ರೈಲ್ವೆ ಪ್ರಯಾಣಿಕರೇ ಗಮನಿಸಿ... ಲಕ್ನೋ-ಕಾನ್ಪುರ ಮಾರ್ಗದ ರೈಲು ಸೇವೆ ಸ್ಥಗಿತ! ಯಾಕೆ ಗೊತ್ತಾ?
ಕಾನ್ಪುರದಲ್ಲಿ ಶತಾಬ್ದಿ, ಗಂಗಘಾಟ್‌ನ ಝಾನ್ಸಿ ಪ್ಯಾಸೆಂಜರ್, ಉನ್ನಾವೊದಲ್ಲಿ ಎಲ್‌ಟಿಟಿ, ಅಜ್ಗೆನ್ ಮತ್ತು ಸೋನಿಕ್ ನಲ್ಲಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಲಕ್ನೋ: ಉನ್ನಾವೊದ ದಾಹಿ ಚೌಕಿಯಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಸ್ಥಾವರದಲ್ಲಿ ಟ್ಯಾಂಕ್ ಹಠಾತ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಕ್ನೋ-ಕಾನ್ಪುರ್ ಮಾರ್ಗದ ಎಲ್ಲಾ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕಾನ್ಪುರದಲ್ಲಿ ಶತಾಬ್ದಿ, ಗಂಗಘಾಟ್‌ನ ಝಾನ್ಸಿ ಪ್ಯಾಸೆಂಜರ್, ಉನ್ನಾವೊದಲ್ಲಿ ಎಲ್‌ಟಿಟಿ, ಅಜ್ಗೆನ್ ಮತ್ತು ಸೋನಿಕ್ ನಲ್ಲಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಅಪಘಾತದ ಬಗ್ಗೆ ಮಾಹಿತಿ ದೊರೆತ ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸುತ್ತಮುತ್ತಲಿನ ಗ್ರಾಮಸ್ಥರನ್ನು ಇತರೆಡೆಗೆ ತೆರಳಲು ಪೊಲೀಸರು ಮತ್ತು ಜಿಲ್ಲಾಡಳಿತ ತಿಳಿಸಿದೆ. ಆದರೆ, ಅವಘಡದಲ್ಲಿ ಗಾಯಗೊಂಡವರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.
ಹಿಂದೂಸ್ತಾನ್ ಪೆಟ್ರೋಲಿಯಂ ಪ್ಲಾಂಟ್‌ನ ಟ್ಯಾಂಕ್ ಸೋರಿಕೆಯಾದ ಕಾರಣ ಈ ಅವಘಡ ಸಂಭವಿಸಿದ್ದು, ಘಟನೆ ಬಳಿಕ ಸ್ಥಾವರದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸುತ್ತಲಿನ 4 ರಿಂದ 5 ಕಿ.ಮೀ ವಿಸ್ತೀರ್ಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.