Maharashtra CM: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಜೀವ ಬೆದರಿಕೆ, ಹಲ್ಲೆಯ ಸಂಚು ಬಹಿರಂಗ
Threat To Maharashtra CM: ಮಹಾ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಜೀವ ಬೆದರಿಕೆಯೊಡ್ಡಲಾಗಿದೆ. ಆತ್ಮಾಹುತಿ ದಾಳಿ ನಡೆಸಿ ಏಕನಾಥ್ ಶಿಂಧೆ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದೆ.
Threat To Maharashtra CM: ಮಹಾ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಪ್ರಾಣ ಬೆದರಿಕೆ ಹಾಕಲಾಗಿದೆ. ರಾಜ್ಯದ ಗುಪ್ತಚರ ಇಲಾಖೆಗೆ ದೊರೆತ ಮಾಹಿತಿಯ ಪ್ರಕಾರ, ಆತ್ಮಾಹುತಿ ದಾಳಿ ನಡೆಸುವ ಮೂಲಕ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎನ್ನಲಾಗಿದೆ. ಹಾಗೆ ನೋಡಿದರೆ ಒಂದು ತಿಂಗಳು ಹಿಂದೆಯೂ ಕೂಡ ಸಿಎಂ ಕಚೇರಿಗೆ ಪತ್ರವೊಂದು ಬಂದಿದ್ದು, ಅದರಲ್ಲಿಯೂ ಕೂಡ ಸಿಎಂ ಅವರನ್ನು ಹತ್ಯೆಗೈಯಲಾಗುವುದು ಎಂಬ ಬೆದರಿಕೆಯೊಡ್ಡಲಾಗಿತ್ತು. ಅಷ್ಟೇ ಅಲ್ಲ ಅವರ ಕಚೇರಿಯ ದೂರವಾಣಿಗೂ ಕೂಡ ಕರೆ ಮಾಡಿ ಈ ಬೆದರಿಕೆ ನೀಡಲಾಗಿತ್ತು. ಮಾವೋವಾದಿಗಳು ಈ ಮೊದಲು ಕೂಡ ಸಿಎಂಗೆ ಬೆದರಿಕೆಯೋಡ್ಡಿದ್ದಾರೆ.
ಆದರೆ ಮುಖ್ಯಮಂತ್ರಿಗಳಿಗೆ ಯಾರು ಈ ಬೆದರಿಕೆಯೊಡ್ಡಿದ್ದಾರೆ ಎಂಬುದರ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆತ್ಮಾಹುತಿ ದಾಳಿ ನಡೆಸಿ ಸಿಎಂ ಹತ್ಯೆಗೈಯಲು ಸಂಚು ರೂಪಿಸಲಾಗಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಬಂದಿದೆ. ಈ ಮೊದಲು ಸಿಎಂ ಅವರಿಗೆ ನೀಡಲಾಗಿರುವ ಪ್ರಾಣಬೆದರಿಕೆಯ ಬಗ್ಗೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಅದರ ಬೆನ್ನಲ್ಲೇ ಇದೀಗ ಎರಡನೇ ಬೆದರಿಕೆಯ ಕುರಿತು ಕೂಡ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಈ ಬೆದರಿಕೆಯ ಹಿನ್ನೆಲೆ ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ವರ್ಷಾ ನಿವಾಸ ಹಾಗೂ ಮುಖ್ಯಮಂತ್ರಿಗಳ ಕುಟುಂಬಸ್ತರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಏಕನಾಥ್ ಶಿಂಧೆ ಅವರಿಗೆ ಈ ಬೆದರಿಕೆಯೊಡ್ಡಲಾಗಿದೆ
ಏಕನಾಥ್ ಶಿಂಧೆ ಅವರಿಗೆ ಇದುವರೆಗೆ ಒಟ್ಟು ಮೂರು ಬಾರಿ ಬೆದರಿಕೆಯೊಡ್ಡಲಾಗಿದೆ. ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಗಡ್ಚಿರೌಲಿಯಿಂದ ಸರ್ಕಾರದ ರಕ್ಷಣಾ ಮಂತ್ರಿಯಾಗಿದ್ದ ಏಕನಾಥ್ ಶಿಂಧೆ ಅವರಿಗೆ ನಕ್ಸಲರು ಧಮ್ಕಿ ನೀಡಿದ್ದರು. ಆಷಾಢ ಏಕಾದಶಿಯ ನಿಮಿತ್ತ ಪಂಢರಪುರದ ಯಾತ್ರೆಯಲ್ಲಿರುವಾಗ ಶಿಂಧೆ ಅವರಿಗೆ ಈ ಬೆದರಿಕೆಯೊಡ್ಡಲಾಗಿತ್ತು. ಏತನ್ಮಧ್ಯೆ ನಕ್ಸಲೀಯರ ವಿರುದ್ಧ ಭಾರಿ ಕ್ರಮ ಕೈಗೊಂಡಿದ್ದಾರೆ. ಈ ಹಿನ್ನೆಲೆ ಅವರಿಗೆ ಪ್ರಾಣ ಬೆದರಿಕೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ-ದೇಶದ ಉಪ ಚುನಾವಣಾ ಆಯುಕ್ತರಾಗಿ ಐಎಎಸ್ ಅಧಿಕಾರಿ ಅಜಯ್ ಭಾದೂ ನೇಮಕ
ಛಗನ್ ಭುಜ್ಬಳ್ ವಿರುದ್ಧ ಪ್ರಕರಣ ದಾಖಲು
ಇನ್ನೊಂದೆಡೆ ಶುಕ್ರವಾರ ಅಂದರೆ ಸೆಪ್ಟೆಂಬರ್ 30ರಂದು ಮುಂಬೈ ಪೊಲೀಸರು ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಎನ್ಸಿಪಿ ಮುಖಂಡ ಛಗನ್ ಭುಜ್ಬಳ್ ಹಾಗೂ ಅವರ ಇಬ್ಬರು ನಿಕಟವರ್ತಿಗಳ ವಿರುದ್ಧ ಪ್ರಾಣ ಬೆದರಿಕೆಯೋಡ್ಡಿರುವ ಕುರಿತು ಪ್ರಕರಣ ದಾಖಲಿಸಿದ್ದಾರೆ. ದೂರುದಾರರು ನೀಡಿರುವ ಕರೆ ಮತ್ತು ವಾಟ್ಸ್ಆಪ್ ಸಂದೇಶಗಳ ಆಧಾರದ ಮೇಲೆ ಐಪಿಸಿ ಸೆಕ್ಷನ್ 506ರ ಅಡಿ ಈ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.