Viral video : ರಸ್ತೆ ಮಧ್ಯೆ ಸ್ಥಿಮಿತ ಕಳೆದು ಕೊಂಡವರಂತೆ ಆಡುತ್ತಿದ್ದ ಪೋಲಿಸ್..! ವಿಚಿತ್ರ ವಾಗಿತ್ತು ಪೋಲಿಸಪ್ಪನ ನಡವಳಿಕೆ
ಸುಮಾರು 15 ಸೆಕೆಂಡುಗಳ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ, ಒಬ್ಬ ಪೋಲಿಸ್ ತನ್ನ ನಿಯಂತ್ರಣದಲ್ಲಿ ಇಲ್ಲದಂತೆ ಕಾಣಿಸುತ್ತದೆ.
ನವದೆಹಲಿ : Viral Video: ಒಬ್ಬ ವ್ಯಕ್ತಿಯು ಅಮಲಿನಲ್ಲಿದ್ದಾಗ ಏನು ಮಾಡುತ್ತಾನೆ ಎನ್ನುವುದು ಆತನಿಗೆ ತಿಳಿದಿರುವುದಿಲ್ಲ. ತನ್ನದೇ ಲೋಕದಲ್ಲಿ ಅ ವ್ಯಕ್ತಿ ಭ್ರಮಿಸುತ್ತಿರುತ್ತಾನೆ. ತಾನು ಎಲ್ಲಿದ್ದೇನೆ, ಏನು ಮಾಡುತ್ತೇನೆ, ಯಾಕೆ ಹೀಗೆ ಮಾಡುತ್ತೇನೆ ಎನ್ನುವುದರ ಪರಿವೆ ಆತನಿಗೆ ಇರುವುದಿಲ್ಲ. ಇದೇ ರೀತಿಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ (Social media) ಹರಿದಾಡುತ್ತಿದೆ. ಇದರಲ್ಲಿ ಒಬ್ಬ ಪೋಲಿಸ್ ಕಾಣುತ್ತಾರೆ. ಈ ಪೋಲಿಸ್ ರಸ್ತೆಯಲ್ಲಿ ನಿಂತಿದ್ದ ವಾಹನವನ್ನು ತಳ್ಳಲು ಪ್ರಯತ್ನಿಸುತ್ತಿರುವೂ ಕಾಣಿಸುತ್ತದೆ.
ಸುಮಾರು 15 ಸೆಕೆಂಡುಗಳ ಈ ವಿಡಿಯೋ ವೈರಲ್ (Viral video) ಆಗುತ್ತಿದೆ. ಈ ವಿಡಿಯೋ ನೋಡಿದಾಗ, ಒಬ್ಬ ಪೋಲಿಸ್ ತನ್ನ ನಿಯಂತ್ರಣದಲ್ಲಿ ಇಲ್ಲದಂತೆ ಕಾಣಿಸುತ್ತದೆ. ರಸ್ತೆಯ ಮಧ್ಯದಲ್ಲಿ ಕಾರಿನ ಮುಂದೆ ನಿಂತು ಅದನ್ನು ಹಿಂದಕ್ಕೆ ತಳ್ಳಲು ವಿಫಲ ಪ್ರಯತ್ನ ಮಾಡುತ್ತಿರುವಂತೆ ತೋರುತ್ತದೆ. ಈ ವ್ಯಕ್ತಿ ಹೀಗೆ ಮಾಡುತ್ತಿರುವುದನ್ನು ಗಮನಿಸಿದ ಇತರ ಪೋಲೀಸ್ (Police) ಸಿಬ್ಬಂದಿ ಕೂಡಾ ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲದೆ, ಆ ವ್ಯಕ್ತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ.
ಇದನ್ನೂ ಓದಿ : Viral Video: ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಲಿಫ್ಟ್ ನೊಳಗೆ ಕುಳಿತ ವಧು..!
ಇಲ್ಲಿ ಆ ಪೋಲೀಸ್ ನನ್ನು ಎಷ್ಟು ತಡೆಯಲು ಪ್ರಯತ್ನಿಸಿದರೂ ಅವರು ಮತ್ತೆ ಮತ್ತೆ ಕಾರಿನ ಬೋನೆಟ್ ಹಿಡಿದು ನಿಲ್ಲುತ್ತಿದ್ದಾರೆ. ಅಲ್ಲದೆ ಬೈಯುತ್ತಿರುವುದು ಕೂಡ ಕೇಳಿಸುತ್ತದೆ. ಈ ವೀಡಿಯೊದಲ್ಲಿ, ಸುತ್ತಲೂ ನೂರಾರು ಜನ ಸೇರಿರುವುದು ಕೂಡಾ ಕಾಣಿಸುತ್ತದೆ. ಈ ಜನರ ಮಧ್ಯೆಯೇ ಯಾರೋ ಈ ವಿಡಿಯೋ ಮಾಡಿ ವೈರಲ್ (Video viral) ಮಾಡಿದ್ದಾರೆ.
ಸಾಮಾಜಿಕ ಜಾಲತಾಣ (Social media) ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಕಡಿಮೆ ಸಮಯದಲ್ಲಿ ಅನೇಕ ಜನರು ವೀಡಿಯೊವನ್ನು ನೋಡಿದ್ದಾರೆ. ಈ ಪೋಲಿಸ್ ಕುಡಿದ ಅಮಲಿನಲ್ಲಿ ಹೀಗೆ ಮಾಡುತ್ತಿದ್ದಾರೆ ಎನ್ನುವುದನ್ನು ಜಿ ಹಿಂದುಸ್ತಾನ್ ದೃಡಿಕರಿಸುವುದಿಲ್ಲ. ವೈರಲ್ ಆಗುತ್ತಿರುವ ವಿಡಿಯೋ ಆಧಾರದಲ್ಲಿ ಈ ಸುದ್ದಿಯನ್ನು ಡೆವೆಲೊಪ್ ಮಾಡಲಾಗಿದೆ. ಈ ವಿಡಿಯೋ ಎಲ್ಲಿಂದ ಬಂದಿದೆ ಅಥವಾ ಎಷ್ಟು ಹಳೆಯದು ಎನ್ನುವುದರ ಮಾಹಿತಿ ಇಲ್ಲ.
ಇದನ್ನೂ ಓದಿ : Viral Video: ಪ್ರವಾಹದಲ್ಲಿ ಸಿಲುಕಿದ್ದ ಕಾರು ತಳ್ಳಲು ಈ ನಾಯಿ ಏನು ಮಾಡಿದೆ ನೋಡಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.