ನವದೆಹಲಿ: ನಗರ ನ್ಯಾಯಾಲಯ ಬುಧವಾರದಂದು ಮಾಜಿ ಟಿವಿ ನಿರೂಪಕ ಸುಹೈಬ್ ಇಲ್ಯಾಸಿ ಗೆ ತನ್ನ ಪತ್ನಿಯನ್ನು  ವರದಕ್ಷಣೆಯ ಕಿರುಕುಳದ ಕಾರಣಕ್ಕಾಗಿ ಹತ್ಯೆಗೈದಿದ್ದಕ್ಕೆ ಕೋರ್ಟ್  ಜೀವಾವಧಿ ಶಿಕ್ಷೆ ವಿಧಿಸಿದೆ.


COMMERCIAL BREAK
SCROLL TO CONTINUE READING

'ಇಂಡಿಯಾಸ್ ಮೋಸ್ಟ ವಾಂಟೆಡ್ ಕಾರ್ಯಕ್ರಮವಾಗಿದ್ದ ನಿರೂಪಕರಾಗಿದ್ದ ಇಲ್ಯಾಸಿ ಈ ಹಿಂದೆ 2000 ನಲ್ಲಿ  ತನ್ನ ಪತ್ನಿ ಅಂಜು ಇಲ್ಯಾಸಿಯನ್ನು ಹತ್ಯೆ ಮಾಡಿದ್ದಕ್ಕೆ ಕಾರ್ಕರಡಾಮ್ ಕೋರ್ಟ್ ಅವರಿಗೆ ಅಪರಾಧಿ ಎಂದು ಗುರುತಿಸಿತ್ತು. ಈ 17 ವರ್ಷದ ಹತ್ಯೆಯ ಪ್ರಕರಣಕ್ಕೆ ತಡವಾಗಿಯಾದರೂ  ತನ್ನ ತೀರ್ಪನ್ನು ನೀಡಿದೆ ಎನ್ನಬಹುದು. 


ಇಲ್ಯಾಸಿ ಅತ್ತಿಗೆ ರುಕ್ಮಾ ಸಿಂಗ್ ಭಾರತಿಯ ದಂಡ ಸಂಹಿತೆ 302 (ಹತ್ಯೆ) ಅಡಿಯಲ್ಲಿಯೂ ಕೂಡ ಈ ಪ್ರಕರಣವನ್ನು ಪರಿಗಣಿಸಬೇಕೆಂದು ನ್ಯಾಯಾಲಯದ ಬಳಿ ವಿನಂತಿಸಿಕೊಂಡಿದ್ದಾರೆ. ಆ ಮೂಲಕ ಜನವರಿ 11 2000 ರಲ್ಲಿ ಹತ್ಯೆಯಾಗಿದ್ದ  ತನ್ನ ಮಗಳಿಗೆ ನ್ಯಾಯ ಸಿಗುವಂತೆ  ಅವರು ಕೇಳಿಕೊಂಡಿದ್ದಾರೆ.  ಭಾರತಿಯ ನೀತಿ ಸಂಹಿತೆ ಸೆಕ್ಷನ್ 302 ರ ಪ್ರಕಾರ ಮರಣ ದಂಡೆಯು ಅಂತಿಮವಾದ ಶಿಕ್ಷೆಯಾಗಿದೆ. ಈಗಾಗಲೇ ಇಲ್ಯಾಸಿಗೆ ಐಪಿಸಿ 304 ರ ಪ್ರಕಾರ ವರದದಕ್ಷಿಣೆ ಕಿರುಕುಳದ ಸಾವಿನ ಪ್ರಕರಣದ ಅಡಿಯಲ್ಲಿ ಕೇಸ್ ದಾಖಲಾಗಿತ್ತು .ಅವರು ಈ ಹಿಂದೆ ತನ್ನ ಪತ್ನಿಯ ಹತ್ಯೆಯ ಕುರಿತಾದ ಪೋಲೀಸರ ಹೊಸ ವೈದಕಿಯ ತನಿಖೆಯನ್ನು ವಿರೋಧಿಸಿ  ಕೋರ್ಟ್ನ ಮೊರೆಹೋಗಿದ್ದರು. 


ಸುಹೈಬ್ ಇಲ್ಯಾಸಿ ಮಾರ್ಚ್ 28 2000 ರಂದು ವರದಕ್ಷಣೆ ಕಿರುಕುಳ ನೀಡಿ ತನ್ನ ಪತ್ನಿಯನ್ನು ಕೊಂಡಿದ್ದಾರೆ ಎಂಬ ಆರೋಪದಿ ಬಂಧಿತರಾಗಿದ್ದರು.