ನವದೆಹಲಿ: 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಅಭಿನಂದಿಸಿದ್ದಾರೆ. 



COMMERCIAL BREAK
SCROLL TO CONTINUE READING

"ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗೂ ಧನ್ಯವಾದಗಳು. ಸೋತವರೆಲ್ಲಾ ಸೋತವರಲ್ಲ. ನಾವು ಸಂಪೂರ್ಣವಾಗಿ ವಿಮರ್ಶೆಯನ್ನು ಮಾಡುತ್ತೇವೆ, ನಂತರ ನಮ್ಮ ವಿಚಾರಗಳನ್ನು ನಿಮಗೆ  ತಿಳಿಸುತ್ತೇವೆ. ಮೊದಲು ಮತ ಎಣಿಕೆ ಪ್ರಕ್ರಿಯೆ ಮುಗಿದು ವಿವಿಪ್ಯಾಟ್ ತುಲನೆಯಾಗಲಿ " ಎಂದು ಟ್ವೀಟ್ ಮಾಡಿದ್ದಾರೆ.  


ಸದ್ಯ ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ ಬಿಜೆಪಿ ದಾಖಲೆಯ 18 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇನ್ನೊಂದೆಡೆಗೆ ತೃಣಮೂಲ ಕಾಂಗ್ರೆಸ್ ಪಕ್ಷವು 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಪಶ್ಚಿಮ ಬಂಗಾಳದಲ್ಲಿ ಮೋದಿ ಅಲೆ ವ್ಯಾಪಕವಾಗಿ ಪ್ರಭಾವ ಬಿರಿದೆ.