ಲೋಕಸಭಾ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಶಶಿ ತರೂರ್ ಆಯ್ಕೆ
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಿದೇಶಾಂಗ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಶಶಿ ತರೂರ್ ಅವರನ್ನು ನಾಮಕರಣ ಮಾಡಿದ್ದಾರೆ.
ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಿದೇಶಾಂಗ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಶಶಿ ತರೂರ್ ಅವರನ್ನು ನಾಮಕರಣ ಮಾಡಿದ್ದಾರೆ.
ಈ ಹಿಂದಿನ ಲೋಕಸಭೆಯಲ್ಲಿ ಅವರು ಶಶಿ ತರೂರ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಅವರನ್ನು ಅಧ್ಯಕ್ಷರಾಗಿ ಮುಂದುವರೆಸದ ಹಿನ್ನಲೆಯಲ್ಲಿ ಶಶಿ ತರೂರ್ ಅವರು ಪ್ರತಿಪಕ್ಷದ ನಾಯಕರು ನೇತೃತ್ವವಹಿಸುವ ಸಂಪ್ರದಾಯಕ್ಕೆ ಕೊನೆಹಾಡಲು ನಿರ್ಧರಿಸಲಾಗಿದೆ ಎಂದು ತರೂರ್ ಆರೋಪಿಸಿದ್ದರು.
ಈ ಹಿಂದೆ ಭಾರತ ಮತ್ತು ಚೀನಾ ನಡುವಿನ ಡೋಕ್ಲಾಮ್ ವಿವಾದದ ಬಗ್ಗೆ ತರೂರ್ ಅವರ ಅಧ್ಯಕ್ಷತೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಮಿತಿಯು ಆಗಿನ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರನ್ನು ವಿಚಾರಣೆಗೆ ಕರೆಸಿಕೊಂಡಿತ್ತು. ಇದಾದ ನಂತರ ಸಮಿತಿಯು ಜೈಶಂಕರ್ ಅವರ ಉತ್ತರಾಧಿಕಾರಿಯಾಗಿದ್ದ ವಿಜಯ್ ಗೋಖಲೆ ಅವರನ್ನು ಇದೇ ವಿಷಯದ ಬಗ್ಗೆ ಕರೆದಿತ್ತು
ತಿರುವನಂತಪುರಂ ಸಂಸದ ಶಶಿ ತರೂರ್ ಈಗ ಮಾಹಿತಿ ಮತ್ತು ತಂತ್ರಜ್ಞಾನದ ಸಮಿತಿಯ ಅಧ್ಯಕ್ಷತೆ ವಹಿಸಿದ್ದಾರೆ.