Fight Against Corruption: ಭಾರತದಲ್ಲಿ ಭ್ರಷ್ಟಾಚಾರ ಎನ್ನುವುದು ಒಂದು ಅತಿದೊಡ್ಡ ತೊಂದರೆಯಾಗಿದೆ. ಹಾಗೆಂದು ಸರ್ಕಾರಿ ಅಧಿಕಾರಿಗಳನ್ನು ಇಲ್ಲಿ ಅವರ ನಡೆಗಳಿಗೆ ಜವಾಬ್ದಾರರನ್ನಾಗಿಸುವುದೂ ಕಷ್ಟಸಾಧ್ಯವಾಗಿದೆ. ಅದಕ್ಕೆ ಹಲವಾರು ಕಾರಣಗಳೂ ಇವೆ. ಅವುಗಳೆಂದರೆ,


COMMERCIAL BREAK
SCROLL TO CONTINUE READING

ದುರ್ಬಲ ಕಾನೂನುಗಳು ಮತ್ತು ಕಾನೂನು ಜಾರಿ: ಭ್ರಷ್ಟಾಚಾರದ ವಿರುದ್ಧ ಭಾರತದ ಕಾನೂನುಗಳು ಸಾಕಷ್ಟು ದುರ್ಬಲವಾಗಿವೆ. ಇರುವ ಕಾನೂನುಗಳನ್ನು ಜಾರಿಗೆ ತರಲು ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಭಾರತದಲ್ಲಿದೆ.


ಪಾರದರ್ಶಕತೆಯ ಕೊರತೆ: ಸರ್ಕಾರ ಅದೆಷ್ಟೋ ಬಾರಿ ತನ್ನ ವೆಚ್ಚಗಳ ಕುರಿತು ಅಥವಾ ನಿರ್ಧಾರ ಕೈಗೊಳ್ಳುವ ವಿಧಾನದ ಕುರಿತು ಮಾಹಿತಿ ಬಹಿರಂಗಪಡಿಸುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಎಲ್ಲಿ ಮತ್ತು ಹೇಗೆ ನಡೆಯುತ್ತಿದೆ ಎನ್ನುವುದನ್ನು ಪತ್ತೆಹಚ್ಚುವುದು ಕಷ್ಟಕರವಾಗುತ್ತದೆ.


ಕೆಟ್ಟ ಆಡಳಿತ: ಸರ್ಕಾರಗಳೂ ಅದೆಷ್ಟೋ ಬಾರಿ ಅಸಮರ್ಥವಾಗಿದ್ದು, ಅಸಮರ್ಪಕ ಆಡಳಿತ ನೀಡುತ್ತವೆ. ಇದು ಭ್ರಷ್ಟಾಚಾರಕ್ಕೆ ಮಾರ್ಗ ಮಾಡಿಕೊಡುತ್ತದೆ.


ಇದನ್ನೂ ಓದಿ- ದ್ವೇಷ ಭಾಷಣಗಳು ನಿಮ್ಮ ರಾಜಕೀಯ ಪಕ್ಷಗಳನ್ನು ಹಾಳು ಮಾಡದಿರಲಿ!


ಭ್ರಷ್ಟರಲ್ಲಿ ನಿರ್ಭೀತಿ: ಸರ್ಕಾರಿ ಅಧಿಕಾರಿಗಳು ಕಾನೂನಿಗೆ ಅತೀತರು ಎಂಬ ಸುಳ್ಳು ನಂಬಿಕೆ ಜನರಲ್ಲಿ ಬೇರೂರಿ ಬಿಟ್ಟಿದೆ. ಈ ಕಾರಣದಿಂದಲೂ ಜನರು ಭ್ರಷ್ಟ ಅಧಿಕಾರಿಗಳ ಕುರಿತು ದೂರು ನೀಡಲೂ ಹಿಂಜರಿಯುತ್ತಾರೆ.


ಈ ಎಲ್ಲ ಕಾರಣಗಳಿಂದಾಗಿ ಭಾರತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರ ಮಾಡುವ ವೆಚ್ಚದಲ್ಲಿ ಬಹುತೇಕ 40%ದಷ್ಟು ಭ್ರಷ್ಟಾಚಾರಕ್ಕೆ ಸೋರಿಕೆಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.


ಭ್ರಷ್ಟಾಚಾರದ ಹೆಚ್ಚಳದಿಂದ ಸಮಾಜದ ಮೇಲೆ ಸಾಕಷ್ಟು ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಅವೆಂದರೆ:


ಆರ್ಥಿಕ ಅಭಿವೃದ್ಧಿ ಕುಂಠಿತ: ಭ್ರಷ್ಟಾಚಾರ ಮಾರುಕಟ್ಟೆಯನ್ನು ಹಾಳುಗೆಡವಿ, ಹೂಡಿಕೆದಾರರನ್ನು ನಿರುತ್ತೇಜನಗೊಳಿಸುತ್ತದೆ. ಇದರ ಪರಿಣಾಮವಾಗಿ ಆರ್ಥಿಕ ಅಭಿವೃದ್ಧಿ ನಿಧಾನಗೊಳ್ಳುತ್ತದೆ.


