ನವದೆಹಲಿ: ಬಿಹಾರ ಚುನಾವಣೆಯಲ್ಲಿ(Bihar Elections) ಆಡಳಿತಾರೂಢ NDAನಲ್ಲಿ ಬಿರುಕು ಕಾಣಿಸಿಕೊಂಡಿದೆ. ಮೂಲಗಳ ಪ್ರಕಾರ, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (LJP) ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ಚುನಾವಣೆ ಸ್ಪರ್ಧಿಸದಿರಲು ನಿರ್ಧರಿಸಿದೆ. ಬಿಹಾರ ವಿಧಾನಸಭಾ ಚುನಾವಣೆಗೆ ಎಲ್‌ಜೆಪಿ ಸಂಸದೀಯ ಮಂಡಳಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಸ್ತಾಪಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಹಾರದ 243 ಸದಸ್ಯರ ವಿಧಾನಸಭೆಯಲ್ಲಿ ಪಕ್ಷವು 143 ಸ್ಥಾನಗಳಿಗೆ ಸ್ಪರ್ಧಿಸಬಹುದು ಮತ್ತು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು LJP ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-ಬಿಹಾರ-ಕರ್ನಾಟಕದ MLC ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ


ಈ ಹಿಂದೆ ಚಿರಾಗ್ ಪಾಸ್ವಾನ್ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು  ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಭೇಟಿಯಾಗಿ ಮಾತುಕತೆ ನಡೆಸಿದ್ದರು.  ಏಕೆಂದರೆ ಬಿಜೆಪಿ ನಾಯಕತ್ವವು ಮೈತ್ರಿಯನ್ನು ಉಳಿಸಿಕೊಳ್ಳಲು ಬಯಸಿದೆ. ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಎಲ್‌ಜೆಪಿ ನೀಡಿರುವ ಸ್ಥಾನಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಜೆಡಿಯು ಚುನಾವಣಾ ಸಂಭವನೀಯತೆಗಳನ್ನೂ ಹಾಳು ಮಾಡುವ ನಿರೀಕ್ಷೆ ಹೊಂದಿದೆ  ಎಂದು ಮೂಲಗಳು ತಿಳಿಸಿವೆ.


'ಬಿಹಾರ್ ಫಸ್ಟ್' ದೃಷ್ಟಿಕ್ಷೇಪಕ್ಕೆ ಬೆಂಬಲ ಕೋರಿದ ಚಿರಾಗ್ ಪಾಸ್ವಾನ್
ಇದಕ್ಕೂ ಮೊದಲು ಲೋಕ ಜನಶಕ್ತಿ ಪಕ್ಷದ (LJP) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ತಮ್ಮ ಪಕ್ಷದ "ಬಿಹಾರಕ್ಕೆ ಪ್ರಾಥಮಿಕತೆ, ಬಿಹಾರಿಗೆ ಪ್ರಾಥಮಿಕತೆ" ದೃಷ್ಟಿಕ್ಷೇಪಕ್ಕಾಗಿ ಜನರ ಆಶೀರ್ವಾದ" ಕೋರಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಅಡಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸುತ್ತಿಲ್ಲ ಎಂಬ ಸಂಕೇತಗಳನ್ನು ಈ ಪತ್ರಿಕೆಯಲ್ಲಿ ಕಂಡುಬಂದಿದ್ದವು.


ಇದನ್ನು ಓದಿ-ಬಿಹಾರ ಚುನಾವಣೆ: ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಮಹಾಮೈತ್ರಿ ಒಕ್ಕೂಟದ ಸಿಎಂ ಅಭ್ಯರ್ಥಿ


ಚಿರಾಗ್ ಪಾಸ್ವಾನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಒಂದು ಹೇಳಿಕೆಯಲ್ಲಿ ಶ್ಲಾಘಿಸಿದ್ದಾರೆ ಮತ್ತು ತಮ್ಮ ಪಕ್ಷದ (LJP) ಎಲ್ಲ ಅಭ್ಯರ್ಥಿಗಳು ಪ್ರಧಾನಮಂತ್ರಿಯ ಕೈಗಳನ್ನು ಬಲಪಡಿಸುತ್ತಾರೆ ಎಂದು ಹೇಳಿದ್ದಾರೆ. ಮೋದಿಯವರ ಪ್ರೇರಣೆಯಿಂದ ದೃಷ್ಟಿಪತ್ರ ಸಿದ್ಧಪಡಿಸಿರುವುದಾಗಿ ಹೇಳಿರುವ ಚಿರಾಗ್ ಪಾಸ್ವಾನ್, ತಮಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದ ಕುರಿತು ಅಸಮಾಧಾನವಿದೆ ಎಂದು ಹೇಳಿದ್ದರು.


ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಭಾವಚಿತ್ರವೊಂದನ್ನು ಟ್ವಿಟ್ಟರ್ ಖಾತೆಯ ಮೂಅಲಕ ಹಂಚಿಕೊಂಡಿದ್ದ ಚಿರಾಗ್, " ಬಿಹಾರ್ ಅನ್ನು ನಂಬರ್ 1 ಮಾಡಲು ಹಾಗೂ ಕಳೆದುಹೋದ ಬಿಹಾರದ ಅಸ್ತಿತ್ವವನ್ನು ಮರುಕಳಿಸಲು ನೀವು ನನಗೆ ಆಶೀರ್ವಾದ ಮಾಡಲಿರುವಿರಿ ಎಂಬ ನಂಬಿಕೆ ಅಷ್ಟೇ ಅಲ್ಲ ವಿಶ್ವಾಸ ತಮಗಿದೆ" ಎಂದು ಹೇಳಿದ್ದರು. ಇದರಿಂದ ನಾವು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲಿದ್ದೇವೆ ಎಂದು ಚಿರಾಗ್ ಹೇಳಿದ್ದರು.