ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹುಟ್ಟುಹಬ್ಬದ ಶುಭಾಶಯಗಳೇ ಇಂದು ಹರಿದು ಬಂದಿವೆ.


COMMERCIAL BREAK
SCROLL TO CONTINUE READING

ಆದರೆ ಸದನದಲ್ಲಿ ರಾಹುಲ್ ಗಾಂಧಿಗೆ ಆರ್ಪಿಐ ನ ರಾಮದಾಸ್ ಅಥಾವಾಲೆ ಶುಭಾಶಯಗಳು ಸದನದಲ್ಲಿ ಹಾಜರಿದ್ದ ಎಲ್ಲ ಆಡಳಿತ ಮತ್ತು ವಿಪಕ್ಷದ ನಾಯಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು. ಇಂದು ಬೆಳಿಗ್ಗೆ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಆಯ್ಕೆಯಾದ ಸ್ಪೀಕರ್ ಆಗಿ ಆಯ್ಕೆಯಾದ  ಓಂ ಬಿರ್ಲಾ ಅವರಿಗೆ ಸ್ವಾಗತ ಭಾಷಣ ಮಾಡಲು ಅವರು ನಿಂತಾಗ ಅಥಾವಾಲೆ "ಇದು ರಾಹುಲ್-ಜಿ ಅವರ ಜನ್ಮದಿನವೇ? ಇದು ಇಂದು ಅಥವಾ ನಾಳೆ?"  ಎಂದು ಪ್ರಶ್ನಿಸಿದರು.



ಆಗ ಎಲ್ಲರು ತಲೆಯಾಡಿಸಿ ದೃಡಪಡಿಸಿದಾಗ ಮಾತು ಮುಂದುವರೆಸಿದ ಅಥವಾಲೆ" ಸರಿ, ಅವರು ನನ್ನ ಸ್ನೇಹಿತ ಮತ್ತು ನಿಮಗೆ ಇಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಿದ್ದರಿಂದ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನನ್ನ ಪ್ರಕಾರ, ನೀವು ಸಾಕಷ್ಟು ಪ್ರಯತ್ನಿಸಿದ್ದೀರಿ ... ಆದರೆ  ಈ ಸಂಗತಿಗಳು ಪ್ರಜಾಪ್ರಭುತ್ವದಲ್ಲಿ ನಡೆಯುತ್ತವೆ. ಜನರಿಗೆ ಏನು ಬೇಕು - ಆ ಪಕ್ಷ ಅಧಿಕಾರಕ್ಕೆ ಬರುತ್ತದೆ ... ನೀವು ಅಧಿಕಾರದಲ್ಲಿದ್ದಾಗ, ನಾನು ನಿಮ್ಮೊಂದಿಗೆ. ಈ ಬಾರಿ ಚುನಾವಣೆಗೆ ಮುಂಚಿತವಾಗಿ, ಕಾಂಗ್ರೆಸ್ ಜನರು ನನಗೆ ಹೇಳಿದರು - 'ನೀವು ಯಾಕೆ ಆ ಕಡೆ ಇದ್ದೀರಿ, ಇಲ್ಲಿಗೆ ಬನ್ನಿ' ಆದರೆ ನಾನು ಅಲ್ಲಿ ಇದ್ದು ಏನು ಮಾಡಬೇಕು ?' ಏಕೆಂದರೆ ಗಾಳಿ ಮೋದಿ-ಜಿ ಕಡೆಗೆ  ಇದೆ ಎಂದು ನನಗೆ ತಿಳಿದಿದೆ. " ಎಂದು  ಅಥವಾಳೆ ಹೇಳಿದಾಗ ಸೋನಿಯಾ ಗಾಂಧಿ ಹಾಗೂ ನರೇಂದ್ರ ಮೋದಿ ಸೇರಿದಂತೆ ಎಲ್ಲ ಸದಸ್ಯರು ನಗೆಗಡಲಲ್ಲಿ ತೇಲಿದರು.