LPG Cylinder Update: ಶೀಘ್ರದಲ್ಲೇ ನಿಮಗೆ  LPG ಯ ಭಾರವಾದ ಗ್ಯಾಸ್ ಸಿಲಿಂಡರ್ ನಿಂದ ಮುಕ್ತಿ ಸಿಗಬಹುದು. ಕಬ್ಬಿಣದ ಸಿಲಿಂಡರ್ ಬದಲಾಗಿ ಫೈಬರ್ ಗ್ಲಾಸ್ ಕಾಂಪೋಸಿಟ್ LPG ಸಿಲಿಂಡರ್ (composite lpg cylinder) ಅನ್ನು ಬಿಡುಗಡೆ ಮಾಡಲಾಗಿದೆ. ಈ ಸಿಲಿಂಡರ್‌ನ ವಿಶೇಷತೆ ಎಂದರೆ ಅದರ ತೂಕವು ಹಳೆಯ ಸಾಂಪ್ರದಾಯಿಕ ಸಿಲಿಂಡರ್‌ಗಿಂತ ಕಡಿಮೆ ಇರುತ್ತದೆ. ಇದರ ಹೊರತಾಗಿ, ಜನರು ಇದನ್ನು ಕಡಿಮೆ ಬೆಲೆಗೆ ಪಡೆಯುತ್ತಾರೆ. ಇದನ್ನು ಗ್ರಾಹಕರು ತಮ್ಮ ಹಳೆಯ ಗ್ಯಾಸ್ ಸಿಲಿಂಡರ್‌ನೊಂದಿಗೆ (Gas Cylinder) ಬದಲಾಯಿಸಬಹುದು. ಫೈಬರ್‌ಗ್ಲಾಸ್‌ನಿಂದ ಮಾಡಿದ ಈ ಹೊಸ ಗ್ಯಾಸ್ ಸಿಲಿಂಡರ್ ಹಳೆಯ ಸಿಲಿಂಡರ್‌ಗಿಂತ ಸುರಕ್ಷಿತವಾಗಿರುತ್ತದೆ. 


COMMERCIAL BREAK
SCROLL TO CONTINUE READING

ಕಾಂಪೋಸಿಟ್ ಸಿಲಿಂಡರ್‌ನ ವೈಶಿಷ್ಟ್ಯಗಳು: 
ಹೊಸ ಸಿಲಿಂಡರ್‌ನ ತೂಕವು ಹಳೆಯ ಸಿಲಿಂಡರ್‌ಗಿಂತ 50% ಕಡಿಮೆ ಇರುತ್ತದೆ. ಈ ಸಿಲಿಂಡರ್ ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ ಮತ್ತು ಅದರ ತೂಕ ಕೇವಲ 6 ಕೆಜಿ ಇರುತ್ತದೆ. ಇದರ ರಚನೆಯು ನೋಡಲು ಕೂಡ ಸುಂದರವಾಗಿರುತ್ತದೆ. ಇದರಲ್ಲಿ ಅನೇಕ ಬಣ್ಣಗಳ ಸಿಲಿಂಡರ್‌ಗಳನ್ನು ಕಾಣಬಹುದು. ಹಳೆಯ ಗ್ಯಾಸ್ ಸಿಲಿಂಡರ್ ನ ತೂಕ 31 ಕೆಜಿ ಇದ್ದು, ಕಾಂಪೋಸಿಟ್ ಸಿಲಿಂಡರ್ (composite lpg cylinder)ಕೇವಲ 16 ಕೆಜಿ ತೂಕ ಇರುತ್ತದೆ. ಇದರ ಕಡಿಮೆ ತೂಕದಿಂದಾಗಿ, ಮಹಿಳೆಯರು ಕೂಡ ಅದನ್ನು ಸುಲಭವಾಗಿ ಎತ್ತಲು ಸಾಧ್ಯವಾಗುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಫೈಬರ್ (fiber) ಆಗಿರುವುದರಿಂದ ಅದು ಸಂಪೂರ್ಣವಾಗಿ ತುಕ್ಕು ನಿರೋಧಕವಾಗಿರುತ್ತದೆ. 


