Loksabha Election : ಪುಣೆಯ ಬಾರಾಮತಿ ಮತಗಟ್ಟೆಯಲ್ಲಿ ಇವಿಎಂ ಇಟ್ಟಿದ್ದೆಡೆ 45 ನಿಮಿಷ ಸಿ.ಸಿ.ಟಿ.ವಿ. ಕ್ಯಾಮೆರಾ ಸ್ಥಗಿತ
Loksabha Election : ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತಯಂತ್ರ ಗಳನ್ನು ಇಟ್ಟಿದ ಗೋದಾಮಿನಲ್ಲಿ 45 ನಿಮಿಷ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್ ಆಫ್ ಆಗಿದ್ದು, ಇದು ಅನುಮಾನಾಸ್ಪದವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ.
ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತಯಂತ್ರ ಗಳನ್ನು ಇಟ್ಟಿದ ಗೋದಾಮಿನಲ್ಲಿ 45 ನಿಮಿಷ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್ ಆಫ್ ಆಗಿದ್ದು, ಇದು ಅನುಮಾನಾಸ್ಪದವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ.
ಇದನ್ನು ಓದಿ : ಬಿಹಾರದ ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ವಿಧಿವಶ
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಆಹಾರ ನಿಗಮದ ಗೋದಾಮಿನಲ್ಲಿಇವಿಎಂ ಮಷಿನ್ ಗಳನ್ನು ಇರಿಸಿದ್ದ, ಜಾಗದಲ್ಲಿನ ಸಿಸಿಟಿವಿ ಕ್ಯಾಮೆರಾ ಕೆಲವು ಸಮಯಗಳ ಕಾಲ ಅದನ್ನು ಸ್ವಿಚ್ ಆಫ್ ಮಾಡಲಾಗಿತ್ತು ಇದರ ಕುರಿತಂತೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಆಹಾರ ನಿಗಮದ ಗೋದಾಮೊಂದರಲ್ಲಿ ಇವಿಎಂಗಳನ್ನು ಇರಿಸಲಾಗಿತ್ತು. ಗೋದಾಮಿನಲ್ಲಿ ವಿದ್ಯುತ್ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ಕ್ಯಾಮೆರಾದ ಕೇಬಲ್ ತೆಗೆಯಲಾಗಿತ್ತು. ಮತ್ತು ಕೇಬಲ್ ತೆಗೆದಿದ್ದ ಕಾರಣದಿಂದ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಸ್ವಲ್ಪ ಸಮಯಗಳ ಕಾಲ ಕಾರ್ಯ ನಿರ್ವಹಿಸಿಲ್ಲ ಎಂದು ಅಲ್ಲಿಯ ಉಸ್ತುವಾರಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಬೆಳಿಗ್ಗೆ 10.30ರಿಂದ 11.15ರವರೆಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್ ಆಫ್ ಆಗಿದ್ದವು ಎಂದು, ಬಾರಾಮತಿ ಅಭ್ಯರ್ಥಿ ಸುಪ್ರಿಯಾ ಸುಳೆ ಅವರ ಚುನಾವಣಾ ಪ್ರತಿನಿಧಿಯಾದ ಲಕ್ಷ್ಮೀಕಾಂತ್ ಕೆ. ತಿಳಿಸಿದ್ದಾರೆ. ‘ಸಿ.ಸಿ.ಟಿ.ವಿಗಳು ಸ್ವಿಚ್ ಆಫ್ ಆದ ಕುರಿತು ಪೊಲೀಸರ ಗಮನಕ್ಕೆ ತಂದಿದ್ದೆವು . ಇಲ್ಲಿ ಇದ್ದವರು ತಾಂತ್ರಿಕ ಕಾರಣದ ಸ್ಪಷ್ಟನೆಯನ್ನು ನೀಡಿದರು. ಈ ಕುರಿತು ಚುನಾವಣಾಧಿಕಾರಿಗೆ ತಕರಾರು ಅರ್ಜಿ ಸಲ್ಲಿಸುತ್ತೇವೆ’ ಎಂದು ಲಕ್ಷ್ಮೀಕಾಂತ್ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ : IPL : ಗುಜರಾತ್ Vs ಕೋಲ್ಕತ್ತಾ, ಮಳೆಯಿಂದ ಪಂದ್ಯ ರದ್ದು
ಬಾರಾಮತಿ ಲೋಕಸಭಾ ಕ್ಷೇತ್ರದ ಮತದಾನದ ನಂತರ, ಇಂದು ಬೆಳಿಗ್ಗೆ 45 ನಿಮಿಷಗಳ ಕಾಲ ಇವಿಎಂಗಳನ್ನು ಇರಿಸಲಾಗಿರುವ ಗೋಡೌನ್‌ನಲ್ಲಿನ ಸಿಸಿಟಿವಿಯನ್ನು ಸ್ವಿಚ್ ಆಫ್ ಮಾಡಲಾಗಿದೆ. ಇವಿಎಂನಂಥ ಅತ್ಯಂತ ಮಹತ್ವದ ವಸ್ತು ಇರಿಸಲಾಗಿರುವ ಸಿಸಿಟಿವಿ ಸ್ವಿಚ್ ಆಫ್ ಆಗಿರುವುದು ಅನುಮಾನಾಸ್ಪದವಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.