ನವದೆಹಲಿ: ಒಂದು ಕಡೆ ನೀಟ್ ಪರೀಕ್ಷೆಗೆ ಆಧಾರ್ ಕಡ್ಡಾಯ ಮಾಡಲು ಹೊರಟಾಗ ಸುಪ್ರಿಂಕೋರ್ಟ್ ಇದಕ್ಕೆ ತಡೆ ತಂದಿತ್ತು. ಆದರೆ ಈ ನಿಯಮವನ್ನು ಗಾಳಿಗೆ ತೋರಿರುವ ಉತ್ತರಪ್ರದೇಶದ ಲಕ್ನೋ ವಿವಿಯು ಈಗ ಸ್ನಾತ್ತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪಡೆಯಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯ ಎಂದು ಅಧಿಸೂಚನೆ ಹೊರಡಿಸಿದೆ.


COMMERCIAL BREAK
SCROLL TO CONTINUE READING

ಇದೇ ಏಪ್ರಿಲ್ ನಲ್ಲಿ ವಿವಿಯು ಆಧಾರ್ ಕಾರ್ಡ್ ಸಂಖ್ಯೆಯನ್ನು ಪ್ರವೇಶಾತಿ ವೇಳೆ ಸಲ್ಲಿಸಿಸುವುದು ಕಡ್ಡಾಯ ಎಂದು ತಿಳಿಸಿತ್ತು. ಒಂದು ವೇಳೆ ಕಾರ್ಡ್ ಇಲ್ಲದೆ ಹೋದರೆ ಅಂತಹ ವಿಧ್ಯಾರ್ಥಿಗಳು ನಂತರ ಸಲ್ಲಿಸುತ್ತೇವೆ ಎಂದು ಅವರು  ಪ್ರವೇಶಾತಿ ಪತ್ರದಲ್ಲಿ  ಬರೆದುಕೊಡಬೇಕು ಎಂದು ತಿಳಿಸಬೇಕು. 


ಈ ವಿಷಯದ ಕುರಿತಾಗಿ ಪ್ರಸ್ತಾಪಿಸಿದ ಲಕ್ನೊ ವಿವಿ ರಜಿಸ್ಟರ್ ರಾಜಕುಮಾರ್ ಸಿಂಗ್ "ಈ ಕ್ರಮ ವಿವಿ ವಿದ್ಯಾರ್ಥಿಯು ಐಡೆಂಟಿಟಿಯನ್ನು ಸ್ಪಷ್ಟಪಡಿಸುತ್ತದೆ" ಎಂದು ತಿಳಿಸಿದ್ದಾರೆ.