ಬಿಜ್ನೋರ (ಉತ್ತರಪ್ರದೇಶ) : ಮದುವೆಗೆ (Wedding) ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಬಾಲಕಿಯ ಪೋಷಕರನ್ನು ಕೊಲೆ (Murder) ಮಾಡಿರುವ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Russia-Ukraine War: ರಕ್ಷಣೆಗಾಗಿ ಮೋದಿ ಸರ್ಕಾರಕ್ಕೆ ಮನವಿ ಮಾಡಿದ ಉಕ್ರೇನ್ ಮೂಲದ ಭಾರತೀಯ ಸೊಸೆ


ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಬಾಲಕಿಯ ಪೋಷಕರನ್ನು 17 ವರ್ಷದ ಅಪ್ರಾಪ್ತೆ ಮತ್ತು 20 ವರ್ಷದ ಯುವಕ  ಕೊಲೆ ಮಾಡಿದ್ದಾರೆ. ಉತ್ತರಪ್ರದೇಶದ (Uttarapradesh) ಬಿಜ್ನೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.


ಬಾಲಕಿ ಮತ್ತು ಯುವಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಬಾಲಕಿಯ ಪೋಷಕರು ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಕುಪಿತರಾದ ಇಬ್ಬರೂ ಪೋಷಕರ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.  


ಇದನ್ನೂ ಓದಿ:  Coronavirus: ಚೀನಾದಲ್ಲಿ ಮತ್ತೆ ಕರೋನಾ ಸ್ಫೋಟ!


ಮಾ.6 ರಂದು ಬಾಲಕಿ ತಂದೆಯ ಮೃತದೇಹ (Deadbody) ಮನೆಯಲ್ಲಿ ಪತ್ತೆಯಾಗಿತ್ತು. ಇದಕ್ಕೂ ಮುನ್ನ ಅಂದರೆ ಜ.15ರಂದು ತಾಯಿ ಕೂಡ ಇದೇ ರೀತಿ ಮೃತಪಟ್ಟಿದ್ದರು. ಇದರಿಂದ ಅನುಮಾನಗೊಂಡ ಕುಟುಂಬದ ಸಂಬಂಧಿಯೊಬ್ಬರು ಪೋಲಿಸರಿಗೆ ತಿಳಿಸಿದ್ದಾರೆ. ಪೊಲೀಸರು ಬಾಲಕಿ ಮತ್ತು ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ.


ಸದ್ಯ ಅಪ್ರಾಪ್ತೆಯನ್ನು ಬಾಲಾಪರಾಧಿ ಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಆರೋಪಿ ಯುವಕನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.