Liquor Ban in Bihar : ಬಿಹಾರದಲ್ಲಿ ಮದ್ಯ ನಿಷೇಧ, ಆದರೂ ವಿಷಪೂರಿತ ಮದ್ಯ ಸೇವಿಸಿ 18 ಜನರ ಸಾವು
Spurious Liquor Consumption - ಸಂಪೂರ್ಣ ಮದ್ಯಪಾನ ನಿಷೇಧವಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಬಿಹಾರ ಕೂಡ ಒಂದು, ಆದರೆ ಹೋಳಿ ಹಬ್ಬದ (Holi 2022) ಸಂದರ್ಭದಲ್ಲಿ ರಾಜ್ಯದಲ್ಲಿ ಮದ್ಯ ಸೇವಿಸಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ.
ನವದೆಹಲಿ: Death Due To Liquor Consumption - ಬಿಹಾರದಲ್ಲಿ (Bihar) ಕುಡಿತದಿಂದ 18 ಮಂದಿ ಸಾವನ್ನಪ್ಪಿದ್ದಾರೆ. ಮದ್ಯದ ಮೇಲೆ ಸರ್ಕಾರ (Bihar Government) ಸಂಪೂರ್ಣ ನಿಷೇಧ ವಿಧಿಸಿರುವ ದೇಶದ ಕೆಲವೇ ರಾಜ್ಯಗಳಲ್ಲಿ ಬಿಹಾರ ಕೂಡ ಒಂದು. ಬಿಹಾರದ ಮಧೇಪುರ, ಭಾಗಲ್‌ಪುರ, ಬಂಕಾ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಮದ್ಯಪಾನ ಮಾಡಿ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಧೇಪುರದಲ್ಲಿ ಮೂವರು ಸಾವನ್ನಪ್ಪಿದ್ದರೆ, ಬಂಕಾ ಮತ್ತು ಭಾಗಲ್ಪುರ ಜಿಲ್ಲೆಗಳಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಗೋಪಾಲಗಂಜ್ ಜಿಲ್ಲೆಯಲ್ಲಿಯೂ ಕೂಡ ಕೆಲವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇವರೆಲ್ಲರೂ ವಿಷಪೂರಿತ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಮದ್ಯಪಾನದ ಮೇಲೆ ಸಂಪೂರ್ಣ ನಿಷೇಧ ಘೋಷಣೆಯ ಹೊರತಾಗಿಯೂ ಬಿಹಾರದಲ್ಲಿ ನಿರಂತರ ಮದ್ಯಪಾನದಿಂದ ಸಾವುಗಳು ಸಂಭವಿಸುತ್ತಿವೆ.
37 ಮಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ
ಈ 18 ಜನರನ್ನು ಹೊರತುಪಡಿಸಿ ರಾಜ್ಯಾದ್ಯಂತ 19 ಜನರು ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಸಾವನ್ನಪ್ಪಿದ ಎಲ್ಲಾ 37 ಮಂದಿ ಹೊಟ್ಟೆ ನೋವು, ವಾಂತಿ ಮತ್ತು ಹೆಚ್ಚಿದ ಹೃದಯ ಬಡಿತದ ಬಗ್ಗೆ ದೂರಿದ್ದಾರೆ ಎನ್ನಲಾಗಿದೆ. ಈ ಸಮಸ್ಯೆಯಿಂದಾಗಿ ಭಾಗಲ್‌ಪುರದಲ್ಲಿ 22, ಬಂಕಾದಲ್ಲಿ 12 ಮತ್ತು ಮಧೇಪುರದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ-ಇಂದು ಗೋವಾ ಬಿಜೆಪಿ ಶಾಸಕಾಂಗ ಪಕ್ಷದ ಸಭೆ.. ಸಿಎಂ ಹೆಸರು ಘೋಷಣೆ!?
ಇಷ್ಟೊಂದು ಪ್ರಮಾಣದಲ್ಲಿ ಸಾವುಗಳು ಸಂಭವಿಸಿದ ಹಿನ್ನೆಲೆ ಭಾಗಲ್ಪುರ ಜಿಲ್ಲೆಯ ಸಾಹಬ್ಗಂಜ್ ಪ್ರದೇಶದಲ್ಲಿ ಜನರು ಆಕ್ರೋಶಗೊಂಡು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿರುವ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಕಳೆದ ಶನಿವಾರದಿಂದ ಭಾನುವಾರದ ನಡುವೆ ಈ ಸಾವುಗಳು ಸಂಭವಿಸಿವೆ ಎಂಬುದು ಗಮನಿಸಬೇಕಾದ ಸಂಗತಿ.
ಅಸಾನಿ ಚಂಡಮಾರುತ ಮುನ್ನೆಚ್ಚರಿಕೆ - ಅಂಡಮಾನ್ ನಿಕೋಬಾರ್ ನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧವಿದೆ
2017 ರಿಂದ ಬಿಹಾರದಲ್ಲಿ ಮದ್ಯ ಸೇವನೆ ಅಪರಾಧ ಎಂದು ಘೋಷಿಸಲಾಗಿದೆ. ಇದನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ವಿಧಿಸುವ ನಿಬಂಧನೆ ಇದೆ. ಆದರೆ, ಇದು ಬಿಹಾರದ ಸರ್ಕಾರದ ಆದಾಯದ ಮೇಲೆ ಕೆಟ್ಟ ಪರಿಣಾಮ ಬೀರಿದ್ದು, ರಾಜ್ಯದಲ್ಲಿ ಅಲ್ಲಲ್ಲಿ ಕಲಬೆರಕೆ ಮದ್ಯ ತಯಾರಿಸುವ ಘಟನೆಗಳೂ ಬೆಳಕಿಗೆ ಬರುತ್ತಿವೆ. ಈ ವರ್ಷದ ಜನವರಿಯಿಂದ ಸರ್ಕಾರ ಮದ್ಯ ನಿಷೇಧದ ನಿಯಮಗಳಲ್ಲಿ ಸಡಿಲಿಕೆ ನೀಡುವ ಸಾಧ್ಯತೆಯನ್ನು ವರ್ತಿಸಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-SBI ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ 2 ಲಕ್ಷ ರೂ. ಲಾಭ! ಇಂದೇ ಈ ಕೆಲಸ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.