ಭೋಪಾಲ್: ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿರುವ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಮಧ್ಯಾಹ್ನಾ 2ಗಂಟೆಗೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಬಳಿಕ ದೆಹಲಿಯ BJP ಮುಖ್ಯಾಲಯದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ JP ನಡ್ದಾ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇದೇ ವೇಳೆ ಗುರುವಾರ ಮಧ್ಯಾಹ್ನ 4ಗಂಟೆಗೆ  ಭೋಪಾಲ್ ಏರ್ಪೋರ್ಟ್ ತಲುಪಲಿರುವ ಜೋತಿರಾದಿತ್ಯ ಸಿಂಧಿಯಾ ಸಂಜೆ 4 ಗಂಟೆಗೆ BJP ಅಭ್ಯರ್ಥಿಯಾಗಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಜೋತಿರಾದಿತ್ಯ ಸಿಂಧಿಯಾ ಅವರನ್ನು BJP ಕೇಂದ್ರ ಸಚಿವ ಸಂಪುಟದಲ್ಲಿಯೂ ಕೂಡ ಸ್ಥಾನ ಕಲ್ಪಿಸುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ನಿನ್ನೆಯಷ್ಟೇ ಕಮಲ್ ನಾಥ್ ಸರ್ಕಾರದ 6 ಮಂತ್ರಿಗಳ ಸಮೇತ ಕಾಂಗ್ರೆಸ್ ಪಕ್ಷದ ಒಟ್ಟು 22 ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ಅವರ ರಾಜೀನಾಮೆ ಬಳಿಕ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಇದರಿಂದ ಕಮಲ್ ನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಜೋತಿರಾದಿತ್ಯ ಅವರ ರಾಜೀನಾಮೆ ಬಳಿಕ ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರು ಮಂತ್ರಿ ಮಂಡಲದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ  ಸ್ವತಂತ್ರ ಶಾಸಕರು ಸೇರಿದಂತೆ ಒಟ್ಟು 94 ಶಾಸಕರು ಭಾಗವಹಿಸಿದ್ದರು.


ಸಿಂಧಿಯಾ ಬೆಂಬಲಿಸಿರುವ ಶಾಸಕರಿಗೆ ಮಂತ್ರಿಯಾಗುವ ಅವಕಾಶ
ಮಧ್ಯ ಪ್ರದೇಶದಲ್ಲಿ ಬಹುಮತ ಸಾಬೀತುಪಡಿಸಲು ಒಟ್ಟು 104 ಶಾಸಕರ ಅಗತ್ಯವಿದೆ. 22 ಶಾಸಕರ ರಾಜೀನಾಮೆ ಬಳಿಕ ವಿಧಾನಸಭೆಯ ಒಟ್ಟು ಸಂಖ್ಯಾ ಬಲ 230 ರಿಂದ 206ಕ್ಕೆ ಬಂದು ತಲುಪಿದೆ. ಇನ್ನೊಂದೆಡೆ ಇಬ್ಬರು ಶಾಸಕರು ಮರಣಾ ನಂತರ ಅವರ ಸ್ಥಾನಗಳು ಖಾಲಿ ಉಳಿದಿವೆ. ಮೂಲಗಳ ಪ್ರಕಾರ ಸಿಂಧಿಯಾ ರಾಜೀನಾಮೆ ಬಳಿಕ ಪಕ್ಷಕ್ಕೆ ಗುಡ್ ಬೈ ಹೇಳಿರುವ ಶಾಸಕರ ಪೈಕಿ ಸುಮಾರು 5 ರಿಂದ 7 ಶಾಸಕರಿಗೆ ಮಧ್ಯಪ್ರದೇಶದ BJP ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಿವರಾಜ್ ಸಿಂಗ್ ಚೌಹಾನ್ ಮತ್ತೊಮ್ಮೆ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.


ಏತನ್ಮಧ್ಯೆ ಕುದುರೆ  ವ್ಯಾಪಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ BJP ತನ್ನ ಒಟ್ಟು 106 ಶಾಸಕರನ್ನು ಹರಿಯಾಣ ಹಾಗೂ ಮನೆಸರ್ ಗೆ ಕಳುಹಿಸಿದೆ ಎನ್ನಲಾಗಿದೆ. ಜೋತಿರಾದಿತ್ಯ ಸಿಂಧಿಯಾ ಬೆಂಬಲಿತ ಒಟ್ಟು 19 ಶಾಸಕರನ್ನು ಬೆಂಗಳೂರಿನಿಂದ ಭೋಪಾಲ್ ಗೆ ಕರೆತರುವ ಸಾಧ್ಯತೆಯನ್ನು ಸಹ ವರ್ತಿಸಲಾಗುತ್ತಿದೆ. ಮಾರ್ಚ್ 26ರಂದು ಮಧ್ಯಪ್ರದೇಶದಲ್ಲಿ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಗಳು ನಡೆಯಲಿವೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಮಧ್ಯೆ ಕಾಂಗ್ರೆಸ್ ಪಕ್ಷ ಕೂಡ ತನ್ನ ಉಳಿದ ಶಾಸಕರನ್ನು ಆಪರೇಶನ್ ಕಮಲ್ ದಿಂದ ರಕ್ಷಿಸಲು ಜೈಪುರ್ ಗೆ ಕಳುಹಿಸಿಕೊಟ್ಟಿದೆ.