ನವದೆಹಲಿ : ಕರೋನಾದಿಂದ (Coronavirus) ರಕ್ಷಿಸಿಕೊಳ್ಳುವ ಏಕೈಕ ಉಪಾಯವೆಂದರೆ ವ್ಯಾಕ್ಸಿನ್ (vaccine) ಹಾಕಿಸಿಕೊಳ್ಳುವುದು. ಆದರೆ ಸಾಕಷ್ಟು ಜನರಲ್ಲಿ ವ್ಯಾಕ್ಸಿನ್ ಅಡ್ಡ ಪರಿಣಾಮಗಳ ಬಗ್ಗೆ ಸಾಕಷ್ಟು ಪ್ರಶ್ನೆ ಮತ್ತು ಆತಂಕಗಳಿವೆ. ಆವಕ್ಕೆಲ್ಲಾ ತಜ್ಞರು ಹೇಳಿರುವ ಉತ್ತರ  ಇಲ್ಲಿದೆ.


COMMERCIAL BREAK
SCROLL TO CONTINUE READING

ವ್ಯಾಕ್ಸಿನ್ ಮೊದಲ ಡೋಸ್ ಚುಚ್ಚಿಸಿಕೊಂಡ ಮೇಲೆ ಏನಾಗುತ್ತದೆ..?
ವ್ಯಾಕ್ಸಿನ್ (Vaccine) ಮೊದಲ ಡೋಸ್ ಹಾಕಿಸಿಕೊಂಡಾಗ ಕೆಲವರಿಗೆ ಜ್ವರ, ತಲೆ ನೋವು, ಮೈಕೈ ನೋವು, ಡಯಾರಿಯ, ಸುಸ್ತು ಕಾಣಿಸಿಕೊಳ್ಳುತ್ತದೆ.  ನಿಮಗೆ ಗೊತ್ತಿರಲಿ. ನಿಮಗೆ ಚುಚ್ಚುವ ಲಸಿಕೆಯಲ್ಲಿ ವೈರಸ್ ನ (Virus) ದುರ್ಬಲ ಅಥವಾ ಮೃತ ಭಾಗ  ಇರುತ್ತದೆ. ನಿಮ್ಮ ದೇಹದ ಇಮ್ಯೂನ್ ಸಿಸ್ಟಮ್ ಬಲಗೊಳಿಸಲು  ಇದನ್ನು ಶರೀರಕ್ಕೆ ಚುಚ್ಚಲಾಗುತ್ತದೆ.  ಈ ದುರ್ಬಲ ಅಥವಾ ಮೃತ ವೈರಸ್ ರಕ್ತಕ್ಕೆ ಪ್ರವೇಶಿಸಿದಾಗ  ಇಮ್ಯೂನ್ ಸಿಸ್ಟಮ್ ಸಕ್ರಿಯವಾಗುತ್ತದೆ. ಜೊತೆಗೆ ವೈರಸ್ ನ್ನು ಕೊಲ್ಲುತ್ತದೆ. ಮುಂದೆ ಇಂಥ ಸೋಂಕು ತಗುಲಿದಾಗ ಅದು ವೈರಸನ್ನು ಕೊಲ್ಲಲು ಸಶಕ್ತವಾಗುತ್ತದೆ.  ಹಾಗಾಗಿ, ವ್ಯಾಕ್ಸಿನ್ ಚುಚ್ಚಿದಾಗ ದೇಹ ಕೆಲ ಹೊತ್ತಿಗೆ ಪ್ರತಿಕ್ರಿಯೆ ನೀಡುತ್ತದೆ.  ಜ್ವರ (fever) , ತಲೆ ನೋವು  ಇತ್ಯಾದಿ ಇದೇ ಕಾರಣಕ್ಕೆ ಕಾಣಿಸಿಕೊಳ್ಳುತ್ತದೆ.


ಇದನ್ನೂ ಓದಿ : ಕೊರೊನಾದಿಂದ ಮೃತಪಟ್ಟ ತಂದೆ, ಚಿತೆಗೆ ಹಾರಿದ ದುಃಖತಪ್ತ ಪುತ್ರಿ


ಎರಡನೇ ಡೋಸ್ ಬಳಿಕ ಏನಾಗುತ್ತದೆ..?
ಎರಡನೇ ಡೋಸ್ ಹಾಕಿಸಿಕೊಂಡ ಬಳಿಕವೂ ಇದೇ ರೀತಿಯ ಅಡ್ಡ ಪರಿಣಾಮ ಕಾಣಿಸಿಕೊಳ್ಳಬಹುದು.  ಆದರೆ ಈ ಸಲ ಅಡ್ಡ ಪರಿಣಾಮ (Side effect) ತುಂಬಾ ಸ್ಟ್ರಾಂಗ್ ಆಗಿ ಇರಲ್ಲ.  ಯಾರಿಗೆ ಮೊದಲ ಡೋಸ್ ಹಾಕಿದಾಗ ಸೈಡ್ ಅಫೆಕ್ಟ್ ಇರಲಿಲ್ಲವೊ, ಅಂಥವರಿಗೆ 2ನೇ ಡೋಸ್ ಹಾಕಿದಾಗ ಸೈಡ್ ಅಫೆಕ್ಟ್ ಕಾಣಿಸಿಕೊಳ್ಳಬಹುದು. 


ಎರಡನೇ ಡೋಸ್ ಹಾಕಿಸಿಕೊಂಡ ಬಳಿಕವೂ ಸಮಸ್ಯೆ ಕಾಣಿಸಿಕೊಳ್ಳುತ್ತದೆಯೇ..?
ಕರೋನಾ ವ್ಯಾಕ್ಸಿನ್ (COVID Vaccine) ಯಾವಾಗಲೂ ಎರಡು ಡೋಸ್ ತೆಗೆದುಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಮಾತ್ರ  ಇದು ನೂರಕ್ಕೆ ನೂರರಷ್ಟು ಪರಿಣಾಮಕಾರಿಯಾಗಿರುತ್ತದೆ.  ಎರಡನೇ ಡೋಸ್ ಹಾಕಿಸಿಕೊಳ್ಳದೇ ಇದ್ದರೆ, ಕರೋನಾ ವೈರಸ್ ವಿರುದ್ದ ಅವರಿಗೆ ಪೂರ್ಣ ಮತ್ತು ಪರಿಣಾಮಕಾರಿ ಸಂರಕ್ಷಣೆ ಸಿಗುವುದಿಲ್ಲ.  ಅಂಥವರ ಮೇಲೆ ಕರೋನಾ ವೈರಸ್ ಗಂಭೀರ ರೂಪದಲ್ಲಿ ದಾಳಿ ಮಾಡಬಹುದು. ಇವೆಲ್ಲಾ ವ್ಯಾಕ್ಸಿನ್ ಪ್ರಕ್ರಿಯೆಯಲ್ಲಿ ತೊಡಗಿರುವ ತಜ್ಞರು ಹೇಳಿರುವ ಮಾಹಿತಿಗಳು. 


ಇದನ್ನೂ ಓದಿ : ಕೊರೊನಾ ಮೂರನೇ ಅಲೆ: ಸರ್ಕಾರದ ವೈಜ್ಞಾನಿಕ ಸಲಹೆಗಾರರು ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.