ಬಡತನದ ಹೆಚ್ಚಳ: ಭ್ರಷ್ಟಾಚಾರ ಸಂಪನ್ಮೂಲಗಳನ್ನು ಅಗತ್ಯ ಸೇವೆಗಳಾದ ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಿಗೆ ಪೂರ್ಣವಾಗಿ ಲಭಿಸದಂತೆ ಮಾಡುತ್ತದೆ. ಇದರಿಂದಾಗಿ ಜನರು ಬಡತನಮಟ್ಟದಿಂದ ಮೇಲೆ ಬರಲು ಕಷ್ಟಸಾಧ್ಯವಾಗುತ್ತದೆ.


ಅಸಮಾನತೆ: ಭ್ರಷ್ಟಾಚಾರದ ಪರಿಣಾಮವಾಗಿ ಸಾಮಾಜಿಕ ಅಶಾಂತಿ ಮತ್ತು ಅಸಮಾನತೆ ತಲೆದೋರುತ್ತದೆ. ಇದು ರಾಜಕೀಯ ಅಸ್ಥಿರತೆಗೂ ದಾರಿ ಮಾಡಿಕೊಡುತ್ತದೆ.


ಇದನ್ನೂ ಓದಿ- ಭಾರತೀಯ ಉದ್ಯೋಗಿಗಳಿಗಿದೆ ಗುಣಮಟ್ಟದ ತರಬೇತಿಯ ಕೊರತೆ


ಭಾರತದಲ್ಲಿ ಭ್ರಷ್ಟಾಚಾರ ಕಡಿಮೆಗೊಳಿಸಲು ಸಾಕಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬಹುದು. ಅವೆಂದರೆ:


ಕಾನೂನನ್ನು ಬಲಪಡಿಸುವುದು: ಭಾರತ ಭ್ರಷ್ಟಾಚಾರದ ವಿರುದ್ಧದ ತನ್ನ ಕಾನೂನುಗಳನ್ನು ಬಲಪಡಿಸಬೇಕು ಹಾಗೂ ಅವುಗಳನ್ನು ಜಾರಿಗೆ ತರುವುದನ್ನು ಸುಲಭವಾಗಿಸಬೇಕು.


ಆಡಳಿತದಲ್ಲಿ ಪಾರದರ್ಶಕತೆ: ಸರ್ಕಾರ ತನ್ನ ಖರ್ಚು ಮತ್ತು ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಪಾರದರ್ಶಕತೆ ತರಬೇಕು.


ಆಡಳಿತದ ಉತ್ತಮಪಡಿಸುವಿಕೆ: ಸರ್ಕಾರ ಹೆಚ್ಚು ಉತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಅದರೊಡನೆ, ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಸಂಸ್ಕೃತಿಯನ್ನು ಸರ್ಕಾರಿ ಅಧಿಕಾರಿಗಳಲ್ಲಿ ಮೂಡಿಸಬೇಕು.


ಸರ್ಕಾರಿ ಸಂಸ್ಕೃತಿಯ ಬದಲಾವಣೆ: ಸರ್ಕಾರ ಭ್ರಷ್ಟರಲ್ಲಿ ಭಯ ಮೂಡಿಸುವಂತೆ ಕಾರ್ಯಾಚರಿಸಬೇಕು. ಆಗ ಭ್ರಷ್ಟಾಚಾರ ಇಷ್ಟು ತಾಂಡವವಾಡಲು ಸಾಧ್ಯವಾಗುವುದಿಲ್ಲ. ಇದನ್ನು ಉತ್ತಮ ಶಿಕ್ಷಣ, ಜಾಗೃತಿ ಕಾರ್ಯಕ್ರಮಗಳು ಹಾಗೂ ಕಾನೂನು ಬಲಪಡಿಸುವ ಮೂಲಕ ಸಾಧಿಸಬಹುದು.


ಭ್ರಷ್ಟಾಚಾರ ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ಇದಕ್ಕೆ‌ ಯಾವುದೇ ಸುಲಭ - ಸರಳ ಪರಿಹಾರ ಲಭ್ಯವಿಲ್ಲ. ಆದರೆ, ಕಾನೂನುಗಳನ್ನು ಬಲಪಡಿಸುವ, ಆಡಳಿತದಲ್ಲಿ ಪಾರದರ್ಶಕತೆ ತರುವ, ಆಡಳಿತವನ್ನು ಉತ್ತಮಪಡಿಸುವ, ಹಾಗೂ ಆಡಳಿತಗಾರರಲ್ಲಿ ಭ್ರಷ್ಟಾಚಾರ ನಡೆಸಲು ಭಯ ಮೂಡಿಸುವುದರಿಂದ ಭಾರತ ನಿಧಾನವಾಗಿ ಭ್ರಷ್ಟಾಚಾರ ಹೋಗಲಾಡಿಸಲು ಸಾಧ್ಯವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