ನವದೆಹಲಿ: ಮಧ್ಯಪ್ರದೇಶದ ಭೋಪಾಲ್ ನ ಅಯೋಧ್ಯಾ ನಗರದಲ್ಲಿರುವ ಖಾಸಗಿ ಶಾಲೆಯ ಮೂರು ವರ್ಷದ ವಿದ್ಯಾರ್ಥಿನಿಯು ಗುರುವಾರದಂದು ಶಾಲೆಯ ಬಸ್ ಕಂಡಕ್ಟರ್ನಿಂದ  ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಳೆ.


COMMERCIAL BREAK
SCROLL TO CONTINUE READING

ಕುಟುಂಬದವರು ಪ್ರಕರಣ ದಾಖಲಿಸಿದ್ದು ಮತ್ತು ವೈದ್ಯಕೀಯ ಪರೀಕ್ಷೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.ಆರೋಪಿಯನ್ನು ಬಂಧಿಸಲಾಗಿದ್ದು ಮತ್ತು ತನಿಖೆ ಪ್ರಸ್ತುತ ನಡೆಯುತ್ತಿದೆ ಎಂದು ಮುಖ್ಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಿಎಸ್ಪಿ) ಬಿತ್ತು ಶರ್ಮಾ ತಿಳಿಸಿದ್ದಾರೆ.


"ಆರೋಪಿ ಬಸ್ ವಾಹಕನನ್ನು ಬಂಧಿಸಲಾಗಿದೆ, ಮತ್ತಷ್ಟು ತನಿಖೆ ನಡೆಯುತ್ತಿದೆ" ಎಂದು ಶರ್ಮಾ ಹೇಳಿದರು. ಇನ್ನುಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.