ಪ್ರಧಾನಿ ಮೋದಿ ಶ್ರೀರಾಮನ ಅಸ್ತ್ರಕ್ಕೆ ರಾಹುಲ್ ಗಾಂಧಿ ಹೂಡಿದ್ರಾ ಶಿವನ ಅಸ್ತ್ರ?
ಇನ್ನೇನು ಕೆಲವೇ ತಿಂಗಳಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ಬರಲಿದೆ ಆದ್ದರಿಂದ ಈಗ ಎಲ್ಲ ರಾಜಕೀಯ ಪಕ್ಷಗಳು ದೇವರ ಮೊರೆ ಹೋಗಿವೆ.ಅದರಲ್ಲೂ ಬಿಜೆಪಿಯಂತು ಈ ಹಿಂದಿನಿಂದಲೂ ಶ್ರೀರಾಮನನ್ನು ರಾಜಕೀಯ ಅಸ್ತ್ರವಾಗಿಸಿಕೊಂಡು ಈಗ ಅಧಿಕಾರದ ಅಸ್ತ್ರ ಹಿಡಿದಿದ. ಕಾಂಗ್ರೆಸ್ ಕೂಡ ಈಗ ಪ್ರತಿ ತಂತ್ರ ಹೂಡುತ್ತಿದೆ.ಹಾಗಾದರೆ ಕಾಂಗ್ರೆಸ್ ಹೂಡುತ್ತಿರುವ ಆ ಹೊಸ ಅಸ್ತ್ರ ಯಾವುದು ಗೊತ್ತೇ?
ನವದೆಹಲಿ: ಇನ್ನೇನು ಕೆಲವೇ ತಿಂಗಳಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ಬರಲಿದೆ ಆದ್ದರಿಂದ ಈಗ ಎಲ್ಲ ರಾಜಕೀಯ ಪಕ್ಷಗಳು ದೇವರ ಮೊರೆ ಹೋಗಿವೆ.ಅದರಲ್ಲೂ ಬಿಜೆಪಿಯಂತು ಈ ಹಿಂದಿನಿಂದಲೂ ಶ್ರೀರಾಮನನ್ನು ರಾಜಕೀಯ ಅಸ್ತ್ರವಾಗಿಸಿಕೊಂಡು ಈಗ ಅಧಿಕಾರದ ಅಸ್ತ್ರ ಹಿಡಿದಿದ. ಕಾಂಗ್ರೆಸ್ ಕೂಡ ಈಗ ಪ್ರತಿ ತಂತ್ರ ಹೂಡುತ್ತಿದೆ.ಹಾಗಾದರೆ ಕಾಂಗ್ರೆಸ್ ಹೂಡುತ್ತಿರುವ ಆ ಹೊಸ ಅಸ್ತ್ರ ಯಾವುದು ಗೊತ್ತೇ?
ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದ ದಿನದಿಂದ ರಾಹುಲ್ ಗಾಂಧಿ ಈಗ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಹೊಸ ವೇಷ ಹಾಕ್ತಿದ್ದಾರೆ.ಆದ್ದರಿಂದಲೇ ಅವರು ಈಗ ಬಿಜೆಪಿ ಶ್ರೀರಾಮನ ಜಪಕ್ಕೆ ಪ್ರತಿಯಾಗಿ ಶಿವನಾಮದ ಜಪವನ್ನು ಮಾಡುತ್ತಿದ್ದಾರೆ.ಆ ಮೂಲಕ ಬಿಜೆಪಿಗೆ ಮತಕ್ಕೆ ಕನ್ನಾ ಹಾಕುವ ಹೊಸ ಹೊಸ ಯೋಜನೆಯೊಂದನ್ನು ಈಗ ರಾಹುಲ್ ರೂಪಿಸುತ್ತಿದ್ದಾರೆ.
ಈಗ ಯೋಜನೆ ಫಲವಾಗಿ ಹುಟ್ಟಿಕೊಂಡಿರುವ ತಂತ್ರವೇ ಶಿವಾಸ್ತ್ರ. ಹೌದು,ಈ ಅಸ್ತ್ರವೇನು ಸಾಮಾನ್ಯವೇನಲ್ಲ, ಒಂದು ಕಡೆ ಬಿಜೆಪಿ ಜೈ ಶ್ರೀರಾಮ್ ಎನ್ನುತ್ತಲೇ ಅಧಿಕಾರಕ್ಕೆ ಮತ್ತೊಮ್ಮೆ ಪೀಠಿಕೆ ಹಾಕುವ ದಾವುಧಿಯಲ್ಲಿದೆ. ಆದ್ದರಿಂದ ರಾಹುಲ್ ಗಾಂಧಿಯು ಕೂಡ ಈ ಬಿಜೆಪಿಯ ಹಿಂದು ಮತಗಳಿಸುವ ತಂತ್ರಗಾರಿಕೆಗೆ ಸವಾಲನ್ನೋಡ್ದಲು ಶಿವನಾಮಕ್ಕೆ ಮೊರೆ ಹೋಗಿದ್ದಾರೆ. ಆ ಮೂಲಕ ಬಿಜೆಪಿ ರಾಮ ನಾಮದ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ರೆ .ರಾಹುಲ್ ಗಾಂಧಿಯವರು ಕಾಂಗ್ರೆಸ್ ಶಿವನಾಮದ ಮೂಲಕ ಬೇರು ಗಟ್ಟಿಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆನ್ನುವಂತೆ ರಾಹುಲ್ ಗಾಂಧಿಯವರ ಯಾತ್ರೆಗಳು ಮತ್ತು ಶಿವನ ಬಗ್ಗೆ ಆಡಿರುವ ಮಾತುಗಳು ಅದಕ್ಕೆ ಸಾಕ್ಷಿ ಹೇಳುತ್ತಿವೆ.
ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಕೈಲಾಸ ಯಾತ್ರೆ ಮಾಡುತ್ತೇನೆ ಎಂದು ಹೇಳಿದ್ದ ರಾಹುಲ್ ಈಗ ಹೇಳಿದಂತೆ ಕೈಲಾಸ ಯಾತ್ರೆಯನ್ನು ಮುಗಿಸಿ ಬಂದಿದ್ದಾರೆ. ಅಲ್ಲದೆ ತಮ್ಮನ್ನು ಶಿವಭಕ್ತ ಎಂದು ಕರೆದುಕೊಂಡು ರಾಹುಲ್ ಗಾಂಧಿ ಮಧ್ಯಪ್ರದೇಶ ಚುನಾವಣಾ ರ್ಯಾಲಿಗಳಲ್ಲಿ ಶಿವನ ದೇವಸ್ಥಾನಗಳಿಗೆ ಭೇಟಿ ನೀಡ್ತಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಅವರನ್ನು ಶಿವನ ಪರಮಭಕ್ತ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ಮಧ್ಯಪ್ರದೇಶದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದ ರಾಹುಲ್ ಗಾಂಧಿಯನ್ನು ಕಾರ್ಯಕರ್ತರು ಶಿವಭಕ್ತ ರಾಹುಲ್ ಗೆ ಸ್ವಾಗತ ಎಂಬ ಬ್ಯಾನರ್ ಗಳನ್ನು ಹಾಕಿ ನೆಚ್ಚಿನ ನಾಯಕನ ಸ್ವಾಗತ ಮಾಡಿದ್ದರು. ಜೊತೆ ಪ್ರಚಾರದ ವೇಳೆ ರಾಹುಲ್ ಶಿವಭಕ್ತನಾಗಿ ಶಿವಲಿಂಗಕ್ಕೆ ಅಭಿಷೇಕ ಮಾಡ್ತಿರುವ ಫ್ಲೆಕ್ಸ್ ಗಳು ಕೂಡ ರಾರಾಜಿದ್ದವು.
ಅಷ್ಟುಕ್ಕೂ ರಾಹುಲ್ ಗಾಂಧಿ ಶಿವನ ದೇವಾಲಯಗಳಿಗೆ ಭೇಟಿ ನೀಡಿ ಶಿವನ ಭಕ್ತ ಎಂದು ಕರೆದುಕೊಳ್ಳಲು ಕಾರಣವಿದೆ. ಈ ದೇಶದಲ್ಲಿ ರಾಮನ ಭಕ್ತರು ಎಷ್ಟು ಪ್ರಮಾಣದಲ್ಲಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಶಿವನ ಭಕ್ತರಿದ್ದಾರೆ, ಆದ್ದರಿಂದ ಈ ಬಾರಿ ಶಿವನ ಅಸ್ತ್ರದ ಮೂಲಕ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಬೇಕು ಎನ್ನುವುದು ರಾಹುಲ್ ಗಾಂಧಿಯವರ ಒತ್ತಾಸೆಯಾಗಿದೆ.
ಇನ್ನೊಂದೆಡೆ ಬಿಜೆಪಿ ಏನು ಸುಮ್ಮನೆ ಕುಳಿತಿಲ್ಲ ಈಗಾಗಲೇ ಸುಪ್ರಿಂಕೋರ್ಟ್ ಅಯೋಧ್ಯೆ ವಿವಾದದ ವಿಚಾರವಾಗಿ ಅಕ್ಟೋಬರ್ 29 ರಿಂದ ನಿರಂತರ ವಿಚಾರಣೆಯನ್ನು ಕೈಗೊಳ್ಳಲಿದೆ.ಈ ತೀರ್ಪು ಸಹ ತಮ್ಮ ಪರ ಬರಬಹುದು ಎಂದು ಬಿಜೆಪಿ ಜಾತಕ ಪಕ್ಷಿಯಂತೆ ಕಾಯ್ದುಕುಳಿತಿದೆ.ಇದೆಲ್ಲವನ್ನು ನೋಡಿದಾಗ ಮುಂಬರುವ ಲೋಕಸಭಾ ಚುನಾವಣೆ ಬಿಜೆಪಿಯ ರಾಮ ಕಾಂಗ್ರೆಸ್ ನ ಶಿವನ ನಡುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.