Lok Sabha Elections 2024 phase 3 updates: ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಮತದಾನ ಆರಂಭವಾಗಿದೆ. ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಅಂದರೆ 07 ಮೇ 2024 ರಂದು ನಡೆಯಲಿದೆ.  ಈ ಚುನಾವಣೆಯೊಂದಿಗೆ ದೇಶದಲ್ಲಿ ಗುಜರಾತ್, ಅಸ್ಸೋಂ, ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಬೆಳಗ್ಗೆ 7 ರಿಂದ ಸಂಜೆ 5 ರ ವರೆಗೆ ಮತದಾನ ನಡೆಯಲಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Lokshabha Elections 2024: ಮೇ 14ರಂದು ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ಕಣದಲ್ಲಿರುವ ಘಟಾನುಘಟಿ ನಾಯಕರು: 


ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ: 


ಉತ್ತರ ಕರ್ನಾಟಕ ಭಾಗದ ಚಿಕ್ಕೋಡಿ, ಬೆಳಗಾವಿ , ಶಿವಮೊಗ್ಗ, ರಾಯಚೂರು, ಬೀದರ್​, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ಕಲಬುರಗಿ, ಉತ್ತರ ಕನ್ನಡ, ದಾವಣಗೆರೆ, ಹಾವೇರಿ, ಧಾರವಾಡ ಲೋಕಸಭಾ ಕ್ಷೇತ್ರಗಳಿಗೆ ಮೇ 07 ರಂದು ಮತದಾನ ನಡೆಯಲಿದೆ. 


227 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ : 


ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿಕ್ಕೋಡಿ 17 ಜನ ಪುರುಷರು, ಓರ್ವ ಮಹಿಳೆ ಕಣದಲ್ಲಿದ್ದಾರೆ. ವಿಜಯಪುರದಲ್ಲಿ ಆರು ಪುರುಷರು, ಇಬ್ಬರು ಮಹಿಳೆಯರು, ಬೆಳಗಾವಿಯಲ್ಲಿ 13 ಜನ ಪುರುಷರು, ಬಾಗಲಕೋಟೆಯಲ್ಲಿ 20 ಪುರುಷರು, ಇಬ್ಬರು ಮಹಿಳೆಯರು, ಧಾರವಾಡದಲ್ಲಿ 17 ಜನ ಪುರುಷರು,ಕಲಬುರಗಿಯಲ್ಲಿ 12 ಜನ ಪುರುಷರು, ಓರ್ವ ಮಹಿಳೆ, ಬೀದರ್ 18 ಜನ ಪುರುಷರು, ದಾವಣಗೆರೆಯಲ್ಲಿ 25 ಜನ ಪುರುಷ ಐವರು ಮಹಿಳೆಯರು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 17 ಜನ ಪುರುಷ, ಇಬ್ಬರು ಮಹಿಳೆಯರು, ರಾಯಚೂರಿನಲ್ಲಿ ಏಳು ಜನ ಪುರುಷರು, ಓರ್ವ ಮಹಿಳೆ, ಬಳ್ಳಾರಿ 10 ಜನ ಪುರುಷರು, ಹಾವೇರಿಯಲ್ಲಿ 11 ಜನ ಪುರುಷರು ಹಾಗೂ ಮೂವರು ಮಹಿಳಾ ಅಭ್ಯರ್ಥಿಗಳು, ಉತ್ತರ ಕನ್ನಡದಲ್ಲಿ 12 ಜನ ಪುರುಷರು ಹಾಗೂ ಓರ್ವ ಮಹಿಳೆ, ಶಿವಮೊಗ್ಗದಲ್ಲಿ 21 ಜನ ಪುರುಷರು ಇಬ್ಬರು ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 


ಈ ಚುನಾವಣೆಯೊಂದಿಗೆ ದೇಶಾದ್ಯಂತ 283 ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಂತಾಗುತ್ತದೆ. ಇನ್ನು ನಾಲ್ಕು ಹಂತಗಳಲ್ಲಿ 262 ಸಂಸದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು ಏಳು ಹಂತದ ಚುನಾವಣೆಯ ನಂತರ ಜೂನ್ 04 ರಂದು ಮತ ಎಣಿಕೆ ನಡೆಯಲಿದೆ.


ಇದನ್ನೂ ಓದಿ: ICSE Board 12th Result 2024: ಸಿಐಎಸ್‌ಸಿಇ 10 ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ.. ಮಾರ್ಕ್‌ಶೀಟ್ ಪರಿಶೀಲಿಸಲು ಇಲ್ಲಿದೆ ನೇರ ಲಿಂಕ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.