ನವದೆಹಲಿ: ದೇಶದ ವೈದ್ಯಕೀಯ ವ್ಯವಸ್ಥೆ ರೋಗಗ್ರಸ್ಥಗೊಂಡಿದೆ ಎನ್ನುವುದಕ್ಕೆ ಮಧ್ಯಪ್ರದೇಶದಲ್ಲಿನ ಈ ಘಟನೆಯ ಸಾಕ್ಷಿ.


COMMERCIAL BREAK
SCROLL TO CONTINUE READING

ಗರ್ಭಿಣಿ ಹೆಂಗಸಿಗೆ ಅಂಬುಲನ್ಸ್ ನಿರಾಕರಿಸಿದ ಹಿನ್ನಲೆಯಲ್ಲಿ ಪ್ರಯಾಣಿಸುತ್ತಿರುವ ಬಸ್ಸಿನಲ್ಲೇ ಅಕೆಗೆ ಹೆರಿಗೆಯಾಗಿರುವ ಘಟನೆ ಮದ್ಯಪ್ರದೇಶದ ಚತ್ತರಪುರ್ ನಲ್ಲಿ ನಡೆದಿದೆ.ಕಮ್ಯುನಿಟಿ ಆಸ್ಪತ್ರೆಯೊಂದರಲ್ಲಿ ವೈದ್ಯರು ಗರ್ಭಿಣಿಗೆ ಚಿಕಿತ್ಸೆಗೆ ನಿರಾಕರಿಸಿ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ. ಆದರೆ ಆ ಮಹಿಳೆಯನ್ನು ಸಾಗಿಸಲು ಆಸ್ಪತ್ರೆಯು ಯಾವುದೇ ಸಾರಿಗೆ ವ್ಯವಸ್ಥೆಯನ್ನು ಸಹ ಮಾಡಿಲ್ಲ. ಬಸ್ ವೇಳೆ ಪ್ರಯಾಣಿಸುತ್ತಿದ್ದಾಗ ಈ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಬಸ್ಸಿನಲ್ಲೇ ಜನ್ಮ ನೀಡಿರುವ ಸಂಗತಿ ನಡೆದಿದೆ.


ಈ ಘಟನೆಯನ್ನು ವಿವರಿಸಿರುವ ಪತಿ" ನಾನು ಅವಳನ್ನು ಕಮ್ಯುನಿಟಿ ಅಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ಜಿಲ್ಲಾ ಆಸ್ಪತ್ರೆಗೆ ಶಿಪಾರಸು ಮಾಡಿದರು. ಅವರು ಯಾವುದೇ ವಾಹನ ನೀಡದಿರುವುದರಿಂದಾಗಿ ನಾನು ಬಸ್ ಅಲ್ಲೇ ಅವಳನ್ನು  ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಗುವಿಗೆ ಜನ್ಮ ನೀಡಿದ್ದಾಳೆ "ಎಂದು ವಿವರಿಸಿದ್ದಾರೆ. ಈ ಹಿಂದೆ  ಇದೆ ಮಾದರಿಯ ಘಟನೆ ಚತ್ತರಪುರ್ ನ ಜಸ್ಪುರ್ ಪ್ರದೇಶದಲ್ಲಿ ಮಂಗಳವಾರಂದು ನಡೆದಿತ್ತು. ಅಲ್ಲಿ ಗರ್ಭಿಣಿ ಮಹಿಳೆಯು ಯಾವುದೇ ರಸ್ತೆ ಮಾರ್ಗ ವೈದ್ಯಕೀಯ ಸೌಲಭ್ಯವಿರದಿದ್ದರಿಂದಾಗಿ ಅವಳು ಮಗುವಿಗೆ ಜನ್ಮ ನೀಡಿದ ತಕ್ಷಣ ಮಗು ಮೃತಪಟ್ಟಿತ್ತು.