ಲಖನೌ: ದೇವರು ಸಂವಿಧಾನಕ್ಕಿಂತ ದೊಡ್ಡವನು ಆದ್ದರಿಂದ ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಯಾವುದೇ ವಿಳಂಬವಿಲ್ಲ ಎಂದು ಬಲ್ಲಿಯಾ ಕ್ಷೇತ್ರದ ಬಿಜೆಪಿ ಶಾಸಕ  ಸುರೇಂದ್ರ ಸಿಂಗ್ ಹೇಳಿದರು.


COMMERCIAL BREAK
SCROLL TO CONTINUE READING

ರಾಮಮಂದಿರ ನಿರ್ಮಾಣದ ವಿಚಾರದದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಮಾತನಾಡಿದ ಶಾಸಕ ಸುರೇಂದ್ರ ಸಿಂಗ್ "ಹೊಸ ಮಸೂದೆಯನ್ನು ತನ್ನಿ. ದೇವರು ಸಂವಿಧಾನಕ್ಕಿಂತ ದೊಡ್ಡವನು,ಶಾಸಕನಾಗಿ ದೇವರು ಸಂವಿಧಾನಕ್ಕಿಂತ ದೊಡ್ಡವನೆಂದು ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಇದು ನಂಬಿಕೆಯ ವಿಷಯವಾಗಿದೆ. ಆದ್ದರಿಂದ ರಾಮ ಮಂದಿರ ನಿರ್ಮಿಸಲು ಯಾವುದೇ ವಿಳಂಬ ಮಾಡಬಾರದು ಎಂದು ಸುರೇಂದ್ರ ಸಿಂಗ್ ಹೇಳಿದರು.


ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಬಲ ಸ್ಥಾನಗಳನ್ನು ಹೊಂದಿದ್ದರೂ ರಾಮ ಮಂದಿರವನ್ನು ನಿರ್ಮಿಸಲು ವಿಫಲರಾಗಿದ್ದಾರೆ ಎಂದು ಅವರು ದೂರಿದರು.


ಪ್ರಧಾನಿ ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ನಾಯಕರು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡವರು ಇಂತಹ ಸಂದರ್ಭದಲ್ಲಿಯೂ ಸಹಿತ ಶ್ರೀರಾಮ್ ಟೆಂಟ್ನಲ್ಲಿ ಇರುತ್ತಾನೆ ಎಂದರೆ ಇದು ದೇಶ ದೇಶಕ್ಕೆ ಮತ್ತು ಹಿಂದೂ ಸಮಾಜಕ್ಕೆ ಇದಕ್ಕಿಂತ ದುರುದೃಷ್ಟ ಸಂಗತಿ ಯಾವುದು ಇಲ್ಲ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದರು.