ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರವು ರಾಷ್ಟ್ರದ ಹೆಮ್ಮೆಗೆ ಸಂಬಂಧಿಸಿದ ಸಂಗತಿ, ಶ್ರೀರಾಮ ಬರಿ ಹಿಂದೂಗಳ ಪೂರ್ವಿಕನಲ್ಲ ಮುಸ್ಲಿಮರ ಪೂರ್ವಿಕನೂ ಹೌದು ಎಂದು ಯೋಗ ಗುರು ರಾಮ್ ದೇವ್ ಅಭಿಪ್ರಾಯಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಖೇಡಾ ಜಿಲ್ಲೆಯ ನಾಡಿಯಾ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮಮಂದಿರದ ನಿರ್ಮಾಣ ವಿಚಾರ ಮತ ಬ್ಯಾಂಕ್ ರಾಜಕಾರಣಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದರು. 


"ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಬೇಕು ಎಂದು ನಾನು ಬಲವಾಗಿ ನಂಬಿದ್ದೇನೆ, ಅಯೋಧ್ಯೆಯಲ್ಲಿ ಇಲ್ಲವೆಂದರೆ ಮತ್ತೆಲ್ಲಿ ನೀವು ಅದನ್ನು ನಿರ್ಮಿಸುತ್ತಿರಿ? ಮೆಕ್ಕಾ, ಮದೀನಾ ಅಥವಾ ವ್ಯಾಟಿಕನ್ ನಗರದಲ್ಲಿ ಸಾಧ್ಯವಿಲ್ಲ ಎನ್ನುವುದಂತು ಸ್ಪಷ್ಟ" ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಅಯೋಧ್ಯೆ ರಾಮನ ಜನ್ಮಸ್ಥಳವೆನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ, ಅವನು ಬರಿ ಹಿಂದುಗಳಿಗೆ ಪೂರ್ವಿಕನಲ್ಲ  ಮುಸ್ಲಿಮರಿಗೂ ಕೂಡ, ರಾಮಮಂದಿರ ವಿಚಾರವು ರಾಷ್ಟ್ರದ ಹೆಮ್ಮಯ ಪ್ರತೀಕ ಹೊರತು ಮತಬ್ಯಾಂಕ್ ರಾಜಕಾರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಅವರು ತಿಳಿಸಿದರು.


ಸಂತ್ರಾಮ್ ದೇವಸ್ಥಾನದ ಯೋಗ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ರಾಮದೇವ್ ನಾಡಿಯಾ ಪಟ್ಟಣಕ್ಕೆ ಆಗಮಿಸಿದ್ದರು.