ಬಯಸುತ್ತೆವೆ. ಒಂದೋ ನಿಮ್ಮ ಪಕ್ಷದಿಂದ ಗೋಡ್ಸೆ ಭಕ್ತರನ್ನು ಹೊರಹಾಕಿ ಅಥವಾ ಗಾಂಧೀಜಿಯವರ ಮುಂದೆ ತಲೆಬಾಗುವ ಸೋಗನ್ನು ಕೊನೆಗೊಳಿಸಿ. ಗಾಂಧೀಜಿಯ ದೇಶದಲ್ಲಿ ಗೋಡ್ಸೆಯ ಆರಾಧಕರಿಗೆ ಸ್ಥಳವಿಲ್ಲ. ಮೋದಿಯವರೇ ಈ ಬಗ್ಗೆ ನೀವೆ ನಿರ್ಧರಿಬೇಕು ಎಂದು ಕಾಂಗ್ರೆಸ್‌ ಟ್ವಿಟ್‌ ಮೂಲಕ ತಿಳಿಸಿದೆ.


General Elections 2024: ಒಂದರ ಮೇಲೊಂದರಂತೆ ರಾಹುಲ್ ಗಾಂಧಿ ಮೇಲೆ ಆರೋಪಗಳ ಸುರಿಮಳೆಗೈದ ಅಮಿತ್ ಶಾ 


ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಟ್ವಿಟ್‌ ಮಾಡಿ "ಮೊದಲು ಉತ್ತರಾಖಾಂಡದ ಮಾಜಿ ಮುಖ್ಯಮಂತ್ರಿ  ತ್ರಿವೇಂದ್ರ ಸಿಂಗ್‌ ರಾವತ್‌ ಅವರು ನಾಥುರಾಮ್‌ ಗೋಡ್ಸೆ ಅವರನ್ನು ದೇಶಭಕ್ತ ಎಂದು ಕರೆದಿದ್ದರು. ಈಗ ಕೇಂದ್ರ ಸಚಿವ ಅವರನ್ನು ಹೊಗಳಿದ್ದಾರೆ ತನ್ನ ಸಹೋದ್ಯೋಗಿಗಳು ಮಾತನಾಡಿರುವ ಬಗ್ಗೆ ಪ್ರಧಾನಿಯವರು ಯಾವದೇ ಕ್ರಮ ತೆಗದುಕೊಳ್ಳುತ್ತಿಲ್ಲ ಎಂದು ಟೀಕಿಸಿದ್ದರು. 


ಗಿರಿರಾಜ ಸಿಂಗ್‌ ಅವರ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾಥೆ, ರಾಹುಲ್‌ ಗಾಂಧಿಯವರ ವಿದೇಶ ಭಾಷಣಗಳ ಬಗ್ಗೆ ಮಾತನಾಡುವ ಬಿಜೆಪಿ ಗೋಡ್ಸೆಯನ್ನು ವೈಭವೀಕರಿಸುವ ಗಿರಿರಾಜ ಸಿಂಗ್‌ ಉತ್ತರಾಖಾಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರ ಬಗ್ಗೆ ಏಕೆ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದರು. 


ಇದನ್ನೂ ಓದಿ- Amit Shah: 'ಮುಸ್ಲಿಂ ಮೀಸಲಾತಿ ಕೊನೆಗೊಳಿಸುವುದೆ ನಮ್ಮ ಗುರಿ', ಅದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದ ಅಮಿತ್ ಶಾ


ಮಹಾತ್ಮಗಾಂಧಿಯವರ ಹಂತಕ ಮೊಘಲ್‌ ದೊರೆಗಳಾದ ಬಾಬರ್‌ ಮತ್ತು ಔರಂಗಜೇಬ್‌ ಅವರಂತೆ ಆಕ್ರಮಣಕಾರರಲ್ಲ, ಏಕೆಂದರೆ ಅವರು ಭಾರತದಲ್ಲಿ ಜನಿಸಿದರು. ಎಂದು ಗಿರಿರಾಜ್‌ ಸಿಂಗ್‌ ಸುದ್ದಿಗಾರೊಂದಿಗೆ ಮಾತನಾಡುವಾಗ ಹೇಳಿದ್ದರು. ಉತ್ತರಾಖಾಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ರಾವತ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಬಗ್ಗೆ ಮಾತನಾಡುವಾಗ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದನು. ನಾನು ಗೋಡ್ಸೆಯನ್ನು ಅರ್ಥಮಾಡಿಕೊಂಡಂತೆ ಮತ್ತು ಓದಿದ ಮಟ್ಟಿಗೆ, ಆತ ಕೂಡ ದೇಶಭಕ್ತನಾಗಿದ್ದ. ಆದರೆ ಗಾಂದೀಜಿಯ ಹತ್ಯೆಯನ್ನು ನಾವು ಒಪ್ಪುವುದಿಲ್ಲ" ಎಂದಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l