ನವದೆಹಲಿ:  ಲಾಕ್‌ಡೌನ್ ಬಿಸಿ ದೇಶದ ಅತಿ ಹಳೆಯ ಮತ್ತು ಅತಿದೊಡ್ಡ ಸಮೂಹವಾದ ಟಾಟಾಕ್ಕೂ ತಟ್ಟಿದ್ದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟಾಟಾ ಕಂಪನಿ (Tata Company) ತನ್ನ ನೌಕರರಿಗೆ ಸಂಬಳ‌ ಕಡಿತ ಮಾಡಲು ಮುಂದಾಗಿದೆ.


COMMERCIAL BREAK
SCROLL TO CONTINUE READING

ಟಾಟಾ ಸನ್ಸ್‌ ಅಧ್ಯಕ್ಷರು ಮತ್ತು ಎಲ್ಲಾ ಆಪರೇಟಿಂಗ್ ಕಂಪನಿಗಳ ಸಿಇಓಗಳು ಸಂಘಟನೆಯು ವೆಚ್ಚ ಕಡಿತ ಮಾಡುವ ಕ್ರಮ ಕೈಗೊಂಡಿರುವುದರಿಂದ ನೌಕರರಿಗೆ ಶೇಕಡ 20ರಷ್ಟು ಸಂಬಳ ಕಡಿತ ಮಾಡಲಾಗುತ್ತಿದೆ.


ಟಾಟಾ ಸಮೂಹದ ಪ್ರಮುಖ ಮತ್ತು ಅತ್ಯಂತ ಲಾಭದಾಯಕ ಕಂಪನಿಯಾದ ಟಿಸಿಎಸ್ ನ ಸಿಇಓ ರಾಜೇಶ್ ಗೋಪಿನಾಥನ್ ಅವರು ವೇತನ ಕಡಿತ ಘೋಷಿಸುತ್ತಿದ್ದಂತೆ ಸಮೂಹದ ಇತರೆ ಸಂಸ್ಥೆಗಳು ಕೂಡ ಅದೇ ಹಾದಿ ಹಿಡಿದಿವೆ. ಪ್ರಸಕ್ತ ತ್ರೈಮಾಸಿಕದಲ್ಲಿ ಸಂಸ್ಥೆಯ ಉಳಿಯುವಿಕೆಗೆ ವೆಚ್ಛ ಕಡಿಮೆ ಮಾಡಿಕೊಳ್ಳಬೇಕಿದೆ. ಆದುದರಿಂದ ನೌಕರರ ವೇತನವನ್ನೂ ಶೇಕಡಾವಾರು ಕಡಿತ ಮಾಡಬೇಕಾಗುತ್ತದೆ ಎಂದು ಇಂಡಿಯನ್ ಹೊಟೆಲ್ಸ್ ಹೇಳಿದೆ.


ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಟ್ರೆಂಟ್, ಟಾಟಾ ಇಂಟರ್ನ್ಯಾಷನಲ್, ಟಾಟಾ ಕ್ಯಾಪಿಟಲ್ ಮತ್ತು ವೋಲ್ಟಾಸ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವ್ಯವಸ್ಥಾಪಕ‌ ನಿರ್ದೇಶಕರು ತಮ್ಮ ಸಂಸ್ಥೆಗಳ ನೌಕರರ ವೇತನ ಕಡಿತ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕಡಿತವು ಮುಖ್ಯವಾಗಿ ಪ್ರಸಕ್ತ ವರ್ಷದ ಬೋನಸ್‌ಗಳಲ್ಲಿರುತ್ತದೆ ಎಂದು ಸಮೂಹದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.


ನಮ್ಮ ಗುಂಪಿನ ಇತಿಹಾಸದಲ್ಲಿ ಹಿಂದೆಂದೂ ಅನುಭವಿಸದ ಸಂದರ್ಭ. ಪ್ರಸಕ್ತ ಸಂದಿಗ್ಧ ಸಂದರ್ಭವೂ ಉದ್ಯಮ ರಕ್ಷಣೆಗೆ ಕೆಲವು ಕಠಿಣ ಕ್ರಮಗಳನ್ನು  ಬಯಸುತ್ತದೆ. ಈ ಸಂದರ್ಭದಲ್ಲಿ ಅಗತ್ಯ ಕ್ರಮಗಳೆಲ್ಲವನ್ನೂ ನಾವು ಮಾಡುತ್ತೇವೆ. ಟಾಟಾ ಸಮೂಹವು ಸದಾ ನೌಕರರ ಹಿತ ಕಾದಿದೆ. ಈ ಕೆಟ್ಟ ಕಾಲದಲ್ಲೂ ನೌಕರರನ್ನು‌ ರಕ್ಷಿಸಲಿದೆ. ಅದಕ್ಕೆ ಬೇಕಾದ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಹೆಸರು ಹೇಳಲು ಇಚ್ಛಿಸದ ಸಮೂಹದ ಸಿಇಓ ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.


ಪ್ರತಿ ಕಂಪನಿಯು ತನ್ನ ಮಾನವ ಸಂಪನ್ಮೂಲ ನೀತಿ, ಆದಾಯ ಯೋಜನೆ ಮತ್ತು ಹಣದ ಹರಿವಿನ ನಿರ್ವಹಣೆಯನ್ನು ಪರಿಶೀಲಿಸುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಹೇಳಿದ್ದರು.


ಕೋವಿಡ್ ಸಾಂಕ್ರಾಮಿಕ ದೃಷ್ಟಿಯಲ್ಲಿ ಕ್ರಮಗಳು "ನಾವು ಸಹಾನುಭೂತಿ ಹೊಂದಿದ್ದೇವೆ ಮತ್ತು ಕಾರ್ಯಸಾಧ್ಯವಾದ ವ್ಯವಹಾರವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಕಂಪನಿಯು ಪ್ರತ್ಯೇಕವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ" ಎಂದು ಚಂದ್ರಶೇಖರನ್ ತಿಳಿಸಿದ್ದರು.


ಆದರೆ ಈಗ ವೇತನ ಕಡಿತ ಮಾಡಿರುವ ಬಗ್ಗೆ ಟಾಟಾ ಸನ್ಸ್ ಮತ್ತು ಹೆಚ್ಚಿನ ಗುಂಪು ಕಂಪನಿಗಳು ಈ ವಿಷಯದ ಬಗ್ಗೆ ತಮ್ಮ ಇಮೇಲ್‌ಗೆ ಪ್ರತಿಕ್ರಿಯಿಸಲಿಲ್ಲ. ಟಾಟಾ ಸ್ಟೀಲ್ ವಕ್ತಾರರು, ಸಂಭಾವನೆ ಕಡಿತ ಎನ್ನುವುದು ಟಾಟಾ ಸ್ಟೀಲ್ ಮಂಡಳಿಯ ಸಂಭಾವನೆ ಸಮಿತಿ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಈ ವಿಷಯದಲ್ಲಿ ಮುಂದೆ ಸಾಗುವ ಮಾರ್ಗವನ್ನು ಮೊದಲೇ ತಿಳಿಸುವುದು ಸೂಕ್ತವಲ್ಲ ಎಂದು ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.