ಇದನ್ನೂ ಓದಿ : ಚೀನಾದಲ್ಲಿ ಧೂಳೆಬ್ಬಿಸಿದ ನಂತರ ಭಾರತಕ್ಕೂ ಲಗ್ಗೆಇಟ್ಟಿದೆ ಈ 5 ಜಿ ಸ್ಮಾರ್ಟ್ ಫೋನ್, ವೈಶಿಷ್ಟ್ಯ ತಿಳಿದರೆ ಎಂಥವರೂ ದಂಗಾಗಬೇಕು


ಬೆಲೆ ಹೇಗಿರುತ್ತದೆ:
ಕಾಂಪೋಸಿಟ್ ಗ್ಯಾಸ್ ಸಿಲಿಂಡರ್ 10 ಕೆಜಿ ಮತ್ತು 5 ಕೆಜಿಯಲ್ಲಿ ಲಭ್ಯವಿರುತ್ತದೆ. 10 ಕೆಜಿ ಗ್ಯಾಸ್ ಸಿಲಿಂಡರ್ 692 ರೂ.ಗೆ ಲಭ್ಯವಿದ್ದರೆ, 5 ಕೆಜಿ 363 ರೂ.ಗೆ ಸಿಗುತ್ತದೆ.  ಇದರಲ್ಲಿ ಸಿಲಿಂಡರ್ ನಲ್ಲಿ ಎಷ್ಟು ಗ್ಯಾಸ್ (Gas) ಉಳಿದಿದೆ ಎಂಬುದನ್ನು ನೀವು ಸುಲಭವಾಗಿ ನೋಡಲು ಸಾಧ್ಯವಾಗುತ್ತದೆ. ಪ್ರಸ್ತುತ, 10 ಕೆಜಿ ಸಿಲಿಂಡರ್ ಹಳೆಯ ಸಿಲಿಂಡರ್‌ ನಲ್ಲಿ ಹಳೆಯ ಸಿಲಿಂಡರ್‌ ಗೆ ಹೋಲಿಸಿದರೆ 4 ಕೆಜಿ ಕಡಿಮೆ ಗ್ಯಾಸ್ ಸಿಗುತ್ತದೆ.


ಈ ಸಿಲಿಂಡರ್ 28 ನಗರಗಳಲ್ಲಿ ಲಭ್ಯವಿರುತ್ತದೆ:
ಶನಿವಾರ (25 ಸೆಪ್ಟೆಂಬರ್), ಓಮಾಕ್ಸ್ ಸಿಟಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಸದೆ ಹೇಮಾ ಮಾಲಿನಿ ಈ ಸಿಲಿಂಡರ್ ಅನ್ನು ಬಿಡುಗಡೆ ಮಾಡಿದರು. ಮೈಸೂರು, ಜಲಂಧರ್, ಜಮ್ಶೆಡ್ಪುರ, ಲುಧಿಯಾನ, ರಾಯ್ಪುರ, ರಾಂಚಿ, ಅಹಮದಾಬಾದ್ ಸೇರಿದಂತೆ 28 ನಗರಗಳಲ್ಲಿ ಲಭ್ಯವಿರುತ್ತದೆ. ಸಿಲಿಂಡರ್ ವಿತರಣಾ ಕಂಪನಿ ಇಂಡೇನ್ (Indane) ಹೊಸ ಕಾಂಪೋಸಿಟ್ ಗ್ಯಾಸ್ ಸಿಲಿಂಡರ್ ಪಡೆಯಲು ಗ್ರಾಹಕರು 10 ಕೆಜಿ ಮತ್ತು 5 ಕೆಜಿ ಸಿಲಿಂಡರ್ ಮೇಲೆ 3350 ರೂ. ಪಾವತಿಸಬೇಕು. 2150 ಗೆ ಭದ್ರತೆ ಠೇವಣಿ ನೀಡಬೇಕು.


ಇದನ್ನೂ ಓದಿ : New Wage Code: ಉದ್ಯೋಗಿಗಳಿಗೆ ವಾರದಲ್ಲಿ 3 ದಿನ ರಜೆ ಮತ್ತು ಗರಿಷ್ಠ 12 ಗಂಟೆ ಕೆಲಸ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.