ನವದೆಹಲಿ: ಕೇಂದ್ರ ಸರ್ಕಾರ ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ನ್ನು ಮೇ 31 ರವರೆಗೆ ವಿಸ್ತರಿಸಿದೆ.ಆದರೆ ಈ ಲಾಕ್ ಡೌನ್ ಕೆಲವು ನಿರ್ಭಂದಗಳನ್ನು ಸಡಿಲಗೋಳಿಸಲಾಗಿದೆ.



COMMERCIAL BREAK
SCROLL TO CONTINUE READING

ಕೇಂದ್ರ ಗೃಹ ಸಚಿವಾಲಯದ ನೂತನ ಮಾರ್ಗಸೂಚಿಗಳು ಇಲ್ಲಿವೆ:


1.ಕಂಟೈನ್ ಮೆಂಟ್ ವಲಯ ಹೊರತುಪಡಿಸಿ, ಅಂತರ್ ರಾಜ್ಯ ಬಸ್ ಹಾಗೂ ಪ್ರಯಾಣಿಕರ ವಾಹನ ಸಂಚಾರಕ್ಕೆ ಎರಡೂ ರಾಜ್ಯಗಳು ಒಪ್ಪಿದರೆ ಅನುಮತಿ
2. ಕೆಂಪು, ಕಿತ್ತಳೆ, ಹಸಿರು ಹಾಗೂ ಕಂಟೈನ್ ಮೆಂಟ್ ವಲಯಗಳ ಕುರಿತು ಕೇಂದ್ರ  ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಿ ಆಯಾ ರಾಜ್ಯಸರ್ಕಾರಗಳಿಂದ ನಿರ್ಧಾರ
3. ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೆ ಅನಗತ್ಯ ಚಟುವಟಿಕೆಗಳಿಗೆ ವ್ಯಕ್ತಿಗಳ ಸಂಚಾರ ಕಡ್ಡಾಯವಾಗಿ ನಿಷೇಧ
4. ನಿಷೇಧಿತ ಚಟುವಟಿಕೆ ಹೊರತುಪಡಿಸಿ ಎಲ್ಲಾ ಚಟುವಟಿಕೆಗಳಿಗೆ ಅವಕಾಶ. ಕಂಟೈನ್ ಮೆಂಟ್ ವಲಯಗಳಲ್ಲಿ ಅತ್ಯಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ 
5.ಅತ್ಯಗತ್ಯ ಸೇವೆ ಹೊರತುಪಡಿಸಿ ವಿದೇಶಿ ಮತ್ತು ದೇಶೀಯ ವಿಮಾನಸಂಚಾರ ಮೇ31ರವರೆಗೆ ರದ್ದು
6. ಮೆಟ್ರೋ ಸೇವೆ ಮೇ 31ರವರೆಗೆ ಸ್ಥಗಿತ
7. ಶಾಲಾ-ಕಾಲೇಜು ಮೇ31ರವರೆಗೆ ಮುಚ್ಚಲಾಗುವುದು. ಆನ್ ಲೈನ್ ಶಿಕ್ಷಣ/ದೂರಶಿಕ್ಷಣಕ್ಕೆ ಅವಕಾಶ
8. ಹೋಮ್ ಡೆಲಿವಿರಿ ಹೊರತು ಪಡಿಸಿ ಹೋಟಲ್, ರೆಸ್ಟೋರೆಂಟ್ ಗಳಿಗೆ ಮೇ31ರವರೆಗೆ ನಿಷೇಧ.
9.ಸಿನಿಮಾ ಮಂದಿರ, ಮಾಲ್ ಗಳು, ಜಿಮ್ನಾಶಿಯಂ, ಈಜುಕೊಳಗಳಿಗೆ ನಿಷೇಧ
10. ಕ್ರೀಡಾ ಸಂಕೀರ್ಣ,ಸ್ಟೇಡಿಯಂಗಳಲ್ಲಿ ವೀಕ್ಷಕರಿಲ್ಲದೆ ಚಟುವಟಿಕೆಗಳಿಗೆ ಅವಕಾಶ
11.ಧಾರ್ಮಿಕ, ರಾಜಕೀಯ, ಸಾಮಾಜಿಕ ಕಾರ್ಯಕ್ರಮಗಳಿಗೆ ಮೇ31ರವರೆಗೆ ನಿಷೇಧ.
12. ಎಲ್ಲಾ ಧರ್ಮೀಯರ ಧಾರ್ಮಿಕ ಸಮಾರಂಭಗಳಿಗೆ ನಿಷೇಧ ಮುಂದುವರಿಕೆ
13. ಕಂಟೈನ್ ಮೆಂಟ್ ವಲಯಗಳಲ್ಲಿ  ಸಂಪರ್ಕ ಕಂಡುಹಿಡಿಯುವುದು, ಮನೆ-ಮನೆ ಕಣ್ಗಾವಲು ಚಟುವಟಿಕೆ ತೀವ್ರಗೊಳಿಸಬೇಕು.