ನವದೆಹಲಿ: ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಲ್ಐಸಿ) ತನ್ನ 30 ಕೋಟಿಗೂ ಅಧಿಕ ಪಾಲಿಸಿದಾರರಿಗೆ ಡಿಜಿಟಲ್ ಪಾವತಿ ಮಾಡುವ ವೇಳೆ ಎಚ್ಚರಿಕೆ ವಹಿಸುತಂತೆ ಸೂಚನೆ ನೀಡಿದೆ. ಕರೋನಾ ಯುಗದಲ್ಲಿ, ಹೆಚ್ಚಿನ ಜನರು ತಮ್ಮ ಪಾಲಿಸಿಯ ಪ್ರೀಮಿಯಂ ಅನ್ನು ನೆಟ್‌ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ಪಾವತಿಸುತ್ತಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಕೆಲ ಜನರು ಮೋಸ ಕೂಡ ಹೋಗುತ್ತಿದ್ದಾರೆ. ಈ ಹಿನ್ನೆಲೆ ತನ್ನ ಪಾಲಿಸಿದಾರರನ್ನು ಎಲ್‌ಐಸಿ ಎಚ್ಚರಿಸಿದೆ. ಎಲ್‌ಐಸಿ ಮಾರುಕಟ್ಟೆಯಲ್ಲಿ ಶೇ 70 ರಷ್ಟು ಪಾಲನ್ನು ಹೊಂದಿದೆ.


COMMERCIAL BREAK
SCROLL TO CONTINUE READING

ನಗದು ಹಣ ಪಾವತಿಸಬೇಕು
ಪ್ರೀಮಿಯಂ ಪಾವತಿಗಾಗಿ ಗ್ರಾಹಕರು ತಮ್ಮನ್ನು ನೆಟ್ ಬ್ಯಾಂಕಿಂಗ್ ಅಥವಾ ಫೋನ್ ಬ್ಯಾಂಕಿಂಗ್‌ನಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರು ಶಾಖೆಗೆ ಹೋಗಿ ನಗದು ಕೌಂಟರ್‌ನಲ್ಲಿ ಹಣ ಪಾವತಿಸಬಾರದು ಎಂದು ಎಲ್‌ಐಸಿ ತನ್ನ ಪಾಲಿಸಿದಾರರಿಗೆ ತಿಳಿಸಿದೆ. ಏಕೆಂದರೆ ಒಂದೇ ತಿಂಗಳಿಗೆ ಎರಡು ಬಾರಿ ಪ್ರೀಮಿಯಂ ಪಾವತಿಸಿರುವ ಬಗ್ಗೆ ಅನೇಕ ಬಾರಿ ಮಾಹಿತಿ ಬೆಳಕಿಗೆ ಬಂದಿದೆ. ಜೊತೆಗೆ ಕರೋನಾ ಅವಧಿಯಲ್ಲಿ ಶಾಖೆಯಲ್ಲಿ ಗ್ರಾಹಕರು ಜನಸಂದಣಿಯನ್ನು ಹೆಚ್ಚಿಸುವ ಅಗತ್ಯವಿಲ್ಲ.


ಪಾಲಸಿಯ ರಿಕಾರ್ಡ್ ನಲ್ಲಿ ನಿಮ್ಮ ಸರಿಯಾದ ವಿಳಾಸವಿರಲಿ
ಪಾಲಿಸಿಯನ್ನು ನವೀಕರಿಸುವ ವೇಳೆ, ಪಾಲಿಸಿಯಲ್ಲಿ ದಾಖಲಾಗಿರುವ ವಿಳಾಸಕ್ಕೆ ಪ್ರೀಮಿಯಂ ರಶೀದಿಯನ್ನು ಅಂಚೆ ಮೂಲಕ ಕಳುಹಿಸಲಾಗುತ್ತದೆ. ಆದ್ದರಿಂದ, ಪಾಲಿಸಿ ದಾಖಲೆಯಲ್ಲಿ ಯಾವಾಗಲೂ ಸರಿಯಾದ ವಿಳಾಸವನ್ನು ನಮೂದಿಸಿ, ಏಕೆಂದರೆ ಇದು ಪ್ರತಿ ಬಾರಿಯೂ ಪ್ರೀಮಿಯಂ ಪಾವತಿಯ ರಶೀದಿಯನ್ನು ನಿಮಗೆ ನೀಡುತ್ತದೆ.


ರಶೀದಿ ಸಿಗದೇ ಹೋದಲ್ಲಿ ಈ ಕೆಲಸ ಮಾಡಿ
ಪಾಲಿಸಿ ಹೊಂದಿರುವವರು ನವೀಕರಣದ ಬಳಿಕ ಪ್ರೀಮಿಯಂ ರಶೀದಿ ಬರದೆ ಹೋದ ಸಂದರ್ಭದಲ್ಲಿ, ನಿಮ್ಮ ಶಾಖೆಯಿಂದ ಪ್ರೀಮಿಯಂ ಪಾವತಿಯ ಪ್ರಮಾಣಪತ್ರವನ್ನು ನೀವು ಪಡೆಯಬಹುದು. ಆದರೆ, ಯಾವುದೇ ಸಂದರ್ಭಗಳಲ್ಲಿ ಡುಪ್ಲಿಕೇಟ್ ಪ್ರೀಮಿಯಂ ರಶೀದಿಯನ್ನು ನೀಡಲಾಗುವುದಿಲ್ಲ ನೆನಪಿನಲ್ಲಿಡಿ.


ಆನ್ಲೈನ್ ಪಾವತಿಯಲ್ಲಿ ವಿಳಂಬವಾಗುವ ಸಾಧ್ಯತೆ
ಪ್ರಸ್ತುತ, ಎಲ್ಐಸಿ ತನ್ನ ಡೇಟಾಬೇಸ್ ರಚನೆಯನ್ನು ವಿಕೇಂದ್ರೀಕರಿಸಿಸುತ್ತಿದೆ, ಈ ಕಾರಣದಿಂದಾಗಿ ಆನ್‌ಲೈನ್‌ನಲ್ಲಿ ಮಾಡಿದ ಪಾವತಿಗಳನ್ನು ನವೀಕರಿಸುವಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ, ಖಾತೆಯಿಂದ ಹಿಂಪಡೆಯಲಾದ ದಿನಾಂಕ ಮತ್ತು ಪಾಲಿಸಿಯಲ್ಲಿ ಪಾವತಿಸುವ ದಿನಾಂಕವು ವಿಭಿನ್ನವಾಗಿರಬಹುದು, ಇದಕ್ಕಾಗಿ ಭಯಪಡುವ ಅಗತ್ಯವಿಲ್ಲ.


ಕೇವಲ ಈ ಬ್ಯಾಂಕ್ ಗಳ ಜೊತೆಗೆ ಒಡಂಬಡಿಕೆ ಇದೆ
ಆನ್‌ಲೈನ್ ಪ್ರಿಮಿಯಂ ಪಾವತಿಗಾಗಿ, ಕೆಲ ಆಯ್ದ ಖಾಸಗಿ ಬ್ಯಾಂಕ್ ಗಳು ಸೇರಿದಂತೆ ಹಲವು ಡಿಜಿಟಲ್ ಹಣ ಪಾವತಿ ಸೇವಾ ಪೂರೈಕೆದಾರರೊಂದಿಗೆ ಎಲ್ಐಸಿ ಒಪ್ಪಂದ ಮಾಡಿಕೊಂಡಿದೆ.  ಇವುಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್,