`ಲೋಕ` ಸಮರಕ್ಕೆ ಮುಹೂರ್ತ ಫಿಕ್ಸ್: ಏಪ್ರಿಲ್ 11 ರಿಂದ ಚುನಾವಣೆ ಆರಂಭ, ಮೇ 23ಕ್ಕೆ ಫಲಿತಾಂಶ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಹಾಲಿ ಕೇಂದ್ರ ಸರಕಾರದ ಅಧಿಕಾರಾವಧಿ ಜೂನ್ 3ರಂದು ಕೊನೆಗೊಳ್ಳಲಿದೆ.
ನವದೆಹಲಿ: ಭಾರೀ ಕುತೂಹಲ ಮೂಡಿಸಿದ್ದ ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ಏಪ್ರಿಲ್ 11ರಂದು ನಡೆಯಲಿದೆ. ಮೇ 23ರಂದು ಎಲ್ಲಾ ಹಂತಗಳ ಮತದಾನದ ಫಲಿತಾಂಶ ಪ್ರಕಟವಾಗಲಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ವೇಳಾಪಟ್ಟಿ - ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆಗೆ ಮತದಾನ
* ಮೊದಲ ಹಂತದಲ್ಲಿ 20 ರಾಜ್ಯಗಳ 91 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 11ರಂದು ಚುನಾವಣೆ ನಡೆಯಲಿದೆ.
* ಎರಡನೇ ಹಂತದಲ್ಲಿ 13 ರಾಜ್ಯಗಳ 97 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 18ರಂದು ಚುನಾವಣೆ ನಡೆಯಲಿದೆ.
* ಮೂರನೇ ಹಂತದಲ್ಲಿ 14 ರಾಜ್ಯಗಳ 115 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ.
* ನಾಲ್ಕನೇ ಹಂತದಲ್ಲಿ 9 ರಾಜ್ಯಗಳ 71 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 29ರಂದು ಚುನಾವಣೆ ನಡೆಯಲಿದೆ.
* ಐದನೇ ಹಂತದಲ್ಲಿ 7 ರಾಜ್ಯಗಳ 51 ಲೋಕಸಭಾ ಸ್ಥಾನಗಳಿಗೆ ಮೇ 6ರಂದು ಚುನಾವಣೆ ನಡೆಯಲಿದೆ.
* ಆರನೇ ಹಂತದಲ್ಲಿ 7 ರಾಜ್ಯಗಳ 59 ಲೋಕಸಭಾ ಸ್ಥಾನಗಳಿಗೆ ಮೇ 12ರಂದು ಚುನಾವಣೆ ನಡೆಯಲಿದೆ.
* ಏಳನೇ ಹಂತದಲ್ಲಿ 8 ರಾಜ್ಯಗಳ 59 ಲೋಕಸಭಾ ಸ್ಥಾನಗಳಿಗೆ ಮೇ 19ರಂದು ಚುನಾವಣೆ ನಡೆಯಲಿದೆ.
[[{"fid":"175415","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಹಾಲಿ ಇರುವ 16ನೇ ಲೋಕಸಭೆಯ ಅವಧಿ ಜೂನ್ 3ಕ್ಕೆ ಅಂತ್ಯಗೊಳ್ಳಲಿದೆ. 2014ರ ಲೋಕಸಭಾ ಚುನಾವಣೆಗೆ ಮಾರ್ಚ್ 5ರಂದು ದಿನಾಂಕ ಘೋಷಣೆ ಮಾಡಿತ್ತು. ಅಂದು 9 ಹಂತದಲ್ಲಿ ಚುನಾವಣೆ ನಡೆದಿತ್ತು.