ನವದೆಹಲಿ: ಉತ್ತರ ಖಂಡದ ಉತ್ತರಾಕ್ಷಿ ಜಿಲ್ಲೆಯ ಗ್ರಾಮಸ್ಥರು ಈಗ ವಿದ್ಯುತ್ ಸೌಕರ್ಯ ಸೇರಿ ಮೂಲಭೂತ ಸೌಲಭ್ಯವಿಲ್ಲವೆಂದು ಮುಂಬರುವ ಲೋಕಸಭಾ ಚುನಾವಣೆ ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಉತ್ತರಾಕ್ಷಿ ಜಿಲ್ಲೆಯಲ್ಲಿನ ಸುಮಾರು ಒಟ್ಟು 68 ಹಳ್ಳಿಗಳು ಇಂತಹ ಹೀನಾಯ ಸ್ಥಿತಿಯಲ್ಲಿವೆ ಎಂದು ತಿಳಿದುಬಂದಿದೆ.ಇದರಲ್ಲಿ ಸುಮಾರು 40 ಹಳ್ಳಿಗಳಲ್ಲಿ ಗ್ರಿಡ್ ಆಧಾರಿತ ವಿದ್ಯುತ್ ಸೌಕರ್ಯವಿಲ್ಲದೆ ಈಗ ಕತ್ತಲೆಯಲ್ಲಿದ್ದಾರೆ ಎನ್ನಲಾಗಿದೆ.ಇದರ ಜೊತೆ ರಸ್ತೆ, ಶಾಲೆ,ಹಾಗೂ ಇತರ ಮೂಲಭೂತ ಸೌಕರ್ಯಗಳು ಇಲ್ಲವೆಂದು ಹೇಳಲಾಗಿದೆ.


ಈ ಕುರಿತಾಗಿ ಈಗ ಎಎನ್ ಐ ಸುದ್ದಿಸಂಸ್ಥೆಗೆ ಮಾತನಾಡಿರುವ ಸ್ಥಳೀಯ ಉಪೇಂದ್ರ ಚೌಹಾನ್ "ನಮಗೆ ಯಾವುದೇ ಸೌಲಭ್ಯಗಳು ಇಲ್ಲಿ ಇಲ್ಲ, ನಾವು ಈಗ ಸರ್ಕಾರದಿಂದ ನಿರಾಸೆಗೊಂಡಿದ್ದೇವೆ.ಇದುವರೆಗೆ ಸಚಿವರಾಗಲಿ ಅಥವಾ ಶಾಸಕರಾಗಲಿ ಯಾರೂ ಕೂಡ ಇಲ್ಲಿಗೆ ಭೇಟಿ ನೀಡಿಲ್ಲವೆಂದರು.ಒಂದು ವೇಳೆ ಅವರು ಬಂದರೋ ಸಹಿತ  ಗೆಸ್ಟ್ ಹೌಸ್ ನಲ್ಲಿ ಉಳಿಯುತ್ತಾರೆ ಆದ್ದರಿಂದ ನಾವು ಈ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದೇವೆ" ಎಂದು ತಿಳಿಸಿದರು.