ಥಾಣೆ: ರೈಲುಗಳಲ್ಲಿ ಪ್ರಯಾಣಿಕರಿಗೆ ಸೀಟು ನೀಡುವ ಮೂಲಕ ಲೂಟಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಥಾಣೆ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ರಾತ್ರಿ ವೇಳೆ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಪ್ರಯಾಣಿಸುತ್ತಿದ್ದವರನ್ನು ಗುರಿಯಾಗಿಸಿಕೊಂಡು ಈ ಲೂಟಿ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಪರಿಚಯ ಮಾಡಿಕೊಳ್ಳುವವರಂತೆ ನಟಿಸಿ ಜನರನ್ನು ಲೂಟಿ ಮಾಡುತ್ತಿದ್ದ ಕಳ್ಳರು:
ಕಲ್ಯಾಣ್ ರೈಲ್ವೇ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಖದೀಮರು ಮುಂಬಯಿ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್ಟಿಟಿ) ಯಿಂದ ಹೊರಡುವ ರೈಲುಗಳಲ್ಲಿ ಪ್ರಯಾಣಿಕರೊಂದಿಗೆ ಸ್ನೇಹದಿಂದ ವರ್ತಿಸಿ, ಅವರಿಗೆ ಸೀಟು ನೀಡುವ ಭರವಸೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.


ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಬಂಧನ:
ಸ್ನೇಹದಿಂದ ವರ್ತಿಸಿ ಅವರಿಗೆ ಸೀಟು ಬಿಟ್ಟು ಕೊಡುತ್ತಿದ್ದ ಈ ಆರೋಪಿಗಳು, ನಂತರದಲ್ಲಿ ಅವರ ಪ್ರಯಾಣಿಕರ ಬಳಿ ಇರುತ್ತಿದ್ದ ನಗದು, ಮೊಬೈಲ್ ಫೋನ್ ಮತ್ತು ಬೆಲೆಬಾಳುವ ವಸ್ತುಗಳನ್ನು ಕಳುವು ಮಾಡುತ್ತಿದ್ದರು ಎನ್ನಲಾಗಿದೆ. ಕೆಲವೊಮ್ಮೆ ಪ್ರಯಾಣಿಕರಲ್ಲಿ ಭಯಹುಟ್ಟಿಸಲು ಚಾಕು ತೋರಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕಲ್ಯಾಣ್ ರೈಲ್ವೇ ಪೊಲೀಸ್ ಈ ನಿಟ್ಟಿನಲ್ಲಿ ದೂರು ಸ್ವೀಕರಿಸಿದ ನಂತರ ತನಿಖೆ ಆರಂಭಿಸಿದರು. ವಿಭಿನ್ನ ರೈಲ್ವೇ ನಿಲ್ದಾಣಗಳ ಸಿಸಿಟಿವಿ ಫೂಟೇಜ್ ಗಳನ್ನೂ ಪರಿಶೀಲಿಸಿದ್ದ ಪೊಲೀಸರು ಮಂಗಳವಾರ ಚಂದ್ ಖಾನ್ (23), ಅಫ್ಜಲ್ ಖಾಸಿಮ್ ಖಾನ್ (22), ದಿನ್ ಮೊಹಮ್ಮದ್ ಅಯೂಬ್ ಖಾನ್ (35) ಡಿಕ್ರೀ ರಜ್ಜಬ್ ಖಾನ್ (24) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಅವರೆಲ್ಲರೂ ಮುಂಬೈನ ನಾಗ್ಪಾಡ್ ಪ್ರದೇಶದಲ್ಲಿ ಪಾದಚಾರಿ ಮಾರ್ಗ(ಫುಟ್ ಪಾತ್) ನಲ್ಲಿರುತ್ತಿದ್ದರು ಎಂದು ಹೇಳಲಾಗಿದೆ.