ನವದೆಹಲಿ: ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಗುರುವಾರದಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನಲೆಯಲ್ಲಿ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಭಾವುಕರಾಗಿದ್ದು, ದಿವಂಗತ ಬಾಳ್ ಠಾಕ್ರೆ ಮತ್ತು ತಾಯಿ ಮೀನಾ ತಾಯಿ ಠಾಕ್ರೆ ಈ ದಿನ ಇರಬೇಕಾಗಿತ್ತು ಎಂದು ಸ್ಮರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕಾಂಗ್ರೆಸ್-ಎನ್ಸಿಪಿ-ಬಿಜೆಪಿ ಸರ್ಕಾರ ರಚಿಸುತ್ತಿರುವ ಹಿನ್ನಲೆಯಲ್ಲಿ ಮಾತನಾಡಿದ ಅವರು 'ಮಾ ಸಾಹೇಬ್ ಮತ್ತು ಬಾಲಾ ಸಾಹೇಬ್ - ಇಂದು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ.ನೀವಿಬ್ಬರೂ ಇಂದು ಇಲ್ಲಿ ಇರಬೇಕಿತ್ತು. ಅವರು ನನ್ನನ್ನು ಮಗಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ನಡೆಸಿಕೊಂಡರು..! ನನ್ನ ಜೀವನದಲ್ಲಿ ಅವರ ಪಾತ್ರ ಯಾವಾಗಲೂ ವಿಶೇಷ ಮತ್ತು ಸ್ಮರಣೀಯವಾಗಿರುತ್ತದೆ..! ಎಂದು ಸುಪ್ರಿಯಾ ಸುಳೆ ಟ್ವೀಟ್ ಮಾಡಿದ್ದಾರೆ.



2006 ರಲ್ಲಿ, ಅಂದಿನ ಶಿವಸೇನಾ ಅಧ್ಯಕ್ಷ ಬಾಳ್ ಠಾಕ್ರೆ ಅವರು ಸುಪ್ರಿಯಾ ಸುಳೆ ಎನ್ಸಿಪಿಯಿಂದ ರಾಜ್ಯಸಭಾಗೆ ಸ್ಪರ್ಧಿಸಿದಾಗ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಕಳೆದ ತಿಂಗಳು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಹುದ್ದೆಯ ವಿಷಯದಲ್ಲಿ ಶಿವಸೇನೆ ಇತ್ತೀಚೆಗೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗೂಡಿ ತನ್ನ ದೀರ್ಘಕಾಲದ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ತ್ಯಜಿಸಿ ಹೊರನಡೆದ ನಂತರ ಸರ್ಕಾರವನ್ನು ರಚಿಸಿತು.