ಚೆನ್ನೈ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ಆಡಳಿತಾರೂಢ ಪಕ್ಷ ಎಐಎಡಿಎಂಕೆ ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪಕ್ಷ ಗೆದ್ದರೆ ರಾಷ್ಟ್ರೀಯ ಮಟ್ಟದ ಬಡತನ ನಿರ್ಮೂಲನ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪ್ರತಿ ಕುಟುಂಬಕ್ಕೆ ತಿಂಗಳಿಗೆ 1,500 ರೂ. ನೀಡುವುದಾಗಿ ಭರವಸೆ ನೀಡಿದೆ.


COMMERCIAL BREAK
SCROLL TO CONTINUE READING

ಇದಲ್ಲದೆ ನೀರು ನಿರ್ವಹಣೆ ಯೋಜನೆ, ನದಿಗಳ ಸಂಪರ್ಕ ಮತ್ತು ಬರ-ಪೀಡಿತ ಪ್ರದೇಶಗಳಿಗೆ ನೀರು ತಿರುಗಿಸುವುದೂ ಸೇರಿದಂತೆ ಹಲವು ಭರವಸೆಗಳನ್ನು ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ.


ಎಐಎಡಿಎಂಕೆ ಕೋಆರ್ಡಿನೇಟರ್ ಉಪ ಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಮತ್ತು ಪಕ್ಷದ ಸಹ-ಸಂಯೋಜಕ ಮತ್ತು ಮುಖ್ಯಮಂತ್ರಿ ಎಡಪಾಡಿ ಕೆ. ಪಳನಿಸ್ವಾಮಿ ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.


'ಅಮ್ಮ ರಾಷ್ಟ್ರೀಯ ಪಾವರ್ಟಿ ನಿರ್ಮೂಲನೆ ಯೋಜನೆ' ಬಿಪಿಎಲ್ ಕುಟುಂಬಗಳಿಗೆ 1,500 ರೂ. ಮಾಸಿಕ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಎಐಎಡಿಎಂಕೆ ಕೇಂದ್ರವನ್ನು ಒತ್ತಾಯಿಸಲಿದೆ ಎಂದು ಪನ್ನೀರ್ ಸೆಲ್ವಂ ಭರವಸೆ ನೀಡಿದರು.


ದೇಶದಲ್ಲಿ ವೈದ್ಯಕೀಯ ಪ್ರವೇಶಕ್ಕೆ ಅಗತ್ಯವಿರುವ NEET ಪರೀಕ್ಷೆಯಿಂದ ತಮಿಳುನಾಡಿನ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಬೇಕೆಂದು ಪಕ್ಷವು ತನ್ನ ನಿಲುವನ್ನು ಪುನರುಚ್ಚರಿಸಲಿದೆ ಎಂದು ಪನ್ನೀರ್ ಸೆಲ್ವಂ ಇದೇ ವೇಳೆ ತಿಳಿಸಿದರು.