ನವದೆಹಲಿ: ಇಂದು 2020 ರ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಈ ಚಂದ್ರ ಗ್ರಹಣ ಇಂದು (ಜನವರಿ 10) ರಾತ್ರಿ 10.38 ರಿಂದ ಪ್ರಾರಂಭವಾಗಲಿದ್ದು, ತಡರಾತ್ರಿ 2.42 ರವರೆಗೆ ಮುಂದುವರಿಯಲಿದೆ. ಈ ಚಂದ್ರ ಗ್ರಹಣವನ್ನು ಗ್ರಹಣ ಎಂದು ಕರೆಯಲಾಗುವುದಿಲ್ಲ. ಬದಲಿಗೆ ಇದನ್ನು ಚಂದ್ರ ಛಾಯಕಲ್ಪ ಎಂದು ಕರೆಯಲಾಗುತ್ತದೆ. 


COMMERCIAL BREAK
SCROLL TO CONTINUE READING

2019 ರ ಅಂತ್ಯದ ವೇಳೆಗೆ, ಇಡೀ ಜಗತ್ತು ಅದ್ಭುತ ಸೂರ್ಯಗ್ರಹಣಕ್ಕೆ ಸಾಕ್ಷಿಯಾಯಿತು, ಇದನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಯಿತು. 2020 ರ ಆರಂಭದ ಎರಡನೇ ವಾರದಲ್ಲಿ, ಚಂದ್ರ ಗ್ರಹಣದ ಇಂದು ಸಂಭವಿಸುತ್ತಿದೆ. ಇದನ್ನು ಯುರೋಪ್ ಮತ್ತು ಅಮೆರಿಕದಂತಹ ದೇಶಗಳು "ವುಲ್ಫ್ ಎಕ್ಲಿಪ್ಸ್" ಎಂದು ಹೆಸರಿಸಿದೆ. ಇಂತಹ ಖಗೋಳ ಘಟನೆಗಳಿಗೆ ಇಂತಹ ಹೆಸರುಗಳನ್ನು ನೀಡುವ ಸಂಪ್ರದಾಯ ಯುರೋಪಿನಲ್ಲಿ ಇದೆ.


ಶುಕ್ರವಾರ ಮಧ್ಯರಾತ್ರಿ ಚಂದಿರನಿಗೆ ಅಡ್ಡವಾಗಿ ನಿಲ್ಲಲಿರುವ ಭೂಮಿ, ಚಂದ್ರನ ಮೇಲೆ ಬೀಳುವ ತನ್ನ ನೆರಳನ್ನೇ ವೀಕ್ಷಿಸಲಿದೆ. ಈ ಕೌತುಕಕ್ಕೆ ತೋಳಗ್ರಹಣ ಎಂದು ಕರೆಯಲಾಗುತ್ತಿದೆ. ಜನವರಿ ಮಾಸವು ತೋಳಗಳ ಸಂತಾನಾಭಿವೃದ್ಧಿಯ ಸಮಯವಾಗಿದೆ. ಈ ಹಿನ್ನಲೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಜನವರಿ ತಿಂಗಳಿನಲ್ಲಿ ಘಟಿಸುವ ಚಂದ್ರಗ್ರಹಣವನ್ನು “ತೋಳಗ್ರಹಣ’ ಎಂದು ಕರೆಯುವ ವಾಡಿಕೆಯಿದೆ.


ವೈಜ್ಞಾನಿಕವಾಗಿ ಹೇಳುವುದಾದರೆ, ಈ ಗ್ರಹಣವನ್ನು ಸಂಪೂರ್ಣ ಚಂದ್ರ ಗ್ರಹಣ ಎಂದು ಕರೆಯಲಾಗುವುದಿಲ್ಲ, ಏಕೆಂದರೆ ಇದು ನೆರಳಿನ ಗ್ರಹಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಚಂದ್ರನ ಸ್ಥಾನದಲ್ಲಿ ಯಾವುದೇ ವಿಶೇಷ ಬದಲಾವಣೆಗಳಾಗುವುದಿಲ್ಲ, ಆದರೆ ಚಂದ್ರನ ಸುಂದರವಾದ ಚಿತ್ರ ಖಂಡಿತವಾಗಿಯೂ ಹೊರಹೊಮ್ಮುತ್ತದೆ.


ಈ ಚಂದ್ರನ ಪ್ರಾಮುಖ್ಯತೆ ಎಷ್ಟು ಮಹತ್ವದ್ದೆಂದರೆ ಇದು 2020 ರಲ್ಲಿ ನಡೆಯುತ್ತಿರುವ ಮೊದಲ ಗ್ರಹಣವಾಗಿದೆ. 


ಎಲ್ಲೆಲ್ಲಿ ಗೋಚರ?
ಈ ವರ್ಷದ ಮೊದಲ ಚಂದ್ರಗ್ರಹಣವು ಭಾರತದಾದ್ಯಂತ ಗೋಚರಿಸಲಿದೆ. ಜೊತೆಗೆ ಅಮೆರಿಕ, ಕೆನಡಾ, ಬ್ರೆಜಿಲ್, ಅರ್ಜೆಂಟೀನಾ ಮುಂತಾದ ದೇಶಗಳಲ್ಲಿ ಈ ಚಂದ್ರ ಗ್ರಹಣ ಗೋಚರಿಸಲಿದೆ. 


ಗಮನಾರ್ಹವಾಗಿ 2020 ರಲ್ಲಿ ಒಟ್ಟು 4 ಚಂದ್ರ ಗ್ರಹಣಗಳು ಮತ್ತು ಎರಡು ಸೂರ್ಯಗ್ರಹಣಗಳು ಸಂಭವಿಸಲಿದೆ ಎಂದು ಹೇಳಲಾಗಿದೆ. ಜನವರಿ 10, ಜೂನ್ 05, ಜುಲೈ 05 ಮತ್ತು ನವೆಂಬರ್ 30 ರಂದು ಚಂದ್ರಗಹಣ ಘಟಿಸಲಿದ್ದು, ಜೂನ್ 21 ಮತ್ತು ಡಿಸೆಂಬರ್ 14 ರಂದು ಸೂರ್ಯಗ್ರಹಣಗಳು ಸಂಭವಿಸಲಿವೆ.