ಪಣಜಿ : ಕೊರೋನಾ ನಿಯಂತ್ರಣಕ್ಕೆ ಗೋವಾ ರಾಜ್ಯಾದ್ಯಂತ ಜೂನ್ 7 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಟ್ವಿಟ್ ಮಾಡಿರುವ ಸಿಎಂ ಸಾವಂತ್(Pramod Savant), ಈಗಿರುವ ನಿಯಮಗಳಂತೆಯೇ ರಾಜ್ಯದಲ್ಲಿ ಜೂನ್ 7 ರ ಬೆಳಿಗ್ಗೆ 7 ಗಂಟೆಯವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಈ ಆದೇಶ ಜಾರಿಗೊಳಿಸಲಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಹೇಗೆ ಸಿಗುತ್ತಿದೆ..? ಕೇಂದ್ರ ಸರ್ಕಾರಕ್ಕೆ ದೆಹಲಿ ಪ್ರಶ್ನೆ


ಗೋವಾದಲ್ಲಿ ಸದ್ಯ ಲಾಕ್ ಡೌನ್ ಜಾರಿಯಲ್ಲಿದ್ದು, ಈ ಲಾಕ್ ಡೌನ್ ಇನ್ನೂ ಒಂದುವಾರ ವಿಸ್ತರಿಸಲು(Lockdown Extended) ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ಸದ್ಯ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ವಿವಿಧ ಉದ್ಯೋಗಗಳನ್ನು ನಡೆಸಲು ಅವಕಾಶ ನೀಡಲಾಗಿದೆ.


Phone Charging: ಫೋನ್ ಚಾರ್ಜ್ ಮಾಡುವಾಗ ನೀವು ಸಹ ಈ ತಪ್ಪುಗಳನ್ನು ಮಾಡುತ್ತೀರಾ, ಹಾಗಿದ್ದರೆ ಇಂದೇ ಸರಿಪಡಿಸಿಕೊಳ್ಳಿ


ವಾರದ ಸಂತೆ ಮತ್ತು ಮೀನು ಮಾರುಕಟ್ಟೆ ಬಂದ್(Fish Market Closed) ಮಾಡಲಾಗಿದೆ. ಸಿನೆಮಾ ಥಿಯೇಟರ್, ಈಜುಕೊಳ, ಕ್ಯಾಸಿನೊ, ಸಾಂಸ್ಕೃಂತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಗಳನ್ನು ಬಂದ್ ಮಾಡಲಾಗಿದೆ. ಇದೇ ನಿಯಮಾವಳಿಗಳು ಇನ್ನೂ ಒಂದು ವಾರಗಳ ಕಾಲ ಮುಂದುವರೆಯಲಿದೆ.


ಇದನ್ನೂ ಓದಿ : "ನಮಗೆ ಈ ರೀತಿ ಅವಮಾನ ಮಾಡಬೇಡಿ"-ಪ್ರಧಾನಿ ಮೋದಿ ವಿರುದ್ಧ ದೀದಿ ಟೀಕಾ ಪ್ರಹಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